Samantha: ಮತ್ತೆ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಸಮಂತಾ, ಫೋಟೋ ನೋಡಿ ಪಡ್ಡೆ ಹೈಕ್ಳು ಕ್ಲೀನ್​ ಬೋಲ್ಡ್​!

Samantha Ruth Prabhu: ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸಮಂತಾ ಫುಲ್ ಬ್ಯುಸಿ ಇದ್ದಾರೆ. ಈಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿದ್ದು, ಹುಡುಗರ ನಿದ್ದೆಗೆಡಿಸಿದ್ದಾರೆ.

ನಟಿ ಸಮಂತಾ

ನಟಿ ಸಮಂತಾ

  • Share this:
ಸಮಂತಾ ಪ್ರಭ್ರು (Samantha Prabhu) ಯಾವಾಗಲೂ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. ಅವರ ಸಿನಿಮಾದ (Film) ವಿಚಾರ ಒಂದೆಡೆಯಾದರೆ ಇನ್ನೊಂದೆಡೆ ಅವರನ್ನು ಟೀಕೆ ಮಾಡುವವರಿಗೆ ಖಡಕ್ ಉತ್ತರ ಕೊಟ್ಟು ಸುದ್ದಿಯಾಗುತ್ತಾರೆ. ಹಾಗೆಯೇ ಅವರು ಹಾಕುವ ಫೋಟೋಗಳು (Photo) ಕೂಡ ಸದ್ದು ಮಾಡುತ್ತದೆ. ಡೈವೋರ್ಸ್ ನಂತರ ಫುಲ್ ಆಕ್ಟೀವ್ ಆಗಿರುವ ಸಮಂತಾ ಆಗಾಗ ಹಾಟ್​ ಫೋಟೋಗಳನ್ನು ಹಾಕಿ ಅಭಿಮಾನಿಗಳಲ್ಲಿ (Fans)  ಕಿಚ್ಚು ಹತ್ತಿಸುತ್ತಾರೆ. ಈಗ ಸಹ ಸಮಂತಾ ತಮ್ಮ ಹಾಟ್​ ಫೋಟೋ ಮೂಲಕ ಸುದ್ದಿಯಲ್ಲಿದ್ದು, ಅಭಿಮಾನಿಗಳು ಮತ್ತೆ ಟ್ರೋಲ್ (troll) ಆಗಬಹುದು ಎನ್ನುತ್ತಿದ್ದಾರೆ.  

ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸಮಂತಾ ಫುಲ್ ಬ್ಯುಸಿ ಇದ್ದಾರೆ. ಈಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿದ್ದು, ಹುಡುಗರ ನಿದ್ದೆಗೆಡಿಸಿದ್ದಾರೆ. ಹೌದು, ಸಮಂತಾ ಹೊಸ ಲುಕ್​ನಲ್ಲಿ ಬಿಕಿನಿ ರೀತಿಯಾ ಬಟ್ಟೆಯಲ್ಲಿ ಫೋಟೋ ಶೇರ್​ ಮಾಡಿದ್ದು, ಸಾಮಾಜಿಕಾ ಜಾಲಾತಾಣದಲ್ಲಿ  ವೈರಲ್​ ಆಗುತ್ತಿದೆ.

ಬೋಲ್ಡ್​ ಫೋಟೋ ಹಾಕಿದ ಸುಂದರಿ

ಇನ್ನು ಸಮಂತಾ ಅವರು ವಿಚ್ಛೇದನ ಪಡೆದ ನಂತರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೊಸಹೊಸ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳುವ ಮೂಲಕ, ನಾನಾ ಕಡೆಗಳಲ್ಲಿ ಸುತ್ತಾಟ ಮಾಡುವ ಮೂಲಕ ತಮ್ಮ ಜೀವನದಲ್ಲಾದ ಕಹಿ ಘಟನೆಯನ್ನು ಮರೆಯಲು ಸಮಂತಾ ಪ್ರಯತ್ನಿಸುತ್ತಿದ್ದಾರೆ.
ಸಮಂತಾ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ, ಊಹೂ ಅಂತೀಯಾ ಮಾವ..’ ಹಾಡಿನಲ್ಲಿ ಸ್ಯಾಮ್​ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಸಾಂಗ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಈಗ ಫೋಟೋಗಳನ್ನು ಹಂಚಿಕೊಳ್ಳುವ ಮುಲಕ ಸುದ್ದಿ ಮಾಡುತ್ತಿದ್ದಾರೆ.  ಇನ್ನು ಸಮಂತಾ ಫೋಟೋಗಳು ವೈರಲ್​ ಆದ ರೀತಿಯೇ ಟ್ರೋಲ್​​ ಕೂಡ ಆಗುತ್ತದೆ. ಬಹಳಷ್ಟು ಬಾರಿ ಅವರಿಗೆ ವಿಚಿತ್ರ ಕಾಮೆಂಟ್ಗಳನ್ನು ಮಾಡುವ ಮೂಲಕ ಟ್ರೋಲ್​ ಮಾಡಿದ್ದರು.

ಹಾಗೆಯೇ ಸಮಂತಾ ಇದನೆಲ್ಲಾ ನೋಡಿ ಸುಮ್ಮನೇ ಕೂರುವವರಲ್ಲ. ಹಲವಾರು ಬಾರಿ ಟ್ರೋಲಿಗರಿಗೆ ತಿರುಗೇಟು ನೀಡಿ ಬಾಯಿ ಮುಚ್ಚಿಸಿದ್ದಾರೆ.  ಮೊನ್ನೆ ಕೂಡ ಸಮಂತಾ ಹಾಕಿದ್ದ ಫೋಟೋಗೆ ಕೆಟ್ಟದಾಗಿ ಕಾಮೆಂಟ್​ ಮಾಡಿದ್ದ ವ್ಯಕ್ತಿಗೆ ಸಮಂತಾ ಹಾಗೂ ಅವರ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ರಿಯಲ್ ಜೋಡಿಗಳ ಗೇಮ್​ ಶೋಗೆ ದಿನಗಣನೆ, ಯಾರೆಲ್ಲಾ ಈ ಬಾರಿ ಆಡ್ತಾರೆ? ಇಲ್ಲಿದೆ ಲಿಸ್ಟ್

ಇತ್ತೀಚೆಗೆ ಟ್ರೋಲ್​ಗೆ ತಿರುಗೇಟು ನೀಡಿದ್ದ ಸಮಂತಾ

ಇತ್ತೀಚೆಗೆ ಸಮಂತಾ ತಮ್ಮ ಸಾಕು ನಾಯಿ ಜೊತೆ ಇರುವ ಫೋಟೋವೊಂದನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಹಲವಾರು ಅಭಿಮಾನಿಗಳು ಕಾಮೆಂಟ್​ ಮಾಡಿದ್ದರು. ಇದಕ್ಕೆ ಕಿಡಿಗೇಡಿಯೊಬ್ಬ, ನಾಯಿ, ಬೆಕ್ಕಿನ ಜೊತೆಗೆ ಒಂಟಿಯಾಗಿ ಸಾಯಿ ಎಂದು ಕಾಮೆಂಟ್​ ಮಾಡಿದ್ದು, ಇದು ಸಮಂತಾ ಮತ್ತು ಅವರ ಅಭಿಮಾನಿಗಳನ್ನು ಕೆರಳಿಸಿದೆ. ಆ ಕಾಮೆಂಟ್​ ಗಮನಿಸಿದ ಸಮಂತಾ ಈ ರೀತಿ ಬದುಕಲು ನಾನು ನನ್ನನ್ನು ಅದೃಷ್ಟವಂತೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೇ ಆ ಕಾಮೆಂಟ್​ ಮಾಡಿದ ವ್ಯಕ್ತಿಗೆ ಅಭಿಮಾನಿಗಳು ಸರಿಯಾಗಿ ಕ್ಲಾಸ್​ ತೆಗೆದುಕೊಂಡು ಚಳಿ ಬಿಡಿಸಿದ್ದಾರೆ. ಸಮಂತಾ ಹಾಗು ಅವರ ಅಭಿಮಾನಿಗಳ ಉತ್ತರದಿಂದ ಕಂಗೆಟ್ಟ ಆ ಭೂಪ ತಾನು ಹಾಕಿರುವ ಕಾಮೆಂಟ್​ ಡಿಲೀಟ್​ ಮಾಡಿಕೊಂಡು ಹೋಗಿದ್ದಾನೆ. ಅದೇನೇ ಇರಲಿ ಸಮಂತಾ ಟ್ರೋಲಿಗರಿಗೆ ಯಾವಾಗಲೂ ಸರಿಯಾಗಿ ಉತ್ತರ ನೀಡುತ್ತಾರೆ ಎಂಬುದು ಸುಳ್ಳಲ್ಲ.

ಇದನ್ನೂ ಓದಿ: 4 ವರ್ಷದ ಹಿಂದಿನ ಪುನೀತ್ ಟ್ವೀಟ್​ ವೈರಲ್, ಇದು ನಿಜವಾಗಬಾರದಿತ್ತೇ ಎಂದು ಅಭಿಮಾನಿಗಳ ಕಣ್ಣೀರು

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಪುಷ್ಪಾ ನಂತರ ವಿಜಯ್ ಸೇತುಪತಿ ಜೊತೆ ಅಭಿನಯಿಸಿದ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿತ್ತು, ಈಗ ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರವನ್ನು ಒಪ್ಪಿಕೊಂಡಿದ್ದು, ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ.
Published by:Sandhya M
First published: