Pushpa: ಗಣೇಶ್​ ಮಾಸ್ಟರ್​ ಭರ್ಜರಿ ಸ್ಟೆಪ್ಸ್​ ಕಂಡು ಸಮಂತಾ ಕೆನ್ನೆ ಕೆಂಪಾಗಿದ್ದೇಕೆ? ಸಖತ್​ ಕ್ಯೂಟ್​ ಇದೆ ವಿಡಿಯೋ!

ಈ ವೀಡಿಯೋವನ್ನು ಹಂಚಿಕೊಂಡ ಗಣೇಶ್ "ನನ್ನ ನೆಚ್ಚಿನ ಮತ್ತೊಂದು ಹಿಟ್, ಈ ಇಬ್ಬರು ನಟರ ಜೊತೆಗೆ ಸೆಟ್‌ನಲ್ಲಿ ಅತ್ಯಂತ ಮೋಜಿನ ಸಮಯವನ್ನು ಕಳೆದಿದ್ದೇನೆ" ಎಂದು ಶೀರ್ಷಿಕೆ ಸಹ ಬರೆದಿದ್ದಾರೆ.

ಗಣೇಶ್​ ಆಚಾರ್ಯ, ಅಲ್ಲು ಅರ್ಜುನ್​ , ಸಮಂತಾ

ಗಣೇಶ್​ ಆಚಾರ್ಯ, ಅಲ್ಲು ಅರ್ಜುನ್​ , ಸಮಂತಾ

  • Share this:
ದೇಶಾದ್ಯಂತ ತುಂಬಾನೇ ಸುದ್ದಿ ಮಾಡಿದ ಪುಷ್ಪಾ: ದಿ ರೈಸ್(Pushpa: The Rise) ಚಿತ್ರದಲ್ಲಿನ ಹಾಡು 'ಊ ಅಂಟಾವಾ' (Auntawa) ಚಿತ್ರದಷ್ಟೇ ದೊಡ್ಡ ಹಿಟ್ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ಐಟಂ ನಂಬರ್ ಹಾಡಿಗೆ (Item Number song) ಮಾದಕವಾಗಿ ಡ್ಯಾನ್ಸ್ ಮಾಡಿದ ನಟಿ ಸಮಂತಾ(Actress Samantha) ಅವರ ಡ್ಯಾನ್ಸ್ ಅನ್ನು ಮೆಚ್ಚದವರೇ ಇರಲಿಕ್ಕಿಲ್ಲ ಎಂದು ಹೇಳಬಹುದು. ಅದರಲ್ಲೂ ಪಡ್ಡೆ ಹುಡುಗರಂತೂ ಈ ಹಾಡನ್ನು ಯುಟ್ಯೂಬ್‌ನಲ್ಲಿ(Youtube) ನೋಡಿದ್ದೇ ನೋಡಿದ್ದು, ಈ ಹಾಡು ಈಗ ತುಂಬಾನೇ ಹಿಟ್ ಆಗಿದೆ.

ನೃತ್ಯ ಸಂಯೋಜಕರ ಕೊಡುಗೆ
ಈ ಹಾಡಿನ ಸಂಗೀತ ಎಷ್ಟು ಮಾದಕವಾಗಿದೆಯೋ, ಅಷ್ಟೇ ಮಾದಕತೆಯಿಂದ ಡ್ಯಾನ್ಸ್ ಮಾಡಿದ್ದಾರೆ ಈ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಹಾಡು ಇಷ್ಟೊಂದು ಜನಪ್ರಿಯವಾಗಲು ಇದರ ನೃತ್ಯ ಸಂಯೋಜಕರ ಕೊಡುಗೆ ತುಂಬಾನೇ ಇದೆ. ಹೌದು.. ತೆರೆಯ ಹಿಂದೆ ಚಿತ್ರೀಕರಣದ ಸಂದರ್ಭದಲ್ಲಿ ಈ ಹಾಡಿಗೆ ಹೆಜ್ಜೆಯನ್ನು ನಟ ಅಲ್ಲು ಅರ್ಜುನ್‌ಗೆ ಮತ್ತು ನಟಿ ಸಮಂತಾಗೆ ಹೇಳಿಕೊಡುತ್ತಿದ್ದ ಪರಿಯನ್ನು ನೀವು ಒಮ್ಮೆ ಈ ವಿಡಿಯೋದಲ್ಲಿ ನೋಡಿ, ಚಪ್ಪಾಳೆ ತಟ್ಟದೆ ಇರಲಾರಿರಿ.

ಈ ಹಾಡಿಗೆ ಡ್ಯಾನ್ಸ್ ಹೇಳಿ ಕೊಟ್ಟಂತಹ ಗಣೇಶ್ ಆಚಾರ್ಯ ಅವರ ಸ್ಟೆಪ್ಸ್ ಮತ್ತು ಮುಖದ ಹಾವ ಭಾವ ನೋಡಿ ನಟಿ ಸಮಂತಾ ಮತ್ತು ನಟ ಅಲ್ಲು ಅರ್ಜುನ್ ಸೆಟ್‌ನಲ್ಲಿ ತುಂಬಾನೇ ನಕ್ಕಿದ್ದು, ಈ ಸ್ಟೆಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: Samantha Ruth Prabhu: ಹೆಣ್ಣು ಮಕ್ಕಳನ್ನು ಹೆತ್ತ ಪೋಷಕರಿಗೆ ಸಮಂತಾ ನೀಡಿದ್ರು ಹೀಗೊಂದು ಸಂದೇಶ!

ಸಮಂತಾ ಚಪ್ಪಾಳೆ
ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ಮತ್ತು ಅಲ್ಲು ಅರ್ಜುನ್ ಗೆ ಅವರು ಮತ್ತು ಅವರ ನೃತ್ಯ ಸಂಯೋಜಕಿಯೊಬ್ಬರು ಈ ಹಾಡಿನ ಸ್ಟೆಪ್ಸ್ ಹೇಳಿ ಕೊಡುವ ಒಂದು ವಿಡಿಯೋವನ್ನು ಗಣೇಶ್ ಅವರು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಗಣೇಶ್ ಅವರು ನಟರಿಗೆ ಡ್ಯಾನ್ಸ್ ಸ್ಟೆಪ್ ಒಂದನ್ನು ತೋರಿಸಿದ ನಂತರ, ಸಮಂತಾ ಮತ್ತು ಅಲ್ಲು ಅರ್ಜುನ್ ಇಬ್ಬರು ನಗಲು ಪ್ರಾರಂಭಿಸಿದರು. ಸಮಂತಾ ಚಪ್ಪಾಳೆ ತಟ್ಟಿ ನಗುತ್ತಾ ತಿರುಗಾಡುತ್ತಿದ್ದಾಗ, ಅಲ್ಲು ಅರ್ಜುನ್ ಅವರು ಗಣೇಶ್‌ಗೆ "ಟೈಮಿಂಗ್" ಎಂದು ಹೇಳಿ ತಲೆ ಅಲ್ಲಾಡಿಸಿದನ್ನು ಇದರಲ್ಲಿ ನೋಡಬಹುದಾಗಿದೆ.

ವಿಡಿಯೋ ನೋಡಿ:




ಕಮಾಲ್ ವಾವ್ ಮಾಸ್ಟರ್
ಸಮಂತಾ ಕೂಡ ಅವರಿಗೆ "ಕಮಾಲ್ ವಾವ್ ಮಾಸ್ಟರ್" ಎಂದಿದ್ದು, ನಂತರ ಸಮಂತಾ ಮತ್ತು ಅಲ್ಲು ಅರ್ಜುನ್ ನೃತ್ಯ ಸಂಯೋಜಕ ಹೇಳಿಕೊಟ್ಟ ಸ್ಟೆಪ್ ಅನ್ನು ಅಭ್ಯಾಸ ಮಾಡುತ್ತಿರುವುದನ್ನು ಇಲ್ಲಿ ನೋಡಬಹುದಾಗಿದೆ. ಈ ತೆರೆಯ ಹಿಂದಿನ ವಿಡಿಯೋವನ್ನು ಈಗಾಗಲೇ 84,000ಕ್ಕೂ ಹೆಚ್ಚು ಜನರು ಇದನ್ನು ಇಷ್ಟ ಪಟ್ಟಿದ್ದಾರೆ. ಈ ವೀಡಿಯೋವನ್ನು ಹಂಚಿಕೊಂಡ ಗಣೇಶ್ "ನನ್ನ ನೆಚ್ಚಿನ ಮತ್ತೊಂದು ಹಿಟ್, ಈ ಇಬ್ಬರು ನಟರ ಜೊತೆಗೆ ಸೆಟ್‌ನಲ್ಲಿ ಅತ್ಯಂತ ಮೋಜಿನ ಸಮಯವನ್ನು ಕಳೆದಿದ್ದೇನೆ" ಎಂದು ಶೀರ್ಷಿಕೆ ಸಹ ಬರೆದಿದ್ದಾರೆ.

ಧನ್ಯವಾದ
‘ಊ ಅಂಟಾವಾ’ ಹಾಡಿನಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಮಂತಾ ತಮ್ಮ ವೃತ್ತಿ ಜೀವನದಲ್ಲಿ ಒಂದು ಚಿತ್ರಕ್ಕಾಗಿ ಐಟಂ ನಂಬರ್ ಹಾಡಿಗೆ ಮೊದಲ ಬಾರಿಗೆ ಕಾಣಿಸಿಕೊಂಡರು ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ಈ ಚಿತ್ರದ ಕಾರ್ಯಕ್ರಮವೊಂದರಲ್ಲಿ, ನಟ ಅಲ್ಲು ಅರ್ಜುನ್ ಅವರು ಸಮಂತಾಗೆ ಈ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಕ್ಕಾಗಿ ಧನ್ಯವಾದವನ್ನು ಅರ್ಪಿಸಿದ್ದರು. “ನಿಮಗೆ ಈ ಹಾಡು ಮಾಡುವಾಗ ಅನೇಕ ಸಂದೇಹಗಳಿದ್ದರೂ ಸಹ ನೀವು ಒಂದು ಪ್ರಶ್ನೆಯನ್ನೂ ಕೇಳದೆ ನನ್ನ ಮಾತಿಗೆ ಒಪ್ಪಿಗೆ ಸೂಚಿಸಿ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು” ಎಂದು ಹೇಳಿದರು.

ಇದನ್ನೂ ಓದಿ: Samantha: `ಫ್ಯಾಮಿಲಿ ಮ್ಯಾನ್​’ ನ್ಯೂ ಸೀರಿಸ್​ನಲ್ಲಿ ಸಮಂತಾ? ಮತ್ತಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಚೆಂದುಳ್ಳಿ ಚೆಲುವೆ!

ಅಲ್ಲು ಅರ್ಜುನ್ ಹೊರತು ಪಡಿಸಿ, ಪುಷ್ಪಾ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮತ್ತು ಸುನಿಲ್ ಕೂಡ ನಟಿಸಿದ್ದಾರೆ. ಮೂಲತಃ ತೆಲುಗಿನಲ್ಲಿ ಚಿತ್ರೀಕರಿಸಲಾದ ಈ ಚಿತ್ರವು ನಂತರ ಹಿಂದಿ, ಮಲಯಾಳಂ, ತಮಿಳು ಮತ್ತು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಈ ಚಿತ್ರವು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಅಲ್ಲು ಅರ್ಜುನ್ ಅವರ ಮೊದಲ ಚಲನಚಿತ್ರವಾಗಿದೆ.
Published by:vanithasanjevani vanithasanjevani
First published: