ಶಾಕುಂತಲಂ (Shaakuntalam) ಸಿನಿಮಾ (Ciname) ಬಿಡುಗಡೆಯ ನಿರೀಕ್ಷೆಯಲ್ಲಿರುವ ಸಮಂತಾ (Samantha) ಸಿನಿಮಾ ಪ್ರಮೋಷನ್ (Promotion) ಆರಂಭಿಸುವ ಮೊದಲು ಪ್ರಸಿದ್ಧ ದೇವಾಲಯಕ್ಕೆ ನಟಿ ಸಮಂತಾ ಭೇಟಿ ಕೊಟ್ಟಿದ್ದಾರೆ. ಸೌತ್ ಸ್ಟಾರ್ ನಟಿ ಸಮಂತಾ ರುಥ್ ಪ್ರಭು ಅವರು ಸುಂದರವಾದ ಸೀರೆ (Saree), ಗಾಜಿನ ಬಳೆಗಳನ್ನು ಪೆದ್ದಮ್ಮ ತಲ್ಲಿ (Peddamma Thalli) ದೇವಿಗೆ ಅರ್ಪಿಸಿದ್ದಾರೆ. ನಟಿ ದೇವಸ್ಥಾನಕ್ಕೆ (Temple) ಹೋಗುವ ವಿಡಿಯೋವನ್ನು (Videos) ಶೇರ್ ಮಾಡಿದ್ದಾರೆ. ಹೈದರಾಬಾದ್ನ (Hyderabad) ಪ್ರಸಿದ್ಧ ದೇವಸ್ಥಾನ ಪೆದ್ದಮ್ಮ ತಲ್ಲಿ ದೇವಾಲಯಕ್ಕೆ ನಟಿ ಭೇಟಿ ಕೊಟ್ಟು ದೇವರ ಆಶೀರ್ವಾದ (Blessing) ಪಡೆದಿದ್ದಾರೆ. ನಟಿ ವಿಡಿಯೋ ಶೇರ್ ಮಾಡಿ ಅಭಿಮಾನಿಗಳಿಗೆ (Fans) ಥ್ಯಾಂಕ್ಸ್ ಹೇಳಿದ್ದಾರೆ. ತಮ್ಮನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ನಾನು ನನ್ನ ಪ್ರತಿ ದಿನವನ್ನು ದೇವಿಯ ಪ್ರಾರ್ಥನೆಯೊಂದಿಗೆ ಆರಂಭಿಸುತ್ತೇನೆ. ನನ್ನ ಸಿನಿಮಾ ಶಾಕುಂತಲಂ ಸಿನಿಮಾ ಪ್ರಮೋಷನ್ ಕೂಡಾ ದೇವಿಯ ಪ್ರಾರ್ಥನೆಯೊಂದಿಗೆ ಶುರು ಮಾಡುತ್ತೇನೆ. ನೀವೆಲ್ಲರೂ ನನಗೆ ಬಹಳಷ್ಟು ಬೆಂಬಲ ಕೊಟ್ಟಿದ್ದೀರಿ. ಶಕ್ತಿಯನ್ನು ಕೊಟ್ಟಿದ್ದೀರಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಸಮಂತಾ ಕಾರಿನ ಒಳಗೆ ಕುಳಿತಿರುವಲ್ಲಿಂದ ವಿಡಿಯೋ ಆರಂಭವಾಗುತ್ತದೆ. ವಿಡಿಯೋದಲ್ಲಿ ನಟಿ ಸಹ ನಟ ದೇವ್ ಮೋಹನ್ ಅವರ ಜೊತೆ ದೇವಿಯ ದರ್ಶನ ಪಡೆಯುವುದನ್ನು ಕಾಣಬಹುದು. ನಟಿ ವೈಟ್ ಕುರ್ತಾ ಧರಿಸಿ ಸುಂದರವಾಗಿ ಕಾಣಿಸಿದ್ದಾರೆ. ದೇವ್ ಮೋಹನ್ ಕೂಡಾ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು.
View this post on Instagram
ಇದನ್ನೂ ಓದಿ: Samantha: ನಾಗ ಚೈತನ್ಯ ಒಳ್ಳೆ ಗಂಡ ಅಲ್ಲ, ಸಮಂತಾಗೆ ಟಾರ್ಚರ್ ಕೊಟ್ಟ, ಅಬಾರ್ಷನ್ ಆಯ್ತು! ಸಂಚಲನ ಮೂಡಿಸಿದೆ ಈತನ ಟ್ವೀಟ್!
ನಿರ್ದೇಶಕ ಗುಣಶೇಖರ್, ನಿರ್ಮಾಪಕ ದಿಲ್ ರಾಜು, ನೀಲಿಮಾ ಗುಣ ಅವರ ಜೊತೆಗಿನ ಫೋಟೋ ಶೇರ್ ಮಾಡಿದ ಸಮಂತಾ ಅವರು, ನಾನು ಇಂದು ಸಿನಿಮಾ ನೋಡಿದೆ. ಎಂಥಾ ಸುಂದರವಾದ ಸಿನಿಮಾ. ಸುಂದರವಾದ ಕಥೆಗೆ ಜೀವ ಬಂದಿದೆ. ಎಲ್ಲಾ ಮಕ್ಕಳೂ ನಮ್ಮ ಈ ಮ್ಯಾಜಿಕಲ್ ಜಗತ್ತನ್ನು ಇಷ್ಟಪಡುತ್ತೀರಿ ಎಂದಿದ್ದಾರೆ. ಶಾಕುಂತಲಂ ಎಂದಿಗೂ ನನಗೆ ಆಪ್ತವಾಗಿರುತ್ತದೆ ಎಂದು ಬರೆದಿದ್ದಾರೆ.
ಕಳೆದ ಹಲವಾರು ತಿಂಗಳುಗಳಲ್ಲಿ, ಸಮಂತಾ ರುತ್ ಪ್ರಭು ಮೈಯೋಸಿಟಿಸ್, ಸಮಸ್ಯೆ ಎದುರಿಸಿದ್ದಾರೆ. ಸಮಂತಾ ಇತ್ತೀಚೆಗೆ ತನ್ನ ನಂಬಿಕೆಯನ್ನು ಅವಲಂಬಿಸಿ ಈ ಕಷ್ಟಗಳನ್ನು ಹೇಗೆ ಎದುರಿಸಿದೆ ಎಂದು Instagram ನಲ್ಲಿ ಶೇರ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ, ನಟಿ ವಿಗ್ರಹದ ಮುಂದೆ ಧ್ಯಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ನಂಬಿಕೆಯು ಅವರು ಶಾಂತವಾಗಿರಲು ಹೇಗೆ ಸಹಾಯ ಮಾಡಿತು, ಅಮೂಲ್ಯವಾದ ಪಾಠಗಳನ್ನು ಕಲಿಸಿತು ಎಂದು ಹೇಳಿದ್ದಾರೆ.
ಕೆಲವೊಮ್ಮೆ ನಂಬಿಕೆಯು ಸಹಾಯ ಮಾಡುತ್ತದೆ. ನಂಬಿಕೆಯು ನಿಮ್ಮನ್ನು ಶಾಂತವಾಗಿರಿಸುತ್ತದೆ. ನಂಬಿಕೆಯು ನಿಮ್ಮ ಗುರು ಮತ್ತು ನಿಮ್ಮ ಸ್ನೇಹಿತರಾಗುತ್ತದೆ. ನಂಬಿಕೆಯು ನಿಮ್ಮನ್ನು ಅತಿಮಾನುಷನನ್ನಾಗಿ ಮಾಡುತ್ತದೆ ಎಂದಿದ್ದಾರೆ.
ಶಾಕುಂತಲಂ ಜೊತೆಗೆ ಸಮಂತಾ ರುತ್ ಪ್ರಭು ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಆಕ್ಷನ್-ಡ್ರಾಮಾ ಸಿಟಾಡೆಲ್‌ನ ಇಂಡಿಯನ್ ಸಿರೀಸ್ನಲ್ಲಿ ಪ್ರಮುಖ ಪಾತ್ರವನ್ನು ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ