ಸಮಂತಾ (Samantha) ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಟಾಕ್ ಆಫ್ ದಿ ಟೌನ್ (Talk of The Town) ಅಂದರೆ ತಪ್ಪಾಗುವುದಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಸಮಂತಾ ಸುದ್ದಿಯಾಗುತ್ತಿರುತ್ತಾರೆ. ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದ ಸಮಂತಾ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದು ವೃತ್ತಿ ಜೀವನದತ್ತ ಗಮನಹರಿಸಿದ್ದಾರೆ. ಮದುವೆ ಬಳಿಕ ವಿಶೇಷ ಮಹಿಳಾ(Woman's) ಪ್ರಧಾನ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆ(Small Screen)ಯಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ತಮ್ಮನ್ನ ಬಹುಮುಖ ಪ್ರತಿಭೆ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಮೊನ್ನೆಯಷ್ಟೆ ಸಮಂತಾ ಮುಂಬೈ(Mumbai)ನಲ್ಲಿ ಎರಡು ಮನೆ ಫೈನಲ್ ಮಾಡಿದ್ದು, ಶೀಘ್ರದಲ್ಲೇ ಅಲ್ಲಿಗೆ ಶಿಫ್ಟ್ ಆಗುತ್ತಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಚಾರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದು ಸಮಂತಾ(Samantha) ಮತ್ತೆ ನಾಗಚೈತನ್ಯ(Naga Chaitanya) ಒಂದಾಗ್ತಾರೆ ಅನ್ನುವ ಗುಸುಗುಸು ಟಾಲಿವುಡ್(Tollywood) ಅಂಗಳಲ್ಲಿ ಹರಿದಾಡುತ್ತಿದೆ.
ತೆರೆ ಮೇಲೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ?
4 ವರ್ಷಗಳ ದಾಂಪತ್ಯ ಜೀವನಕ್ಕೆ ಸಮಂತಾ-ನಾಗಚೈತನ್ಯ ದೂರಾಗಿದ್ದಾರೆ. ಇದೀಗ ಇಬ್ಬರು ಮತ್ತೆ ಒಂದಾಗಲಿದ್ದಾರೆ. ಇಬ್ಬರು ತಮ್ಮ ವೈಯಕ್ತಿಕ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೆ, ಇತ್ತ ಟಾಲಿವುಡ್ನಲ್ಲಿ ಹೊಸ ವಿಚಾರವೊಂದು ಸಖತ್ ವೈರಲ್ ಆಗುತ್ತಿದೆ. ಕೆಲ ವರದಿಗಳ ಪ್ರಕಾರ ಸಮಂತಾ ಹಾಗೂ ನಾಗಚೈತನ್ಯ ಮತ್ತೆ ತೆರೆ ಮೇಲೆ ಒಟ್ಟಾಗಿ ನಟಿಸಲಿದ್ದಾರಂತೆ. ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಕೇಳಿ ಖುಷಿ ಆಗಿದ್ದಾರೆ. ಆದಷ್ಟು ಬೇಗ ಇವರ ಸಿನಿಮಾ ಬರಲಿ ಅಂತ ಕಾಯುತ್ತಿದ್ದಾರೆ.
ಇಬ್ಬರ ಕೈಲೂ ಸಾಲು ಸಾಲು ಸಿನಿಮಾಗಳು!
ಡಿವೋರ್ಸ್ ಆದ ಬಳಿಕ ಸಮಂತಾ ಮೊದಲಿಗಿಂತಲೂ ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಪುಷ್ಪ: ದಿ ರೈಸ್’ ಚಿತ್ರದ ಐಟಂ ಸಾಂಗ್ನಲ್ಲಿ ನಟಿ ಹೆಜ್ಜೆಹಾಕಿದ್ದರು. ಈ ಹಾಡಿನಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಹಲವಾರು ಸಿನಿಮಾಗಳಲ್ಲಿ ಸಮಂತಾ ಫುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ವೆಬ್ ಸೀರೀಸ್ನಲ್ಲಿ ನಟಿಸುತ್ತಿದ್ದಾರೆ. ಇಂಗ್ಲೀಷ್ ಚಿತ್ರವೊಂದರಲ್ಲೂ ಸಮಂತಾ ಬಣ್ಣಹಚ್ಚಲಿದ್ದಾರೆ. ಇನ್ನೂ ನಾಗಚೈತನ್ಯ ಕೂಡ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ನಾಗ ಚೈತನ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್ಗೆ ನಾಗಚೈತನ್ಯ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಟಾಲಿವುಡ್ನಲ್ಲಿ ಅವರು ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ರಾಕಿ ಭಾಯ್ ಎದುರು ತೊಡೆ ತಟ್ಟಿದ್ದ `ಬೀಸ್ಟ್’ಗೆ ಸಂಕಷ್ಟ! ಈ ದೇಶದಲ್ಲಿ ವಿಜಯ್ ಸಿನಿಮಾ ಬ್ಯಾನ್
ನಿಜಕ್ಕೂ ಒಂದಾಗ್ತಾರಾ ಸಮಂತಾ-ನಾಗಚೈತನ್ಯ?
ಇದರ ಜೊತೆಗೆ ಸಮಂತಾ ಹಾಗೂ ನಾಗ ಚೈತನ್ಯ ಮತ್ತೆ ಜತೆಯಾಗಿ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಟಾಲಿವುಡ್ನ ನಿರ್ದೇಶಕಿ ನಂದಿನಿ ರೆಡ್ಡಿ ಸಮಂತಾ ಹಾಗೂ ನಾಗ ಚೈತನ್ಯಗೆ ಅವರು ಆಪ್ತರು. ಈ ಹಿಂದೆ ನಂದಿನಿ ರೆಡ್ಡಿ ನಿರ್ದೇಶಿಸಿದ್ದ ‘ಓಹ್ ಬೇಬಿ’ ದೊಡ್ಡ ಹಿಟ್ ಆಗಿತ್ತು. ಅದರಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಆ ಟೈಮ್ನಲ್ಲೇ ನಾಗ ಚೈತನ್ಯ ಹಾಗೂ ಸಮಂತಾಗೆ ಕತೆಯೊಂದನ್ನು ನಂದಿನಿ ಹೇಳಿದ್ದರಂತೆ. ಹೊಸ ಕತೆಗೆ ಸಂಬಂಧಪಟ್ಟಂತೆ ಸಮಂತಾ ಹಾಗೂ ನಾಗ ಚೈತನ್ಯರನ್ನು ತೆರೆಯತ ಮೇಲೆ ಒಂದಾಗಿಸಲು ನಂದಿನಿ ರೆಡ್ಡಿ ಪ್ರಯತ್ನಿಸುತ್ತಿದ್ದಾರಂತೆ.
ಇದನ್ನೂ ಓದಿ: ಅವನಲ್ಲಿ.. ಅವಳಿಲ್ಲಿ... ಮಾತಿಲ್ಲ, ಲವ್ ಇಲ್ಲ! ಮೂರು ವರ್ಷ ಪ್ರೀತಿಸಿದ್ದ ಈ ಸ್ಟಾರ್ಸ್ ಈಗ ದೂರಾ ದೂರ!
ಆದರೆ, ಇದು ನಿಜಕ್ಕೂ ಸಾಧ್ಯವಿಲ್ಲ. ಸಮಂತಾ ಮತ್ತು ನಾಗಚೈನ್ಯ ನಿಜ ಸಿನಿಮಾ ಮಾಡುವುದಿಲ್ಲ. ಇದೆಲ್ಲಾ ಕೇವಲ ಉಹಾಪೋಹಾ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ