ತೆಲುಗಿನ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಸದಾ ಫಿಟ್ (Fit) ಆಗಿ ಮತ್ತು ಸುಂದರವಾಗಿ ಕಾಣಲು ಇಷ್ಟ ಪಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಹೀಗೆ ಫಿಟ್ ಆಗಿ ಕಾಣಲು ಈ ನಟಿ ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ ಎಂಬುದು ನಿಮಗೆ ಗೊತ್ತೇ? ಹೌದು, ಈ ನಟಿ ಕೆಳಗೆ ಹೇಳಲಾಗಿರುವ ಈ ಐದು ಚಟುವಟಿಕೆಗಳನ್ನು ತಪ್ಪದೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಎಲ್ಲಾ ಪಾತ್ರಕ್ಕೂ ಸರಿ ಹೊಂದುವ ಈ ನಟಿ ಅಭಿನಯಿಸುವ ಪ್ರತಿಯೊಂದು ಚಿತ್ರವೂ ಮತ್ತು ಅದರ ಯಶಸ್ಸಿನ ಹಿಂದೆ ತುಂಬಾನೇ ಕಠಿಣ ಶ್ರಮ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರ ದೇಹದ ಫಿಟ್ನೆಸ್ (Fitness) ಮತ್ತು ಸೌಂದರ್ಯ ಮತ್ತು ಪಾತ್ರಕ್ಕೆ ಸರಿ ಹೊಂದಲು ಮೊದಲೇ ಮಾಡಿಕೊಳ್ಳುವ ತಯಾರಿ ಎಲ್ಲವೂ ಯುವ ನಟಿಯರಿಗೆ ಮಾದರಿಯಾಗಿದೆ ಎಂದು ಹೇಳಬಹುದು.
ಸಮಂತಾ ಅವರ ಅಭಿಮಾನಿಯಾಗಿದ್ದವರಿಗೆ ಅವರ ದಿನಚರಿಯನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲವಿರುವುದು ಸಹಜ ಅಲ್ಲವೇ? ನಟಿಯ ಸೌಂದರ್ಯ ಮತ್ತು ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಇವರು ಮಾಡುವ ಆ ಐದು ವಿಷಯಗಳ ಬಗ್ಗೆ ನಿಮಗೆ ಹೇಳುತ್ತೇವೆ ಬನ್ನಿ.
1. ಕ್ಯಾಲೋರಿಗಳನ್ನು ಬರ್ನ್ ಮಾಡುವುದು ಮತ್ತು ಸ್ನಾಯುಗಳನ್ನು ಬಲಪಡಿಸಿಕೊಳ್ಳುವುದು:
ಫಿಟ್ನೆಸ್ ತರಬೇತಿಯ ವಿಷಯಕ್ಕೆ ಬಂದಾಗ, ನಟಿ ಸಮಂತಾ ತನ್ನ ತರಬೇತುದಾರನಿಗಿಂತಲೂ ಹೆಚ್ಚು ಕಷ್ಟಪಟ್ಟು ಜಿಮ್ ನಲ್ಲಿ ತಾಲೀಮು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ಹಾಕಿಕೊಂಡಿರುವ ಅವರ ಒಂದು ವೀಡಿಯೋದಲ್ಲಿ ಅವರು ಭಾರಿ ತೂಕವನ್ನು ಎತ್ತುತ್ತಿರುವುದನ್ನು ನಾವು ನೋಡಬಹುದು. ಹೀಗೆ ಅವರು ಜಿಮ್ ನಲ್ಲಿ ಕಠಿಣವಾದ ತಾಲೀಮು ಮಾಡುವುದರ ಮೂಲಕ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಾರೆ.
ಇದನ್ನೂ ಓದಿ: Priyanka Chopra: ಪ್ರಿಯಾಂಕಾಗೆ ನಿಕ್ ಜೋನಸ್ ಕೊಟ್ಟಿರುವ ಗಿಫ್ಟ್ ಏನು ಗೊತ್ತಾ? ತಿಳಿದ್ರೆ ನಿಮಗೂ ಖುಷಿ ಆಗುತ್ತೆ
ಈ ವೀಡಿಯೋಗೆ ನಟಿ ಸಮಂತಾ ಅವರು "ಬಲವಾದ ದೇಹ, ಬಲವಾದ ಮನಸ್ಸು.. ಒಟ್ಟಿನಲ್ಲಿ 2022-23 ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತೀ ದೊಡ್ಡ ಸವಾಲಿನ ಸಮಯವಾಗಲಿದೆ” ಎಂದು ಶೀರ್ಷಿಕೆಯನ್ನು ಸಹ ಬರೆದು ಕೊಂಡಿದ್ದಾರೆ.
2. ಸಾಹಸ ಮನೋಭಾವ:
ಸ್ಕೀಯಿಂಗ್ ನಲ್ಲಿ ನಟಿ ಸಮಂತಾ ಅವರು ಎಷ್ಟೇ ಬಾರಿ ಎಡವಿದರೂ ಸಹ ಅದನ್ನು ಬಿಡದೆ ಕಲಿತುಕೊಂಡು ಅದನ್ನು ಸರಾಗವಾಗಿ ಮಾಡಿ ಆನಂದಿಸಿದ್ದಾರೆ. ಇದರ ಒಂದು ವೀಡಿಯೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸಮಂತಾ ಪ್ರಭು ಗಾಜಿನ ಛಾವಣಿಗಳನ್ನು ಒಡೆಯಲು ಹೆದರುವುದಿಲ್ಲ. ಹೊರಾಂಗಣ ಮತ್ತು ಸಾಹಸ ಕ್ರೀಡೆಗಳು ಅವರನ್ನು ಇನ್ನಷ್ಟು ಬಲಶಾಲಿಯನ್ನಾಗಿ ಮಾಡುತ್ತವೆ.
View this post on Instagram
ನಟಿ ಸಮಂತಾಗೆ ತಮ್ಮ ಸೈಕಲ್ ಅನ್ನು ತಾವೇ ತುಳಿದುಕೊಂಡು ಹೊರಗೆ ಹೋಗುವುದು ತುಂಬಾನೇ ಇಷ್ಟವಾದ ದೈಹಿಕ ಚಟುವಟಿಕೆಯಾಗಿದೆ ಎಂದು ಹೇಳಬಹುದು.
ನಟಿ ಸಮಂತಾ ಅವರು ಖುದ್ದು ತಾವು ಪ್ರತಿದಿನ ಒಂಟಿ ಕೈಯಲ್ಲಿ ಪ್ಲ್ಯಾಂಕ್ಸ್ ಮಾಡುತ್ತಾರೆ ಮತ್ತು ಇತರರಿಗೆ ಇದನ್ನು ಮಾಡಿ ನೋಡೋಣ ಅಂತ ಸವಾಲು ಸಹ ಹಾಕುತ್ತಾರೆ. ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ "ನನ್ನ ಫಿಟ್ನೆಸ್ ಪ್ರಯಾಣದ ಅತ್ಯುತ್ತಮ ಭಾಗವೆಂದರೆ ಅದು ನನ್ನ ಜೀವನದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತಂದಿರುವ ಸಮತೋಲನವಾಗಿದೆ. ಈ ಪ್ರಯಾಣವು ನನಗೆ ತುಂಬಾನೇ ಕಲಿಸಿದೆ, ಅದಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ.
ಇದನ್ನೂ ಓದಿ: Samantha: ಅಕ್ಕಿನೇನಿ ಕುಟುಂಬಕ್ಕಾಗಿ ಸಮಂತಾ ತ್ಯಾಗ, ಬಾಲಿವುಡ್ ಕಿಂಗ್ ಖಾನ್ಗೆ ಶಾಕ್ ನೀಡಿದ ಬ್ಯೂಟಿ!
ಸ್ವಚ್ಛವಾದ, ಸಸ್ಯ ಆಧಾರಿತ ಪೋಷಣೆಯು ನಿಮ್ಮ ದೇಹವನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರವಾಗಿಸುತ್ತದೆ. ಫಿಟ್ನೆಸ್ ಎನ್ನುವುದು ಒಂದು ಗಮ್ಯಸ್ಥಾನವಲ್ಲ, ಇದು ಒಂದು ನಿಮ್ಮ ಉತ್ತಮ ಆವೃತ್ತಿಯ ಕಡೆಗೆ ನೀವು ಬೆಳೆಸುವ ಪ್ರಯಾಣ. ದೈಹಿಕ ಸ್ವಾಸ್ಥ್ಯದಷ್ಟೇ ಭಾವನಾತ್ಮಕ ಮತ್ತು ಮಾನಸಿಕ ಸ್ವಾಸ್ಥ್ಯವೂ ಮುಖ್ಯವಾಗಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ. ಯಾವಾಗಲೂ ನಿಮಗೆ ಸಂತೋಷವನ್ನುಂಟು ಮಾಡುವ ಕೆಲಸಗಳನ್ನು ಮಾಡಿ ಎಂದು ತಮ್ಮ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
5. ನಾಯಿಯೊಂದಿಗೆ ಆಟವಾಡಿ:
ಇಷ್ಟೇ ಅಲ್ಲದೆ ಇವರು ಪ್ರತಿದಿನ ತಪ್ಪದೆ ತಮ್ಮ ಮನೆಯಲ್ಲಿರುವ ನಾಯಿಯೊಂದಿಗೆ ಆಟವಾಡುವುದರ ಮೂಲಕ ಕ್ಯಾಲೋರಿಗಳನ್ನು ಬರ್ನ್ ಮಾಡಿಕೊಳ್ಳುತ್ತಾರೆ.
View this post on Instagram
ನಟಿಯ ಫಿಟ್ನೆಸ್ ಬಗ್ಗೆ ತಿಳಿದುಕೊಂಡ ನಂತರ ಇವರ ಹೊಳೆಯುವ ಚರ್ಮದ ಹಿಂದಿನ ರಹಸ್ಯವೇನು ಎಂದು ತಿಳಿದುಕೊಳ್ಳಿ.
- ಮುಖದ ಮೇಲೆ ಡಬಲ್ ಮಾಸ್ಕ್ ಹಾಕಿಕೊಳ್ಳುತ್ತಾರೆ.
- ಹಸಿರು ಸೊಪ್ಪನ್ನು ಸೇವಿಸುತ್ತಾರೆ.
- ಹೈಡ್ರೇಟ್ ಮತ್ತು ಮಾಯಿಶ್ಚರೈಸ್ ಮಾಡಿಕೊಳ್ಳಲು ವಾರಕ್ಕೆ ಎರಡು ಬಾರಿ ಚರ್ಮವನ್ನು ಸ್ಟೀಮ್ ಮಾಡಿಕೊಳ್ಳುತ್ತಾರೆ.
- ಮುಖದ ಮೇಲಿನ ಗೆರೆಗಳನ್ನು ಕಡಿಮೆ ಮಾಡಲು ವಿಟಮಿನ್ ಗಳಿರುವ ಆಹಾರವನ್ನು ಸೇವಿಸುತ್ತಾರೆ.
- ಕೆಲಸದಿಂದ ಬಿಡುವಿದ್ದಾಗ ಕನಿಷ್ಠ ಮೇಕಪ್ ಮಾಡಿಕೊಳ್ಳುವುದು ಮತ್ತು ಹೊಳೆಯುವ ಚರ್ಮಕ್ಕಾಗಿ ಯೋಗ ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ