• Home
  • »
  • News
  • »
  • entertainment
  • »
  • Samantha: ಫ್ಲೈಟ್​ ಲೇಟ್​ ಆಯ್ತು ಅಂತ ಸಮಂತಾ ಮಾಡಿದ್ದೇನು ಗೊತ್ತಾ? ವಿಡಿಯೋ ಸಿಕ್ಕಾಪಟ್ಟೆ ವೈರಲ್​!

Samantha: ಫ್ಲೈಟ್​ ಲೇಟ್​ ಆಯ್ತು ಅಂತ ಸಮಂತಾ ಮಾಡಿದ್ದೇನು ಗೊತ್ತಾ? ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ನಟಿ ಸಮಂತಾ

ನಟಿ ಸಮಂತಾ

ದೇವಿಶ್ರೀ ಪ್ರಸಾದ್(Devi Sri Prasad) ಟ್ಯೂನ್‌ಗೆ ಹೆಜ್ಜೆ ಹಾಕಿದ್ದ ಸಮಂತಾಗೆ ಥಿಯೇಟರ್‌ಗಳಲ್ಲಿ ಶಿಳ್ಳೆಗಳು ಬಿದ್ದಿದ್ದವು. ಮತ್ತೆ ಮತ್ತೆ ಈ ಹಾಡು ರಿಪೀಟ್​ ಮಾಡುವಂತೆ ಚಿತ್ರಮಂದಿರ(Theaters)ದಲ್ಲೇ ಪಡ್ಡೆ ಹೈಕ್ಳು ಗಲಾಟೆ ಮಾಡಿದ್ದರು. ಇದೀಗ ಅದೇ ರೀತಿಯ ಸ್ಟೆಪ್​ ಹಾಕಿ ಸಮಂತಾ ಎಲ್ಲರ ಗಮನ ಸೆಳೆದಿದ್ದಾರೆ.

ಮುಂದೆ ಓದಿ ...
  • Share this:

ತೆಲುಗಿನ ನಟಿ ಸಮಂತಾ ರುತ್ ಪ್ರಭು(Samantha Ruthu Prabhu) ಒಂದಲ್ಲ ಒಂದು ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುವ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರು ತಾವು ನಟಿಸುವ ಚಿತ್ರಗಳಿಂದ ಹಿಡಿದು, ಇವರು ಜಿಮ್(Gym) ನಲ್ಲಿ ತೂಕಗಳನ್ನು ಎತ್ತುವ ತಾಲೀಮುಗಳ ವರೆಗೆ ಯಾವುದಾದರೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ ಎಂದು ಹೇಳಬಹುದು.ಪುಷ್ಪ’(Pushpa) ಸಿನಿಮಾ ಹೆಚ್ಚು ಸೌಂಡ್​ ಮಾಡಿದ್ದೇ ‘ಊ ಅಂಟಾವಾ ಮಾವ...’ ಎಂಬ ಸಾಂಗ್​ನಿಂದ. ಈ ಚಿತ್ರದಲ್ಲಿ ಅಲ್ಲು ಅರ್ಜುನ್(Allu Arjun)​ ಅಭಿನಯಿಸಿದ್ದರೂ, ಈ ಹಾಡು ನೋಡಲೆಂದೇ ಅದೆಷ್ಟೋ ಮಂದಿ ಚಿತ್ರಮಂದಿರಕ್ಕೆ ತೆರಳಿದ್ದರು.ಅಲ್ಲು ಅರ್ಜುನ್ ಜೊತೆನೇ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದ ಸಮಂತಾ(Samantha) ಬಗ್ಗೆನೂ ಮೆಚ್ಚುಗೆ ಮಾತುಗಳು ವ್ಯಕ್ತವಾಗಿದ್ದವು.ದೇವಿಶ್ರೀ ಪ್ರಸಾದ್(Devi Sri Prasad) ಟ್ಯೂನ್‌ಗೆ ಹೆಜ್ಜೆ ಹಾಕಿದ್ದ ಸಮಂತಾಗೆ ಥಿಯೇಟರ್‌ಗಳಲ್ಲಿ ಶಿಳ್ಳೆಗಳು ಬಿದ್ದಿದ್ದವು. ಮತ್ತೆ ಮತ್ತೆ ಈ ಹಾಡು ರಿಪೀಟ್​ ಮಾಡುವಂತೆ ಚಿತ್ರಮಂದಿರ(Theaters)ದಲ್ಲೇ ಪಡ್ಡೆ ಹೈಕ್ಳು ಗಲಾಟೆ ಮಾಡಿದ್ದರು. ಇದೀಗ ಅದೇ ರೀತಿಯ ಸ್ಟೆಪ್​ ಹಾಕಿ ಸಮಂತಾ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಇದು ಯಾವ ಸಿನಿಮಾದಲ್ಲೂ ಅಲ್ಲ.


ಏರ್​​ಪೋರ್ಟ್​ನಲ್ಲಿ ಮಸ್ತ್​ ಡ್ಯಾನ್ಸ್​ ಮಾಡಿದ ಸಮಂತಾ!


ಸಮಂತಾ ಅದ್ಭುತ ಡ್ಯಾನ್ಸರ್​ ಅನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಅವರು ಏರ್​ಪೋರ್ಟ್​ನಲ್ಲಿ (Airport) ಸ್ಟೆಪ್​ ಹಾಕಿರೋ ಹೊಸ ವಿಡಿಯೋ​ ಸಖತ್​ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು ಫುಲ್​ ಥ್ರಿಲ್​ ಆಗಿದ್ದಾರೆ. ಸಮಂತಾ ಸಖತ್ತಾಗಿ ಡ್ಯಾನ್ಸ್​ ಮಾಡುತ್ತೀರ ಅಂತ ಕಮೆಂಟ್​ ಮಾಡುತ್ತಿದ್ದಾರೆ. ನಟಿ ಸಮಂತಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೀಗಾಗಿ ಶೂಟಿಂಗ್​ನಲ್ಲಿ ಭಾಗಿಯಾಗಲು ವಿಮಾನ ಏರುವುದು ಸಮಂತಾ ಅವರಿಗೆ ಕಾಮನ್​. ಆದರೆ, ಕೆಲವೊಂದು ಬಾರಿ ವಿಮಾನ ಬರುವುದು ತಡವಾಗುತ್ತೆ, ಹೀಗೆ ಮೊನ್ನೆ ವಿಮಾನ ಬರುವುದು ತಡವಾಗಿದೆ. ಹೀಗಾಗಿ ಸಮಂತಾ ಭರ್ಜರಿ ಡ್ಯಾನ್ಸ್​ ಮಾಡಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: `ಬೀಸ್ಟ್​’ ಬೀಟ್ಸ್​ಗೆ ದಳಪತಿ ಫ್ಯಾನ್ಸ್ ಫಿದಾ, `ಅರೇಬಿಕ್ ಕುತು’ ಸೂಪರ್​ ಸಾಂಗೂ ಬಾಸು ಅಂತಿದ್ದಾರೆ ಅಭಿಮಾನಿಗಳು!


‘ಬೀಸ್ಟ್​’ ಬೀಟ್ಸ್​ಗೆ ಭರ್ಜರಿ ಸ್ಟೆಪ್​ ಹಾಕಿದ ಸಮಂತಾ!


ದಳಪತಿ ವಿಜಯ್ ಅವರ ಮುಂಬರುವ ಆ್ಯಕ್ಷನ್-ಡ್ರಾಮಾ ‘ಬೀಸ್ಟ್’ ಚಿತ್ರದಲ್ಲಿರುವ ಮತ್ತು ಚಿತ್ರದ ಬಹು ನಿರೀಕ್ಷಿತ ಮೊದಲ ಸಿಂಗಲ್ ‘ಅರೇಬಿಕ್ ಕುತು’(Arabic Kuthu) ಎಂದು ಹೆಸರಿರುವ ಹಾಡನ್ನು ಫೆಬ್ರವರಿ 14ರಂದು ಚಿತ್ರದ ತಯಾರಕರು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಸಿಡ್ ಜೋನಿತಾ ಗಾಂಧಿ ಮತ್ತು ಅನಿರುದ್ಧ್ ರವಿಚಂದರ್ ಅವರು ಜಂಟಿಯಾಗಿ ಹಾಡಿದ್ದಾರೆ. ಹಾಡಿನ ಸಾಹಿತ್ಯವನ್ನು ನಟ ಶಿವಕಾರ್ತಿಕೇಯನ್‌ ಬರೆದಿದ್ದಾರೆ. ಇದೇ ಹಾಡಿಗೆ ಸಮಂತಾ ಸೊಂಟ ಬಳುಕಿಸಿದ್ದಾರೆ.


ಇದನ್ನೂ ಓದಿ: ಬಿಳಿ ಬಿಕಿನಿಯಲ್ಲಿ ಅನನ್ಯಾ ಸೌಂದರ್ಯ ಪ್ರದರ್ಶನ, ಫೋಟೋ ಕಂಡು ಪಡ್ಡೆ ಹೈಕ್ಳು ಸ್ಟನ್​!


ಪುಷ್ಪ ಪಾರ್ಟ್​ 2 ನಲ್ಲೂ ಮತ್ತೆ ಸಮಂತಾ ಐಟಂ ಸಾಂಗ್​?


ಪುಷ್ಪ ದಿ ರೈಸ್​ ಸಿನಿಮಾ ಈಗಾಗಲೇ ತೆರೆಕಂಡು ಭರ್ಜರಿ ಯಶಸ್ಸುಗಳಿಸಿದೆ. ಇದರ ಜೊತೆಗೆ ಪುಷ್ಪ 2ನೇ ಭಾಗ ಶೂಟಿಂಗ್​ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎರಡನೇ ಭಾಗಕ್ಕೆ ರಶ್ಮಿಕಾ ಮಂದಣ್ಣ 3 ಕೋಟಿ ಸಂಭಾವನೆ ಕೇಳಿ ಸುದ್ದಿಯಾಗಿದ್ದರು. ಇದೀಗ ಸಮಂತಾ ಅವರ ಮತ್ತೊಂದು ಐಟಂ ಸಾಂಗ್​ ಪುಷ್ಪ ಪಾರ್ಟ್​ 2 ನಲ್ಲಿ ಇರಬಹುದಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಚಿತ್ರದ ನಿರ್ದೇಶಕ ಸುಕುಮಾರ್​ ಅವರೇ ಉತ್ತರ ನೀಡಬೇಕಿದೆ.

Published by:Vasudeva M
First published: