ಸಮಂತಾ (Samantha) ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಟಾಕ್ ಆಫ್ ದಿ ಟೌನ್ (Talk of The Town) ಅಂದರೆ ತಪ್ಪಾಗುವುದಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಸಮಂತಾ ಸುದ್ದಿಯಾಗುತ್ತಿರುತ್ತಾರೆ. ಬಹುಭಾಷಾ ನಟಿ ಸಮಂತಾ ಇತ್ತೀಚೆಗಷ್ಟೆ, ನಟ ನಾಗ ಚೈತನ್ಯ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ್ದು, ಇದು ಅಭಿಮಾನಿಗಳಿ ಮನಸ್ಸಿಗೆ ಬಹಳ ನೋವುಂಟು ಮಾಡಿತ್ತು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ನಂತರ ಪುಷ್ಪ ಸಿನಿಮಾ ಮೈಚಳಿ ಬಿಟ್ಟು ಕುಣಿದು ಮತ್ತೆ ಸುದ್ದಿಯಾಗಿದ್ದರು ಬ್ಯೂಟಿ ಕ್ವೀನ್. ಡಿವೋರ್ಸ್ ಆದ ಬಳಿಕ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿ ಸಮಂತಾ ಬ್ಯುಸಿಯಾಗಿದ್ದಾರೆ. ಟಾಲಿವುಡ್, ಕಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ಅದರಲ್ಲೂ ಸಿಕ್ಕಾಪಟ್ಟೆ ಬೋಲ್ಡ್ ಅವತಾರಗಳಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ತುಂಡುಡೆಗೆ ತೊಟ್ಟು ಪಡ್ಡೆ ಹೈಕ್ಳ ಹಾರ್ಟ್ ಬೀಟ್ ಹೆಚ್ಚಿಸುತ್ತಿದ್ದಾರೆ.
ಬೆವರು ಸುರಿಸಿ ಬಾಲ್ಗೆ ಕಿಸ್ ಕೊಟ್ಟ ಸಮಂತಾ!
ನಟಿ ಸಮಂತಾ ಅವರು ಬರೀ ನೋಡಲಷ್ಟೇ ಚೆಂದುಳ್ಳಿ ಚೆಲುವೆಯಲ್ಲ, ಆಕೆ ಜಿಮ್ನಲ್ಲಿ ಭಾರ(Weight)ವನ್ನು ಎತ್ತುವುದರಲ್ಲೂ ನಿಸ್ಸೀಮರು ಎಂದು ಹೇಳಬಹುದು. ವೃತ್ತಿಪರ ರಂಗದಲ್ಲಿ ತನಗೆ ತಾನೇ ಸವಾಲು ಹಾಕಿಕೊಂಡು ಬೆಳೆಯುತ್ತಿರುವ ನಟಿ ತನ್ನ ಫಿಟ್ನೆಸ್(Fitness) ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಇದೀಗ ಇವರು ಜಿಮ್ನಲ್ಲಿ ಹೊಸದೊಂದು ವರ್ಕೌಟ್ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಷ್ಟ ಪಟ್ಟು ಬೆವರು ಸುರಿಸಿ ವರ್ಕೌಟ್ ಮಾಡಿ ಬಾಲ್ವೊಂದಕ್ಕೆ ಕಿಸ್ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಜಿಮ್ನಲ್ಲಿನ ಸಖತ್ ವರ್ಕೌಟ್ ಮಾಡುವ ಸಮಂತಾ, ಈ ಬಾರಿ ಡಿಫ್ರೆಂಟ್ ಆಗಿ ವರ್ಕೌಟ್ ಮಾಡಿದ್ದಾರೆ. ಈ ವಿಡಿಯೋ ಇದಿಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಬೆಂಚ್ವೊಂದರ ಮೇಲೆ ಬಾಲ್ವೊಂದನ್ನು ಇಟ್ಟು, ನಂತರ ಎರಡು ಕೈಗಳನ್ನು ಹಿಂದೆ ಕಟ್ಟಿಕೊಂಡು ಬೆಂಡ್ ಆಗಿ ಬಾಲ್ಗೆ ಮುತ್ತು ನೀಡಿದ್ದಾರೆ. ಈ ವಿಡಿಯೋ ಕಂಡ ಪಡ್ಡೆ ಹೈಕ್ಳು ಆ ಕಿಸ್ ನಮಗಾದ್ರೂ ಸಿಗಬಾರದಿತ್ತಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಸಮಂತಾ ಪಡ್ಡೆ ಹೈಕ್ಳ ಕಮೆಂಟ್ಗಳಿಗೆ ಯಾವ ರೀತಿ ಉತ್ತರ ಕೊಡುತ್ತಾರೆ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ: ಟ್ರೋಲಿಗರಿಗೆ ಸಮಂತಾ ತಿರುಗೇಟು! ನಟಿ ಉತ್ತರ ಕಂಡು ಕಾಮೆಂಡ್ ಡಿಲೀಟ್ ಮಾಡಿದ ಕಿಡಿಗೇಡಿ
ಟ್ರೋಲ್ ಮಾಡಿದವನಿಗೆ ಮಂಗಳರಾತಿ ಮಾಡಿದ ಸಮಂತಾ!
ಸಮಂತಾ ಟ್ರೋಲ್ ಮಾಡಿರುವ ವ್ಯಕ್ತಿಗೆ ಸರಿಯಾಗಿ ಮಂಗಳಾರತಿ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಆ ಒಂದು ಫೋಟೋ. ತ್ತೀಚೆಗೆ ಸಮಂತಾ ತಮ್ಮ ಸಾಕು ನಾಯಿ ಜೊತೆ ಇರುವ ಫೋಟೋವೊಂದನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಹಲವಾರು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕಿಡಿಗೇಡಿಯೊಬ್ಬ, ನಾಯಿ, ಬೆಕ್ಕಿನ ಜೊತೆಗೆ ಒಂಟಿಯಾಗಿ ಸಾಯಿ ಎಂದು ಕಾಮೆಂಟ್ ಮಾಡಿದ್ದು, ಇದು ಸಮಂತಾ ಮತ್ತು ಅವರ ಅಭಿಮಾನಿಗಳನ್ನು ಕೆರಳಿಸಿದೆ.
ಇದನ್ನೂ ಓದಿ: 'ಪ್ರಿನ್ಸ್' ಮಹೇಶ್ ಬಾಬು ಅವರ ಪುತ್ರಿಯ ಬೆಸ್ಟ್ ಫ್ರೆಂಡ್ ಇವರೇ ಅಂತೆ!
ಸಮಂತಾ ಈ ರೀತಿ ಬದುಕಲು ನಾನು ನನ್ನನ್ನು ಅದೃಷ್ಟವಂತೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಆ ಕಾಮೆಂಟ್ ಮಾಡಿದ ವ್ಯಕ್ತಿಗೆ ಅಭಿಮಾನಿಗಳು ಸರಿಯಾಗಿ ತರಾಟೆಗೆ ತೆಗೆದುಕೊಂಡು ಹೋಗಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ