• Home
 • »
 • News
 • »
 • entertainment
 • »
 • Samantha Ruth Prabhu: ಜಾಹೀರಾತಿನಲ್ಲಿ ಸಖತ್​ ಗ್ಲಾಮರಸ್​​​​ ಲುಕ್​ನಲ್ಲಿ ನಟಿ ಸಮಂತಾ

Samantha Ruth Prabhu: ಜಾಹೀರಾತಿನಲ್ಲಿ ಸಖತ್​ ಗ್ಲಾಮರಸ್​​​​ ಲುಕ್​ನಲ್ಲಿ ನಟಿ ಸಮಂತಾ

ನಟಿ ಸಮಂತಾ

ನಟಿ ಸಮಂತಾ

ಕೂಲ್​ ಡ್ರಿಂಕ್ಸ್​ ಕಂಪನಿಗಾಗಿ ನೀಡಿದ ಒಂದು ಜಾಹೀರಾತಿನಲ್ಲಿ ತುಂಬಾನೇ ಗ್ಲ್ಯಾಮ್ ಆಗಿ ಕಾಣಿಸಿಕೊಂಡಿದ್ದರು. ಆಗ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ವೀಡಿಯೋವನ್ನು ಹಂಚಿಕೊಂಡಿದ್ದರು.

 • Share this:

  ತೆಲುಗು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅವರು ಅಭಿನಯಿಸುವ ಚಿತ್ರಗಳಿಂದ ಹಿಡಿದು ಅವರ ವೈಯುಕ್ತಿಕ ಜೀವನದ ವಿಷಯಕ್ಕಾಗಿ ಸಹ ನಟಿ ಸುದ್ದಿಯಲ್ಲಿರುತ್ತಾರೆ. ಸುಮಾರು ದಿನಗಳವರೆಗೆ ಮಾಜಿ ಪತಿ ಮತ್ತು ನಟ ನಾಗ ಚೈತನ್ಯ (Naga Chaitanya) ಅವರೊಂದಿಗೆ ವೈವಾಹಿಕ ಜೀವನದಿಂದ ಹೊರ ಬಂದಿರುವುದರ ಬಗ್ಗೆ ಸುದ್ದಿಯಲ್ಲಿದ್ದರು. ಆನಂತರ ನಟಿ ಮತ್ತೆ ಚಿತ್ರಗಳಲ್ಲಿ ನಟಿಸಿ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ (Pan India) ಚಿತ್ರವಾದ ಪುಷ್ಪಾ: ದಿ ರೈಸ್ ನಲ್ಲಿ ‘ಊ ಅಂಟಾವ, ಮಾವ ಊ ಹೂಂ ಅಂಟಾವಾ’ ಅನ್ನೋ ಐಟಂ ಹಾಡಿಗೆ ಮಾದಕವಾಗಿ ಡ್ಯಾನ್ಸ್ (Dance) ಮಾಡಿ ಪಡ್ಡೆ ಹೈಕ್ಳ ನಿದ್ದೆ ಕೆಡೆಸಿ ಮತ್ತೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು ಅಂತ ಹೇಳಬಹುದು.


  ನಟಿ ಸಮಂತಾ ಕೈಯಲ್ಲಿವೆ ಅನೇಕ ಹೈ ಪ್ರೊಫೈಲ್ ಚಿತ್ರಗಳು


  ಅದರ ನಂತರ ಮತ್ತೆ ನಟಿ ಸಮಂತಾ ಅವರು ಹಿಂದಕ್ಕೆ ತಿರುಗಿ ನೋಡಲಿಲ್ಲ ಅಂತಾನೆ ಹೇಳಬಹುದು. ಏಕೆಂದರೆ ಅವರು ದೊಡ್ಡ ದೊಡ್ಡ ಸಿನಿಮಾ ನಟರೊಂದಿಗೆ ಯಶೋದಾ, ಶಕುಂತಲಂ, ಖುಷಿಯಂತಹ ಹೈ ಪ್ರೊಫೈಲ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರು ರಾಜ್ ಮತ್ತು ಡಿಕೆ ಅವರೊಂದಿಗೆ ವೆಬ್ ಸಿರೀಸ್ ಮತ್ತು ಹಾಲಿವುಡ್ ಪ್ರಾಜೆಕ್ಟ್ ಅನ್ನು ಸಹ ಹೊಂದಿದ್ದಾರೆ ಅಂತ ಹೇಳಲಾಗುತ್ತಿದೆ.


  ‘ಡ್ರೂಲ್ಸ್’ ಜಾಹೀರಾತಿನಲ್ಲಿ ಸೂಪರ್ ಹಾಟ್ ಆಗಿ ಕಾಣಿಸಿಕೊಂಡ ನಟಿ..


  ಇದೆಲ್ಲದರ ಮಧ್ಯೆ ಅವರು ‘ಡ್ರೂಲ್ಸ್’ ಎಂಬ ಈ ನಾಯಿಗಳ ಆಹಾರ ತಯಾರಿಸುವ ಕಂಪನಿಯ ಜಾಹೀರಾತಿನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟಿಯನ್ನು ನೋಡಿ ಅಭಿಮಾನಿಗಳು ಒಂದು ಕ್ಷಣ ಸಮಂತಾ ಮುಂಚೆಗಿಂತಲೂ ಸ್ವಲ್ಪ ಜಾಸ್ತಿನೆ ಸೂಪರ್ ಹಾಟ್ ಆಗಿ ಕಾಣುತ್ತಿದ್ದಾರೆಂದು ಹೇಳುತ್ತಿದ್ದಾರೆ. ಅಲ್ಲದೆ ಈ ಡ್ರೂಲ್ಸ್ ಕಮರ್ಷಿಯಲ್ ಅವರ ಎಲ್ಲಾ ಅಭಿಮಾನಿಗಳನ್ನು ತುಂಬಾನೇ ಖುಷಿಪಡಿಸಿದೆ ಅಂತ ಸಹ ಹೇಳಬಹುದು. ಆ ಜಾಹೀರಾತಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿಯನ್ನು ನೋಡಿ ಅನೇಕರಿಗೆ ಒಂದು ಸಂದೇಹ ಸಹ ಬಂದಿದೆ ನೋಡಿ.


  Samantha goes ultra glam for new ad My Queen says fan
  ನಟಿ ಸಮಂತಾ


  ಅಂತದ್ದೇನು ಸಂದೇಹ ಬಂದಿದ್ದು ಅಂತ ನೀವು ಕೇಳಿದರೆ, ಇಲ್ಲಿದೆ ನೋಡಿ ಅದಕ್ಕೆ ಉತ್ತರ. ಡ್ರೂಲ್ಸ್ ಜಾಹೀರಾತನ್ನು ಅನೇಕರು ನೋಡಿದ ಮೇಲೆ ನಟಿ ಸಮಂತಾ ಅವರು ಬೇರೆ ದೇಶಕ್ಕೆ ಹೋಗಿ ಯಾವುದಾದರೂ ಸೌಂದರ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆಯೇ ಎಂದು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಜಾಹೀರಾತಿನಲ್ಲಿ ನಟಿಯ ಲುಕ್ ಸಿನೆಮಾ ಪರದೆಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿ ಕಾಣಿಸಿದೆ. ಮಾನಸಿಕ ಶಾಂತಿಯನ್ನು ಪಡೆಯಲು ಯೋಗ ಮತ್ತು ಇತರ ವಿಧಾನಗಳನ್ನು ಅಭ್ಯಾಸ ಮಾಡಲು ಸಮಂತಾ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂದು ಈ ಹಿಂದೆ ವರದಿಗಳು ಕೇಳಿ ಬಂದಿದ್ದವು.


  ನಟಿ ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರೀಸ್ ನಲ್ಲಿ ತನ್ನ ಬೋಲ್ಡ್ ಪಾತ್ರ ಮತ್ತು ಪುಷ್ಪ: ದಿ ರೈಸ್ ಚಿತ್ರದಲ್ಲಿ ಹಾಡಿಗೆ ಮಾದಕವಾಗಿ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಹೃದಯಗಳನ್ನು ಗೆದ್ದಿದ್ದಾರೆ ಅಂತ ಹೇಳಬಹುದು.


  ಇದನ್ನೂ ಓದಿ: ಗಂಧದಗುಡಿ ಅಪ್ಪು ಕೊನೆಯ ಚಿತ್ರ ಅಲ್ಲ: ಶಿವಣ್ಣನ ಮಾತಿನಿಂದ ಅಭಿಮಾನಿಗಳಲ್ಲಿ ಹರ್ಷ!


  ಈ ಹಿಂದೆ ಸಹ ಜಾಹೀರಾತೊಂದರಲ್ಲಿ ಗ್ಲ್ಯಾಮ್ ಆಗಿ ಕಾಣಿಸಿಕೊಂಡಿದ್ರು ಸಮಂತಾ


  ಸಮಂತಾ ಈ ಹಿಂದೆ ಮಾರ್ಚ್ ತಿಂಗಳಲ್ಲಿ ಪಾನೀಯ ಕಂಪನಿಗಾಗಿ ನೀಡಿದ ಒಂದು ಜಾಹೀರಾತಿನಲ್ಲಿ ತುಂಬಾನೇ ಗ್ಲ್ಯಾಮ್ ಆಗಿ ಕಾಣಿಸಿಕೊಂಡಿದ್ದರು. ಆಗ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ವೀಡಿಯೋವನ್ನು ಹಂಚಿಕೊಂಡಿದ್ದರು. ಅದು ತಕ್ಷಣವೇ ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು ಮತ್ತು ಒಂದು ಗಂಟೆಯೊಳಗೆ, ಈ ಪೋಸ್ಟ್ ಅನ್ನು ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಗಳಲ್ಲಿ ಹಂಚಿಕೊಳ್ಳಲಾಯಿತು.

  Published by:ಪಾವನ ಎಚ್ ಎಸ್
  First published: