Samantha ಬರೀ ಚೆಂದುಳ್ಳಿ ಚೆಲುವೆಯಲ್ಲ, ತುಂಬಾ ಶಕ್ತಿಶಾಲಿ ಕೂಡ! ಯಾಕೆ ಅಂತ ಈ ವಿಡಿಯೋ ನೋಡಿ...

ಟಿ ಸಮಂತಾ ಹಂಚಿಕೊಂಡ ಇತ್ತೀಚಿನ ವೀಡಿಯೋದಲ್ಲಿ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 80 ಕಿಲೋ ಗ್ರಾಂ ತೂಕವಿರುವ ಭಾರವನ್ನು ಲಿಫ್ಟ್(Weight Lift) ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವು ಇದರಲ್ಲಿ ನೋಡಬಹುದು.

ನಟಿ ಸಮಂತಾ

ನಟಿ ಸಮಂತಾ

  • Share this:

ತೆಲುಗಿನ ನಟಿ ಸಮಂತಾ ರುತ್ ಪ್ರಭು(Samantha Ruthu Prabhu) ಒಂದಲ್ಲ ಒಂದು ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುವ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರು ತಾವು ನಟಿಸುವ ಚಿತ್ರಗಳಿಂದ ಹಿಡಿದು, ಇವರು ಜಿಮ್(Gym) ನಲ್ಲಿ ತೂಕಗಳನ್ನು ಎತ್ತುವ ತಾಲೀಮುಗಳ ವರೆಗೆ ಯಾವುದಾದರೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ ಎಂದು ಹೇಳಬಹುದು.ನಟಿ ಸಮಂತಾ ಅವರು ಬರೀ ನೋಡಲಷ್ಟೇ ಚೆಂದುಳ್ಳಿ ಚೆಲುವೆಯಲ್ಲ, ಆಕೆ ಜಿಮ್‌ನಲ್ಲಿ ಭಾರ(Weight)ವನ್ನು ಎತ್ತುವುದರಲ್ಲೂ ನಿಸ್ಸೀಮರು ಎಂದು ಹೇಳಬಹುದು. ವೃತ್ತಿಪರ ರಂಗದಲ್ಲಿ ತನಗೆ ತಾನೇ ಸವಾಲು ಹಾಕಿಕೊಂಡು ಬೆಳೆಯುತ್ತಿರುವ ನಟಿ ತನ್ನ ಫಿಟ್ನೆಸ್(Fitness) ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ.ಇದೆಲ್ಲಾ ಈಗೇಕೆ ಮಾತಾಡುತ್ತಿದ್ದೇವೆ ಎಂದು ನಿಮಗೆ ಪ್ರಶ್ನೆಯೊಂದು ಕಾಡಬಹುದು. ನಟಿ ಸಮಂತಾ ಹಂಚಿಕೊಂಡ ಇತ್ತೀಚಿನ ವೀಡಿಯೋದಲ್ಲಿ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 80 ಕಿಲೋ ಗ್ರಾಂ ತೂಕವಿರುವ ಭಾರವನ್ನು ಲಿಫ್ಟ್(Weight Lift) ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವು ಇದರಲ್ಲಿ ನೋಡಬಹುದು.


80 ಕೆಜಿ ಡೆಡ್​ಲಿಫ್ಟ್​ ಮಾಡಿದ ನಟಿ ಸಮಂತಾ!

ಇವರು ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಜಿಮ್​ನಲ್ಲಿ ಅವರ ತರಬೇತುದಾರನು ನಟಿಗೆ ಭಾರ ಎತ್ತಲೂ ಹುರಿದುಂಬಿಸುತ್ತಿರುವುದನ್ನು ನಾವು ನೋಡಬಹುದು. ಸಮಂತಾ ಅವರು ಸಹ ಅದನ್ನು ಎತ್ತುವ ಕಡೆಗೆ ಸಂಪೂರ್ಣವಾಗಿ ಗಮನ ಹರಿಸಿರುವುದನ್ನು ನಾವು ನೋಡಬಹುದಾಗಿದೆ. ಈ ವೀಡಿಯೋ ತುಂಬಾನೇ ಸ್ಫೂರ್ತಿದಾಯಕವಾಗಿದೆ. ಸಮಂತಾ ಅವರ ಇನ್‌ಸ್ಟಾಗ್ರಾಮ್ ಫೀಡ್ ಅವರು ಜಿಮ್ ನಲ್ಲಿ ಮಾಡಿದ ಅನೇಕ ತಾಲೀಮುಗಳ ವೀಡಿಯೋಗಳಿಂದ ತುಂಬಿ ಹೋಗಿದೆ. ಇತ್ತೀಚೆಗೆ ನಟಿ ಹೆಚ್ಚಿನ ತೀವ್ರತೆಯ ತಾಲೀಮುಗಳನ್ನು ಮಾಡುತ್ತಿದ್ದಾರೆ ಎಂಬುದಂತೂ ಈ ವೀಡಿಯೋಗಳಿಂದ ನಮಗೆ ಅರ್ಥವಾಗುತ್ತದೆ.ಇದನ್ನು ಓದಿ: ಹೌದು, ನಾನು ಪ್ರೆಗ್ನೆಂಟ್​... ಹೀಗ್​ ಅಂದಿದ್ಯಾಕೆ ಸಮಂತಾ? ಇಲ್ಲಿದೆ ನೋಡಿ ಅಸಲಿ ಕಥೆ!

‘ಲೆವಲ್​ ಅಪ್​’ ಸವಾಲು ಅಭಿಯಾನ ಶುರು ಮಾಡಿದ ನಟಿ!

ಅವರು ಸಾಮಾಜಿಕ ಮಾಧ್ಯಮದಲ್ಲಿ 'ಲೆವೆಲ್ ಅಪ್' ಸವಾಲು ಎಂದು ಕರೆಯಲಾಗುವ ಹೊಸ ತಾಲೀಮು ಸವಾಲನ್ನು ಸಹ ಪ್ರಾರಂಭಿಸಿದರು. ಈ ಸವಾಲು ಜಿಮ್ ಉಪಕರಣಗಳನ್ನು ಬಳಸದೆ ಪ್ರತಿಯೊಬ್ಬರೂ ತಮ್ಮ ಕ್ಯಾಲೋರಿಗಳನ್ನು ಹೇಗೆ ಬರ್ನ್ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ವೀಡಿಯೋಗಳನ್ನು ಆಹ್ವಾನಿಸುತ್ತಿತ್ತು ಎಂದು ಹೇಳಬಹುದು.ಈ ಸವಾಲಿನ ಬಗ್ಗೆ ಅವರ ಪೋಸ್ಟ್ ಗಳನ್ನು ನೋಡಿದ ಹಲವಾರು ಅಭಿಮಾನಿಗಳು ಸಹ ಈ 'ಲೆವೆಲ್ ಅಪ್' ಸವಾಲನ್ನು ಪ್ರಯತ್ನಿಸುತ್ತಿರುವ ತಮ್ಮ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಫಿಟ್ನೆಸ್ ಸವಾಲಿನ ವ್ಯಾಪ್ತಿಯನ್ನು ಹೆಚ್ಚಿಸಲು ನಟಿ ಈ ಕ್ಲಿಪ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.


ಸಮಂತಾ ವರ್ಕೌಟ್​ ಸೆಲೆಬ್ರೆಟಿಗಳಿಗೂ ಸ್ಫೂರ್ತಿ!

ನಟಿ ಸಮಂತಾ ಅವರ ತಾಲೀಮು ವೀಡಿಯೋಗಳು ಬರೀ ಅಭಿಮಾನಿಗಳಲ್ಲಿ ಚರ್ಚೆಯಾಗುವ ವಿಷಯವಾಗಿ ಉಳಿದಿಲ್ಲ, ಬದಲಾಗಿ ಇತರ ಸಿನೆಮಾ ಸೆಲೆಬ್ರಿಟಿಗಳಲ್ಲೂ ಇದು ಚರ್ಚೆಯ ವಿಷಯವಾಗಿದೆ.ಬಾಲಿವುಡ್ ನಟಿ ಕೃತಿ ಸಾನನ್ ಸಮಂತಾ ಅವರ ಬಗ್ಗೆ ಒಂದು ಪೋಸ್ಟ್ ಬರೆದಿದ್ದಾರೆ, ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್ ಚಿತ್ರದಲ್ಲಿ ಅವರು ಐಟಂ ನಂಬರ್ ಹಾಡಿಗೆ ಮಾಡಿದ ಡ್ಯಾನ್ಸ್ ತುಂಬಾನೇ ಚೆನ್ನಾಗಿತ್ತು ಎಂದು ಶ್ಲಾಘಿಸಿದ್ದಾರೆ. ಸಮಂತಾ ಅವರು “ಈ ಹಾಡಿನಲ್ಲಿ ಡ್ಯಾನ್ಸ್ ಮಾಡಲು ನಾನು ಹಿಂಜರಿಯುತ್ತಿದ್ದೆ,ಆದರೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳಿ ನನಗೆ ನಟ ಅಲ್ಲು ಅರ್ಜುನ್ ಅವರು ಪ್ರೇರೇಪಿಸಿದರು” ಎಂದು ತಮ್ಮ ಅಭಿಮಾನಿಗಳಿಗೆ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.


ಇದನ್ನು ಓದಿ: ನೆಲಕಚ್ಚಿದ ರಚ್ಚು ಮೊದಲ ತೆಲುಗು ಚಿತ್ರ ‘ಸೂಪರ್​ ಮಚ್ಚಿ’.. ಒಂದು ರೂಪಾಯಿನೂ ಕಲೆಕ್ಷನ್​ ಮಾಡಿಲ್ವಂತೆ!

ನಟ ಅಲ್ಲು ಅರ್ಜುನ್ ಮತ್ತು ಸಮಂತಾ ಈ ಹಿಂದೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಯಶಸ್ವಿ ಚಿತ್ರ ಸನ್ ಆಫ್ ಸತ್ಯಮೂರ್ತಿಯಲ್ಲಿ ಒಟ್ಟಾಗಿ ಅಭಿನಯಿಸಿದ್ದರು. ತಮ್ಮ ಮುಂಬರುವ ಯೋಜನೆಗಳ ಬಗ್ಗೆ ಮಾತನಾಡಿದ ಸಮಂತಾ ಅವರು ವಿಘ್ನೇಶ್ ಶಿವನ್ ಅವರ ನಿರ್ದೇಶನದ ‘ಕಾತು ವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಲ್ಲಿ ನಟಿ ನಯನತಾರಾ ಮತ್ತು ವಿಜಯ್ ಸೇತುಪತಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
Published by:Vasudeva M
First published: