Samantha: ಪದೇ ಪದೇ ವೈಯಕ್ತಿಕ ವಿಚಾರ ಸುದ್ದಿಯಾಗ್ತಿರೋದಕ್ಕೆ ಬೇಸರಗೊಂಡ್ರಾ ಸ್ಯಾಮ್​?

Naga Chaitanya: ಅವರ ಆಪ್ತ ಮೂಲದ ಪ್ರಕಾರ, ಸಮಂತಾ ತನ್ನ ಸಿನಿಮಾ ಜೀವನದಲ್ಲಿ ಬ್ಯುಸಿ ಇದ್ದು, ಅದಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹಾಗಾಗಿ ತನ್ನ ಪ್ರೇಕ್ಷಕರು ಮತ್ತು ಅಭಿಮಾನಿಗಳು ತನ್ನ ಕಲೆಯ ಬಗ್ಗೆ ಮಾತ್ರ ಮಾತನಾಡಬೇಕೆಂದು ಬಯಸುತ್ತಾರೆ

ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು

ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು

  • Share this:
ಕರಣ್ ಜೋಹರ್ (Karan Johar) ಅವರು ತಮ್ಮ ಕಾಫಿ ವಿತ್ ಕರಣ್ 7 (Koffee With Karan)  ಕಾರ್ಯಕ್ರಮದ ಮೂಲಕ ಆನ್‌ಲೈನ್‌ನಲ್ಲಿ (Online) ಸಾಕಷ್ಟು ಸಂಚಲನವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಈ  ಕಾರ್ಯಕ್ರಮದ ಹೈಲೆಟಿಂಗ್ ಎಪಿಸೋಡ್​ ಎಂದರೆ ಸಮಂತಾ ರುತ್ ಪ್ರಭು (Samantha) ಅವರು ಮೊದಲ ಬಾರಿ ಈ ಶೋನಲ್ಲಿ ಭಾಗವಹಿಸಿದ್ದು. ಆದರೆ ಈ ಶೋ ನಂತರ ಪುಷ್ಪಾ ನಟಿಯ ಮೇಲೆ ಅಭಿಮಾನಿಗಳು ಗರಂ ಆಗಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ಮಾಜಿ ಪತಿ ನಾಗ ಚೈತನ್ಯ ಮತ್ತು ಅವರ ನಡುವೆ ಇನ್ನೂ ಇರುವ ಕಠಿಣ ಭಾವನೆಗಳ ಬಗ್ಗೆ ಮಾತನಾಡಿರುವ ಕಾರಣ.

ಬೇಸರ ಮಾಡಿಕೊಂಡಿದ್ದಾರಂತೆ ನಟಿ

ಕರಣ್ ಜೋಹರ್ ಈ ಕಾರ್ಯಕ್ರಮದಲ್ಲಿ ನಿಮ್ಮಿಬ್ಬರ ನಡುವೆ ಇನ್ನೂ ಕೋಪ ಇದಿಯಾ ಎಂದು ಕೇಳಿದಾಗ, ನಮ್ಮಿಬ್ಬರನ್ನೂ ಒಂದು ರೂಂನಲ್ಲಿ ಬಿಟ್ಟರೆ, ಹರಿತವಾದ ವಸ್ತುಗಳನ್ನು ಬಚ್ಚಿಡಬೇಕು. ಆ ರೀತಿಯ ಭಾವನೆ ಇದೆ. ಸದ್ಯ ನಮ್ಮಿಬ್ಬರ ನಡುವೆ ಸೌಹಾರ್ದಯುತ ಪರಿಸ್ಥಿತಿ ಇಲ್ಲ ಎಂದಿದ್ದಾರೆ. ಆದರೆ ಈ ಹೇಳಿಕೆಯ ನಂತರ ಮತ್ತೆ ಚೈ ಮತ್ತು ಸ್ಯಾಮ್​ ಡೈವೋರ್ಸ್​ ವಿಚಾರ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದು ಸಮಂತಾ ಕೋಪಕ್ಕೆ ಕಾರಣವಾಗಿದೆ.

ಅವರ ಆಪ್ತ ಮೂಲದ ಪ್ರಕಾರ, ಸಮಂತಾ ತನ್ನ ಸಿನಿಮಾ ಜೀವನದಲ್ಲಿ ಬ್ಯುಸಿ ಇದ್ದು, ಅದಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹಾಗಾಗಿ ತನ್ನ ಪ್ರೇಕ್ಷಕರು ಮತ್ತು ಅಭಿಮಾನಿಗಳು ತನ್ನ ಕಲೆಯ ಬಗ್ಗೆ ಮಾತ್ರ ಮಾತನಾಡಬೇಕೆಂದು ಬಯಸುತ್ತಾರೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ಇಷ್ಟವಾಗುವುದಿಲ್ಲ. ಆದರೆ, ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರಗೊಂಡಿದ್ದಾರಂತೆ. ಅದರಲ್ಲೂ ಇತ್ತೀಚೆಗೆ ಆಕೆಯ ಬಗ್ಗೆ ಮತ್ತು ಆಕೆಯ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುವುದು ನಟಿಯ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಇದ್ಯಾವುದು ತನ್ನ ಕೆಲಸದ ಮೇಲೆ ಪರಿಣಾಮ ಬೀರದಂತೆ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ಸುದೀಪ್ ಹಿಂದಿ ಕಲಿತಿದ್ದು ಇವರಿಂದ ಅಂತೆ, ಅಜಯ್ ದೇವಗನ್ ಜೊತೆ ಟ್ವಿಟ್​ ವಾರ್​ ಬಗ್ಗೆ ಕಿಚ್ಚ ಹೇಳಿದ್ದೇನು?

ಇನ್ನು ಇತ್ತೀಚೆಗೆ ನಾಗ ಚೈತನ್ಯ ಅವರಿಗೆ ಕಾಫಿ ವಿತ್​ ಕರಣ್ ಶೋನಲ್ಲಿ ಭಾಗವಹಿಸುತ್ತಿದ್ದೀರಾ ಎಂದು ಕೇಳಿದಾಗ, ಅದಕ್ಕೆ ಅವರು, ಕಾಫಿ ವಿತ್ ಕರಣ್‌ನಲ್ಲಿ, ನನಗೆ ಅವಕಾಶ ಸಿಕ್ಕರೆ ಏಕೆ ಮಾಡಬಾರದು? ಕರಣ್ ಜೋಹರ್ ಅದ್ಭುತ ನಿರ್ದೇಶಕ ಹಾಗೂ ನಿರ್ಮಾಪಕ. ಅವರು ಮಾಡುವ ಕೆಲಸವನ್ನು ನಾನು ಇಷ್ಟಪಡುತ್ತೇನೆ. ಅವರು ನನ್ನ ಶೋಗೆ ಕರೆದರೆ ಏಕೆ ಹೋಗಬಾರದು. ಅಲ್ಲದೇ, ಅವರು ಮತ್ತು ಸ್ಯಾಮ್ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಾರೆಯೇ ಎಂದು ಅವರನ್ನು ಕೇಳಿದಾಗ.ಅದು ಸಾಧ್ಯವಾದರೆ ಅದು ಹುಚ್ಚುತನವಾಗಿರುತ್ತದೆ. ಆದರೆ ನನಗೆ ಗೊತ್ತಿಲ್ಲ, ದೇವರಿಗೆ ಮಾತ್ರ ಗೊತ್ತು ನೋಡೋಣ ಎಂದಿದ್ದಾರೆ.

ಇದನ್ನೂ ಓದಿ: ನಟ ಚಂದನ್ ಕುಮಾರ್​ ಹೇಳ್ತಿರೋದೆಲ್ಲಾ ಸುಳ್ಳಾ? ವಾಟ್ಸಪ್​ನಲ್ಲಿ ಹರಿದಾಡ್ತಿದೆ ಒಂದಿಷ್ಟು ಪ್ರಶ್ನೆಗಳು!

4 ವರ್ಷಗಳ ನಂತರ ಬೇರೆಯಾದ ನಟಿ

2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಈ ಜೋಡಿಯ ಮದುವೆಯಾಗಿತ್ತು.  ಈ ಜೋಡಿ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ ಅದೇ ಸಮಯದಲ್ಲಿ ಈ ಜೋಡಿ ಬೇರೆಯಾಗಿದೆ. ಅಧಿಕೃತವಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತುಂಬಾ ಯೋಚನೆ ಮಾಡಿ ನಾನು ಮತ್ತು ಚೈತನ್ಯ ನಮ್ಮದೇ ಆದ ದಾರಿಗಳಲ್ಲಿ ಸಾಗಲು ತೀರ್ಮಾನಿಸಿದ್ದೇವೆ. 10ಕ್ಕೂ ವರ್ಷಗಳ ನಮ್ಮ ಗೆಳೆತನ ನಂತರ ಮದುವೆ, ನಾವು ಪ್ರತ್ಯೇಕವಾದರೂ ಒಂದು ಅವಿನಾಭಾವ ಸಂಬಂಧ ಇದ್ದೇ ಇರುತ್ತೆ. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಜೊತೆಯಾಗಿರಿ ಎಂದು ಪೋಸ್ಟ್​ ಮಾಡಿದ್ದರು.
Published by:Sandhya M
First published: