ನಟಿ ಸಮಂತಾ (Samantha) ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಪೋಸ್ಟರ್ ಮೂಲಕವೇ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಶಾಕುಂತಲಂ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಮಯೋಸಿಟಿಸ್ನಿಂದ ಬಳಲುತ್ತಿದ್ದ ಸಮಂತಾ ಗುಣಮುಖರಾಗಿದ್ದು, ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ವೇಳೆ ನಿರ್ದೇಶಕ ಗುಣಶೇಖರ್ ಮಾತಿಗೆ ನಟಿ ಕಣ್ಣೀರು ಹಾಕಿದ್ದಾರೆ.
ತೆರೆ ಮೇಲೆ ಬರಲು ರೆಡಿಯಾಗಿದೆ ಶಾಕುಂತಲಂ
ಮಯೋಸಿಟಿಸ್ ಸಮಸ್ಯೆಯಿಂದ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟಿದ್ದ ನಟಿ ಸಮಂತಾ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿ ಆಗ್ತಿದ್ದಾರೆ. ಕಳೆದ ವರ್ಷ ರಿಲೀಸ್ ಆದ ಸಿನಿಮಾ ಯಶೋದ ಕೂಡ ಸಮಂತಾಗೆ ಒಳ್ಳೆ ಹೆಸರು ತಂದು ಕೊಟ್ಟಿತ್ತು. ಹೊಸ ವರ್ಷದ ಆರಂಭದಲ್ಲಿ ಮತ್ತೊಂದು ಸಿನಿಮಾ ಶಾಕುಂತಲಂ ಸಿನಿಮಾ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಶಾಕುಂತಲಂ ಸಿನಿಮಾ ಟ್ರೇಲರ್ ಔಟ್
ಫೆಬ್ರವರಿ 27ಕ್ಕೆ ಶಾಕುಂತಲಂ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರ ಪೋಸ್ಟರ್ ಗಳೇ ಪ್ರೇಕ್ಷಕರಲ್ಲಿ ನಾನಾ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಕಥೆಗಾರ ಮತ್ತು ನಿರ್ದೇಶಕರಾಗಿರುವ ಗುಣಶೇಖರ್ ಮಾತಿಗೆ ಕಣ್ಣೀರಿಟ್ಟರು.
ನಿರ್ದೇಶಕರಾಗಿರುವ ಗುಣಶೇಖರ್ ಮಾತು
20 ವರ್ಷಗಳ ನಂತರ ಮಹೇಶ್ ಬಾಬು ಅಭಿನಯದ ಸೂಪರ್ ಹಿಟ್ ಚಿತ್ರ ‘ಒಕ್ಕಡು’ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಆ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಿಂದ ಬರ ಮಾಡಿಕೊಂಡಿದ್ದಾರೆ. ಒಕ್ಕಡು ಚಿತ್ರವನ್ನು ಮತ್ತೆ ಬೆಂಬಲಿಸಿದ್ದಕ್ಕೆ ಧನ್ಯವಾದಗಳು. ಒಳ್ಳೆಯ ಕಂಟೆಂಟ್ ಇದ್ದರೆ ಸಿನಿಮಾಗಳು ಇಷ್ಟವಾಗುತ್ತವೆ ಎನ್ನುವುದಕ್ಕೆ ಈ ಸಿನಿಮಾ ಉದಾಹರಣೆ ಎಂದು ಕಥೆಗಾರ ಮತ್ತು ನಿರ್ದೇಶಕರಾಗಿರುವ ಗುಣಶೇಖರ್ ಹೇಳಿದರು.
ದಿಲ್ ರಾಜು ತೆರೆ ಮರೆಯ ನಾಯಕ
'ಶಾಕುಂತಲಂ'ಗೆ ಮೂವರು ನಾಯಕರಿದ್ದಾರೆ. ಕಥೆಯ ನಾಯಕ ದೇವ್ ಮೋಹನ್ ಆಗಿದ್ದರೆ, ಈ ಸಿನಿಮಾದ ನಾಯಕಿ ಸಮಂತಾ. ದಿಲ್ ರಾಜು ತೆರೆಮರೆಯ ನಾಯಕ ಎಂದು ಹೇಳಿದ್ದರು. ಈ ಸಿನಿಮಾದ ಕ್ರೆಡಿಟ್ ಅನ್ನು ದಿಲ್ ರಾಜು ಅವರಿಗೆ ನೀಡುತ್ತೇನೆ. ‘ಶಾಕುಂತಲಂ’ ವಿಚಾರದಲ್ಲಿ ಪ್ರೇಕ್ಷಕರ ನಂಬಿಕೆಗೆ ಸ್ವಲ್ಪವೂ ಧಕ್ಕೆಯಾಗುವುದಿಲ್ಲ. ನನ್ನ ಪಕ್ಕದಲ್ಲಿ ದಿಲ್ ರಾಜು ಇದ್ದುದರಿಂದ ನಾನು ಬಯಸಿದ ಚಿತ್ರದ ಚಿತ್ರೀಕರಣಕ್ಕೆ ಅವಕಾಶವಾಯಿತು ಗುಣಶೇಖರ್ ಹೇಳಿದ್ದಾರೆ.
ನನ್ನ ಮಗಳು ಭಾರತಕ್ಕೆ ಬಂದ ಕೂಡಲೇ ನಿರ್ಮಾಪಕಿಯಾಗಬೇಕು ಎಂದು ಕೇಳಿದಳು. ಬಳಿಕ ಸಿನಿಮಾ ಕಥೆಗಳನ್ನು ಕೇಳಿದಳು. ಆಗ ನಾನು ‘ಶಾಕುಂತಲಂ’ ಕಥೆ ಹೇಳಿದ್ದೆ. ನೀಲಿಮಾ ಅವರು ಪುರಾಣಗಳಿಂದ ಇಂತಹ ಅನೇಕ ಅದ್ಭುತ ಕಥೆಗಳನ್ನು ಇಂದಿನ ಜನರಿಗೆ ಹೇಳಲು ಬಯಸಿದ್ದರು ಎಂದು ಗುಣಶೇಖರ್ ಹೇಳಿದ್ರು.
ನಟಿ ಸಮಂತಾ ಕಣ್ಣೀರು
ಶಕುಂತಲಾ ಪಾತ್ರದಲ್ಲಿ ಸಮಂತಾ ಚೆನ್ನಾಗಿ ಹೊಂದಾಣಿಕೆಯಾಗುತ್ತೆ ಎಂದು ತಿಳಿದೆವು. ಹಾಗಾಗಿ ಸಮಂತಾಗೆ ಕಥೆ ಹೇಳಿದೆ. ಅವಳಿಗೆ ಕಥೆ ತುಂಬಾ ಇಷ್ಟವಾಯಿತು. ನಂತರ ದಿಲ್ ರಾಜು ಈ ಯೋಜನೆಯ ಭಾಗವಾದರು. ದಿಲ್ ರಾಜು ಒಬ್ಬ ನಾಯಕಿಯನ್ನು ನಂಬಿ ಇಷ್ಟು ಕೋಟಿ ಖರ್ಚು ಮಾಡಿದ್ದಾರೆ. ಅದಕ್ಕೆ ಧನ್ಯವಾದ ಎಂದು ಗುಣಶೇಖರ್ ಭಾವುಕರಾದರು. ಈ ವೇಳೆ ವೇದಿಕೆ ಮೇಲಿದ್ದ ಸಮಂತಾ ಕೂಡ ಕಣ್ಣೀರು ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ