ಕಾಫಿ ವಿತ್ ಕರಣ್ (Koffee With Karan) ಈ ಶೋ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಸೆಲೆಬ್ರಿಟಿಗಳನ್ನು ಇಂಟರ್ವ್ಯೂ ಮಾಡುವ ಈ ವಿಭಿನ್ನ ಕಾರ್ಯಕ್ರಮ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಬಾಲಿವುಡ್ (Bollywood) ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ (Karan Johar) ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಕೆಲ ವರ್ಷಗಳ ಕಾಲ ಈ ಶೋ ಬಂದ್ ಆಗಿತ್ತು. 6 ಸೀಸನ್ ಆಗಿದ್ದು, ಈಗ 7 ನೇ ಶೋ ಆರಂಭವಾಗುತ್ತಿದೆ. ಈ ಸುದ್ದಿ ಹೊರ ಬಂದಾಗಿನಿಂದಲೂ ಯಾರೆಲ್ಲಾ ಗೆಸ್ಟ್ ಆಗಿ ಬರಲಿದ್ದಾರೆ ಎನ್ನುವ ಕುರಿತು ಬಹಳಷ್ಟು ಚರ್ಚೆಗಳು ಆಗುತ್ತಿವೆ. ನಮ್ಮ ಸೌತ್ ಸುಂದರಿ ಸಮಂತಾ ಈಗಾಗಲೇ ಅದರ ಶೂಟಿಂಗ್ ಮುಗಿಸಿದ್ದಾರೆ ಎನ್ನಲಾಗುತ್ತಿತ್ತು, ಆದರೆ ಇದೀಗ ಹೊಸ ಸುದ್ದಿಯೊಂದು ಹೊಸ ಬಂದಿದೆ.
ಸಮಂತಾ ಶೂಟಿಂಗ್ ಮಾಡಿಲ್ವಂತೆ
ಸದ್ಯ ಸಮಂತಾ ಮೇಲೆ ಸಿನಿರಂಗದ ಕಣ್ಣಿದೆ. ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಕೂಡ ಸಮಂತಾ ಮೇಲೆ ಕಣ್ಣು ಹಾಕಿದ್ದು, ಮುಂದಿನ ಸಿನಿಮಾಗೆ ಅವಖಾಶ ನೀಡುವ ಆಲೋಚನೆಯಲ್ಲಿದ್ದಾರೆ. ಡೈವೋರ್ಸ್ ನಂತರ ಫುಲ್ ಆಕ್ಟೀವ್ ಆಗಿರುವ ಸಮಂತಾ ಎಲ್ಲೆಡೆ ಸುದ್ದಿ ಮಾಡುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಮೂಲಕ ಬಾಲಿವುಡ್ನಲ್ಲಿ ಹೆಸರು ಮಾಡಿರುವ ಸ್ಯಾಮ್, ಕಾಫಿ ವಿತ್ ಕರಣ್ ಶೋದಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿತ್ತು, ಆದರೆ ಸದ್ಯದ ಮಾಹಿತಿ ಪ್ರಕಾರ ಸ್ಯಾಮ್ ಯಾವುದೇ ಶೂಟಿಂಗ್ನಲ್ಲೂ ಪಾಲ್ಗೊಂಡಿಲ್ಲವಂತೆ.
ಹೌದು, ಈ ಮೊದಲು ಕಾಫಿ ವಿತ್ ಕರಣ್ ಮೊದಲ ಎಪಿಸೋಡ್ ಸಮಂತಾ ಅವರಿಂದಲೇ ಆರಂಭವಾಗುತ್ತದೆ ಎನ್ನಲಾಗಿತ್ತು. ಆದರೆ ಈಗ ನೋಡಿದರೇ ಸಮಂತಾ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂಬುದು ತಿಳಿದು ಬಂದಿದೆ. ಈ ಕಾರ್ಯಕ್ರಮದ ಆಯೋಜಕರು ಸಮಂತಾ ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದರೂ ಕೂಡ ಈ ಬಗ್ಗೆ ಸಮಂತಾ ಯಾವುದೇ ಉತ್ತರ ನೀಡಿಲ್ಲವಂತೆ. ಹಾಗಾಗಿ ಸಮಂತಾ ಬರುವುದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹಿಂದುಗಳ ಜೀವ ಕೂಡ ಮುಖ್ಯ ಅಂದ ಪ್ರಣಿತಾ, ಉದಯಪುರ್ ಘಟನೆ ವಿರುದ್ದ ಸಿಡಿದೆದ್ದ ನಟಿ
ಕುತೂಹಲ ಹೆಚ್ಚಿಸಿದ ಶೋ
ಇನ್ನು ಈ ಶೋ ಬಹಳ ವಿಭಿನ್ನವಾಗಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳ ಅದೆಷ್ಟೋ ಸೀಕ್ರೆಟ್ಗಳು ರಿವೀಲ್ ಆಗಿದೆ. ಜನರಿಗೆ ಮನರಂಜನೆ ನೀಡುವ ಈ ಟಾಕ್ ಶೋ, ಅಭಿಮಾನಿಗಳಿಗೆ ನೆಚ್ಚಿನ ನಟ, ನಟಿಯರ ಬಗ್ಗೆ ತಿಳಿದುಕೊಳ್ಳಲು ಉತ್ತಮ ಅವಕಾಶವಾಗಿದೆ. ಬಾಲಿವುಡ್ನ ಜನಪ್ರಿಯ ಸೆಲೆಬ್ರಿಟಿಗಳ ಜೊತೆಗಿನ ಮಾತುಕತೆಯನ್ನು ಒಳಗೊಂಡ, ಈ ಶೋ ಅತ್ಯಂತ ಜನಪ್ರಿಯ. ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಟ ಕರಣ್ ಜೋಹರ್ ಈ ಕಾರ್ಯಕ್ರಮದ ನಿರೂಪಕ. ಕೆಲವೊಮ್ಮೆ ಕಾಫಿ ವಿತ್ ಕರಣ್ನಲ್ಲಿ ಕ್ರೀಡಾ ಲೋಕದ ತಾರೆಗಳು ಹಾಗೂ ದಕ್ಷಿಣದ ಸಿನಿಮಾ ತಾರೆಯರು ಕೂಡ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡತಿ ಕೃತಿ ಶೆಟ್ಟಿಯ ಕ್ಯೂಟ್ ಪೋಸ್, ಸುಂದರಿಯ ಫೋಟೋ ನೋಡಿ ಫ್ಯಾನ್ಸ್ ಫಿದಾ
ಅಲ್ಲದೇ, ಕರಣ್ ಜೋಹರ್ ಶೋನಲ್ಲಿ ನಟ ವಿಜಯ್ ದೇವರಕೊಂಡ ಭಾಗವಹಿಸುತ್ತಾರೆ ಎಂಬ ಸುದ್ದಿ ಕೂಡ ಹರಿದಾಡಿದೆ. ಅಲ್ಲದೇ ಈಗಾಗಲೇ ಅವರ ಶೂಟಿಂಗ್ ಆಗಿದೆ ಎಂದು ಸಹ ಹೇಳಲಾಗುತ್ತಿದೆ, ಅದರ ಕೆಲ ಫೋಟೋಗಳು ಸಹ ಹರಿದಾಡಿದ್ದವು. ಶಾರುಖ್ ಖಾನ್, ಕರೀನಾ, ಸೈಫ್ ಅಲಿ ಖಾನ್ ಮುಂತಾದ ಕೆಲವು ತಾರೆಯರು ಕಾಫಿ ವಿತ್ ಕರಣ್ನ ಒಂದಕ್ಕಿಂತ ಹೆಚ್ಚು ಸೀಸನ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ, ಅಂದರೆ ಏಳನೇ ಸೀಸನ್ನಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ, ಏನು ಸ್ಪೆಷಲ್ ಇರಲಿದೆ ಎಂಬ ಕುತೂಹಲ ಕೂಡ ಹೆಚ್ಚಾಗಿದೆ. ಈ ಶೋ ಜುಲೈ 7 ರಿಂದ ಹಾಟ್ ಸ್ಟಾರ್ ಓಟಿಟಿಯಲ್ಲಿ ಪ್ರಸಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ