ಅಲ್ಲು ಅರ್ಜುನ್(Allu Arjun) ಅಭಿನಯದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.ಪುಷ್ಪ’(Pushpa) ಸಿನಿಮಾ ಹೆಚ್ಚು ಸೌಂಡ್ ಮಾಡಿದ್ದೇ ‘ಊ ಅಂಟಾವಾ ಮಾವ...’ ಎಂಬ ಸಾಂಗ್ನಿಂದ. ಈ ಚಿತ್ರದಲ್ಲಿ ಅಲ್ಲು ಅರ್ಜುನ್(Allu Arjun) ಅಭಿನಯಿಸಿದ್ದರೂ, ಈ ಹಾಡು ನೋಡಲೆಂದೇ ಅದೆಷ್ಟೋ ಮಂದಿ ಚಿತ್ರಮಂದಿರಕ್ಕೆ ತೆರಳಿದ್ದರು. ಅಲ್ಲು ಅರ್ಜುನ್ ಜೊತೆನೇ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದ ಸಮಂತಾ(Samantha) ಬಗ್ಗೆನೂ ಮೆಚ್ಚುಗೆ ಮಾತುಗಳು ವ್ಯಕ್ತವಾಗಿದ್ದವು. ದೇವಿಶ್ರೀ ಪ್ರಸಾದ್(Devi Sri Prasad) ಟ್ಯೂನ್ಗೆ ಹೆಜ್ಜೆ ಹಾಕಿದ್ದ ಸಮಂತಾಗೆ ಥಿಯೇಟರ್ಗಳಲ್ಲಿ ಶಿಳ್ಳೆಗಳು ಬಿದ್ದಿದ್ದವು. ಮತ್ತೆ ಮತ್ತೆ ಈ ಹಾಡು ರಿಪೀಟ್ ಮಾಡುವಂತೆ ಚಿತ್ರಮಂದಿರ(Theaters)ದಲ್ಲೇ ಪಡ್ಡೆ ಹೈಕ್ಳು ಗಲಾಟೆ ಮಾಡಿದ್ದರು.ಸಿನಿಮಾ ರಿಲೀಸ್ ಆದ ದಿನ ಸಮಂತಾ ಹೆಸರಲ್ಲಿ ದೇವರಿಗೆ ಹಾಲಿನ ಅಭಿಷೇಕ ಸಹ ಕೊಟ್ಟಿದ್ದರು.ಥಿಯೇಟರ್ನಲ್ಲಿ ಸಮಂತಾ 'ಊ ಅಂಟಾವಾ, ಊಹೂಂ ಅಂಟಾವಾ' ಅಂತ ಹೆಜ್ಜೆ ಹಾಕುತ್ತಾ ತೆರೆಮೇಲೆ ಬರುತ್ತಿದ್ದಂತೆ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದಿದ್ದರು. ಇವಾಗ ಹೊಸ ವಿಷಯ ಏನು ಅಂದರೆ, ಸಮಂತಾ ಈ ಹಾಡಿಗೆ ಒಂದೂವರೆ ಕೋಟಿ ಪಡೆದಿದ್ದರು ಅಂತ ಹೇಳಲಾಗಿತ್ತು. ಆದರೆ, ಅದಕ್ಕೂ ಹೆಚ್ಚಿನ ಸಂಭಾವನೆಯನ್ನು ಸಮಂತಾ ಪಡೆದುಕೊಂಡಿದ್ದಾರೆ.
5 ಕೋಟಿ ಸಂಭಾವಣೆ ಪಡೆದಿದ್ದಾರಂತೆ ಸಮಂತಾ!
ಪುಷ್ಪ ಸಿನಿಮಾ ಹಿಟ್ ಆಗಲು ಸಮಂತಾ ಅವರ ಐಟಂ ಸಾಂಗ್ ಕೂಡ ಒಂದು ಕಾರಣ. ಡಿವೋರ್ಸ್ ಬಳಿಕ ಸಮಂತಾ ಅವರು ಸಿನಿಮಾಗಳ ಆಯ್ಕೆಯಲ್ಲಿ ತಮ್ಮ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು. ಹೆಚ್ಚು ಹೆಚ್ಚು ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಆದರೂ ಕೂಡ ‘ಊ ಅಂಟಾವಾ...ಹಾಡಿನಲ್ಲಿ ನರ್ತಿಸಲು ಅವರು ಆರಂಭದಲ್ಲಿ ಒಪ್ಪಿರಲಿಲ್ಲ. ಕಡೆಗೆ ‘ಪುಷ್ಪ’ ಸಿನಿಮಾ ನಾಯಕ ಅಲ್ಲು ಅರ್ಜುನ್ ಅವರೇ ಸ್ವತಃ ಮಾತನಾಡಿದ ಬಳಿಕ ಸಮಂತಾ ಒಪ್ಪಿಕೊಂಡರಂತೆ. 5 ಕೋಟಿ ಸಂಭಾವನೆ ಪಡೆದುಕೊಂಡು ಮೊದಲ ಬಾರಿಗೆ ಸಮಂತಾ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡರು. ಸಮಂತಾ ಬರೋಬ್ಬರಿ 5 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡದ ಯಾರೋಬ್ಬರೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ
ಇದನ್ನು ಓದಿ : ಪಾಪ.. `ಊ ಅಂಟವಾ ಮಾವ..’ ಅನ್ನೋಕೆ ಎಷ್ಟು ಕಷ್ಟ ಪಟ್ಟಿದ್ರು ಸಮಂತಾ.. ನೀವೇ ನೋಡಿ..!
ಪುಷ್ಪ ಪಾರ್ಟ್ 2 ನಲ್ಲೂ ಮತ್ತೆ ಸಮಂತಾ ಐಟಂ ಸಾಂಗ್?
ಪುಷ್ಪ ದಿ ರೈಸ್ ಸಿನಿಮಾ ಈಗಾಗಲೇ ತೆರೆಕಂಡು ಭರ್ಜರಿ ಯಶಸ್ಸುಗಳಿಸಿದೆ. ಇದರ ಜೊತೆಗೆ ಪುಷ್ಪ 2ನೇ ಭಾಗ ಶೂಟಿಂಗ್ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎರಡನೇ ಭಾಗಕ್ಕೆ ರಶ್ಮಿಕಾ ಮಂದಣ್ಣ 3 ಕೋಟಿ ಸಂಭಾವನೆ ಕೇಳಿ ಸುದ್ದಿಯಾಗಿದ್ದರು. ಇದೀಗ ಸಮಂತಾ ಅವರ ಮತ್ತೊಂದು ಐಟಂ ಸಾಂಗ್ ಪುಷ್ಪ ಪಾರ್ಟ್ 2 ನಲ್ಲಿ ಇರಬಹುದಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಚಿತ್ರದ ನಿರ್ದೇಶಕ ಸುಕುಮಾರ್ ಅವರೇ ಉತ್ತರ ನೀಡಬೇಕಿದೆ.
ಇದನ್ನು ಓದಿ : ಹಳ್ಳಿಗಳಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬ ಮಾಡಿಲ್ಲ.. ಅಪ್ಪು ಅಭಿಮಾನದ ಕ್ರಾಂತಿ ಸೃಷ್ಠಿ ಮಾಡವ್ರೆ!
ಐಟಂ ಹಾಡಿಗೆ ಎಷ್ಟು ಪ್ರೀಪೆರ್ ಆಗಿದ್ರು ಗೊತ್ತಾ ಸಮಂತಾ!
'ಊ ಅಂಟಾವಾ, ಊಹೂಂ ಅಂಟಾವಾ' ಸಿನಿಮಾದ ಹಾಡು ಹಿಟ್ ಆಗಿದ್ದರ ಕ್ರೆಡಿಟ್ ಪೂರ್ತಿ ಸಮಂತಾ ಅವರಿಗೆ ಸೇರಬೇಕು. ಅವರ ಶ್ರಮದಿಂದಲೇ ಯೂಟ್ಯೂಬ್ನಲ್ಲೂ ಈ ಹಾಡು ನಂಬರ್ ಒನ್ ಪಟ್ಟ ಪಡೆದುಕೊಂಡಿದೆ. ಪುಷ್ಪದ ಹಾಡಿಗೆ ಹೆಜ್ಜೆ ಹಾಕುವ ಮುನ್ನ ಸಮಂತಾ ಸಾಕಷ್ಟು ಬಾರಿ ರಿಹರ್ಸಲ್ ಮಾಡಿದ್ದರು. ಜಿಮ್ನಲ್ಲಿ ದೇಹ ದಣಿಸಿದ್ದರು. ದೇವಿಶ್ರೀ ಪ್ರಸಾದ್ ಹಾಕಿದ್ದ ಟ್ಯೂನ್ಗೆ ತಕ್ಕಂತೆ ಹೆಜ್ಜೆ ಹಾಕಿದ್ದರು. ಮಿರರ್ ಮುಂದೆ ರಾಗಕ್ಕೆ ತಕ್ಕಂತೆ ಹೆಜ್ಜೆ. ಹೆಜ್ಜೆಗೆ ತಕ್ಕಂತೆ ಎಕ್ಸ್ಪ್ರೆಷನ್ ನೀಡುವುದನ್ನು ಅಭ್ಯಾಸ ಮಾಡಿದ್ದರು. ಈ ಎಲ್ಲ ವಿಡಿಯೋವನ್ನು ಸಮಂತಾ ಇದೀಗ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ