• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Salman-Samantha: ಸಲ್ಮಾನ್ ಖಾನ್​ ಜೊತೆ ಕೇಳಿ ಬಂತು ಸಮಂತಾ ಹೆಸರು, ಅರೇ... ಆ ಸಮಂತಾ ಅಲ್ಲ ರೀ... ಇವ್ರೇ ಬೇರೆ!

Salman-Samantha: ಸಲ್ಮಾನ್ ಖಾನ್​ ಜೊತೆ ಕೇಳಿ ಬಂತು ಸಮಂತಾ ಹೆಸರು, ಅರೇ... ಆ ಸಮಂತಾ ಅಲ್ಲ ರೀ... ಇವ್ರೇ ಬೇರೆ!

ಸಮಂತಾ, ಸಲ್ಮಾನ್​ ಖಾನ್​

ಸಮಂತಾ, ಸಲ್ಮಾನ್​ ಖಾನ್​

ಬಾಲಿವುಡ್(Bollywood) ನಟ ಸಲ್ಮಾನ್ ಅವರ ಹೊಸ ಗೆಳತಿ(New Girl Friend) ಸಮಂತಾ ಎಂದು ಹೇಳಲಾಗುತ್ತಿದೆಯಂತೆ. ಸಮಂತಾ ಇತ್ತೀಚೆಗೆ ಮಹಾರಾಷ್ಟ್ರ(Maharashtra)ದ ಮುಂಬೈ ಬಳಿಯ ಪನ್ವೆಲ್ ತೋಟದ ಮನೆಯಲ್ಲಿ ನಡೆದ ಸಲ್ಮಾನ್ ಖಾನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Share this:

ಕೆಲವು ತಿಂಗಳುಗಳ ಹಿಂದೆ ತಮ್ಮ ವೈವಾಹಿಕ ಜೀವನದಿಂದ ಹೊರ ಬಂದಿರುವ ತೆಲುಗಿನ ನಟಿ ಸಮಂತಾ(Samantha) ಅವರ ಹೆಸರು ಈಗ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್(Salman Khan) ಅವರೊಂದಿಗೆ ತಳುಕು ಹಾಕುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಇವರಿಬ್ಬರ ಬಗ್ಗೆ ಮಾತು ಜೋರಾಗಿಯೇ ಹರಿದಾಡುತ್ತಿದೆ. ಏನಪ್ಪಾ ಅದು ಅಂತೀರಾ? ನೀವು ಹಾಗೆ ಅಂದುಕೊಂಡರೆ ತಪ್ಪು, ಆ ಸಮಂತಾನೇ ಬೇರೆ.. ಈ ಸಮಂತಾನೇ ಬೇರೆ..ಬಾಲಿವುಡ್(Bollywood) ನಟ ಸಲ್ಮಾನ್ ಅವರ ಹೊಸ ಗೆಳತಿ(New Girl Friend) ಸಮಂತಾ ಎಂದು ಹೇಳಲಾಗುತ್ತಿದೆಯಂತೆ. ಸಮಂತಾ ಇತ್ತೀಚೆಗೆ ಮಹಾರಾಷ್ಟ್ರ(Maharashtra)ದ ಮುಂಬೈ ಬಳಿಯ ಪನ್ವೆಲ್ ತೋಟದ ಮನೆಯಲ್ಲಿ ನಡೆದ ಸಲ್ಮಾನ್ ಖಾನ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ಪಾರ್ಟಿ(Party)ಯಲ್ಲಿ ಸಲ್ಮಾನ್ ಜೊತೆ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಅಲ್ಲಿ ಹಾಜರಿದ್ದರು ಎಂದು ಹೇಳಲಾಗುತ್ತಿದೆ.


ಸಲ್ಮಾನ್​ ತುಂಬಾ ಒಳ್ಳೆಯ ವ್ಯಕ್ತಿ ಎಂದ ಸಮಂತಾ!


ಇತ್ತೀಚೆಗೆ ನಡೆದ ಒಂದು ಸಂದರ್ಶನವೊಂದರಲ್ಲಿ, ನಟಿ ಸಮಂತಾ ಸಲ್ಮಾನ್‌ ಅವರನ್ನು ಕುರಿತು "ತುಂಬಾ ಒಳ್ಳೆಯ ವ್ಯಕ್ತಿ" ಎಂದು ಹೇಳಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ 'ಏಕ್ ಥಾ ಟೈಗರ್' ತಾರೆಯೊಂದಿಗಿನ ಲಿಂಕ್ ಅಪ್ ವದಂತಿಗಳ ಬಗ್ಗೆ ಮೌನ ಮುರಿದು ಮಾತನಾಡಿದರು. ಸಲ್ಮಾನ್ ಅವರ 56ನೇ ಜನ್ಮದಿನದಂದು ಹಾಜರಾಗುವ ಬಗ್ಗೆಯೂ ಸಮಂತಾ ಮುಂಚೆಯೇ ಹೇಳಿದ್ದರಂತೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಮಂತಾ ‘ಜನರು ತುಂಬಾ ಮಾತನಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಜನರು ಯಾವುದರ ಬಗ್ಗೆಯೂ ಬಹಳಷ್ಟು ಹೇಳಬಹುದು ಎಂದು ನಾನು ಭಾವಿಸುತ್ತೇನೆ. ನಾನು ಸಲ್ಮಾನ್ ಅವರನ್ನು ಭೇಟಿಯಾದೆ ಮತ್ತು ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ: 2ನೇ ಬಾಯ್ ಫ್ರೆಂಡ್​ಗೆ ಮೊದಲು `I love You’ ಹೇಳಿದ್ದೇ ಶ್ರುತಿ ಹಾಸನ್​​ ಅಂತೆ!


ಹೃತಿಕ್​ ಅವರನ್ನು ಕೂಡ ಭೇಟಿಯಾಗಿದ್ದೇನೆ ಎಂದ ಸಮಂತಾ!


ಜನರು ಇದನ್ನೆಲ್ಲಾ ಹೇಗೆ ಕಲ್ಪನೆ ಮಾಡಿಕೊಳ್ಳುತ್ತಾರೆ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನನ್ನ ಪ್ರಕಾರ ನಾನು ಅವರನ್ನು ಭೇಟಿಯಾದೆ, ನಾನು ಹೃತಿಕ್ ಅವರನ್ನು ಸಹ ಭೇಟಿಯಾದೆ, ನನ್ನ ಮತ್ತು ಹೃತಿಕ್ ಬಗ್ಗೆ ಯಾರೂ ಏನು ಮಾತಾಡಿಲ್ಲ. ಆದ್ದರಿಂದ ಈ ರೀತಿಯ ಸುದ್ದಿಗಳು ಎಲ್ಲಿಂದ ಬರುತ್ತವೆ ಎಂದು ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ" ಎಂದು ಹೇಳಿದರು.ಕಳೆದ ತಿಂಗಳು, ಸಮಂತಾ ಮುಂಬೈಗೆ ಹೋದ ಸಂದರ್ಭದಲ್ಲಿ ನಟ ಹೃತಿಕ್ ರೋಷನ್ ಅವರನ್ನು ಭೇಟಿಯಾದ ಕೆಲವು ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡಿದ್ದರು.


ಇದನ್ನು ಓದಿ : ಬಾಲಿವುಡ್ `ಗ್ರೀಕ್ ಗಾಡ್’​ಗೆ 48ರ ಹರೆಯ..ಈ ವಯಸ್ಸಲ್ಲೂ ಹೃತಿಕ್​ ಸಖತ್​ ಫಿಟ್!


‘ನನಗೆ ಗೊತ್ತಿರುವ ಏಕೈಕ ಸೆಲೆಬ್ರಿಟಿ ಸಲ್ಮಾನ್ ಖಾನ್’


ಸಮಂತಾ ಶೇರ್​ ಮಾಡಿಕೊಂಡಿದ್ದ ಫೋಟೋಗಳನ್ನು ಅವರ ಅಭಿಮಾನಿಗಳು ತುಂಬಾ ಇಷ್ಟ ಪಟ್ಟಿದ್ದರು. ನಟಿ ಈ ಫೋಟೋಗಳನ್ನು ಹಂಚಿಕೊಂಡು ಅದಕ್ಕೆ "ಚಲನಚಿತ್ರ ಕುಟುಂಬದಿಂದ ಬಂದ, ಆ್ಯಕ್ಷನ್ ನಟನನ್ನು ಭೇಟಿಯಾಗಿರುವುದು ತುಂಬಾನೇ ಖುಷಿ ಕೊಟ್ಟಿತು" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದರು.ಸಲ್ಮಾನ್ ಹುಟ್ಟುಹಬ್ಬದ ಪಾರ್ಟಿಯ ಬಗ್ಗೆ ಮಾತನಾಡಿದ ಸಮಂತಾ "ನನಗೆ ಆ ಪಾರ್ಟಿಯಲ್ಲಿ ಯಾರು ಗೊತ್ತಿರಲಿಲ್ಲ, ನನಗೆ ಸಲ್ಮಾನ್ ಅವರ ಪರಿಚಯವಿತ್ತು ಅಷ್ಟೇ, ಅದಕ್ಕೂ ಮೊದಲು ನಾನು ಅವರನ್ನು ಒಂದೆರಡು ಬಾರಿ ಭೇಟಿಯಾಗಿದ್ದೆ. ನನಗೆ ಗೊತ್ತಿರುವ ಏಕೈಕ ಸೆಲೆಬ್ರಿಟಿ ಅವರು” ಎಂದು ಹೇಳಿದರು.ಒಟ್ಟಿನಲ್ಲಿ ಹೇಳುವುದಾದರೆ ಸಲ್ಮಾನ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ನಾನು ಒಳ್ಳೆಯ ಜನರೊಂದಿಗೆ ಕೆಲ ಸಮಯವನ್ನು ಕಳೆಯುವ ಅವಕಾಶ ನನಗೆ ಸಿಕ್ಕಿತು ಎಂದು ಸಮಂತಾ ಹೇಳಿದರು.

top videos
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು