Samantha Ruth Prabhu: ಕನಸುಗಳನ್ನು ಬೆನ್ನತ್ತಿ, ಅವುಗಳೇ ನಿಮ್ಮನ್ನು ರೂಪಿಸುತ್ತವೆ; ವಿದ್ಯಾರ್ಥಿಗಳಿಗೆ ಸಮಂತಾ ಕಿವಿಮಾತು

ಅಭಿಮಾನಿಗಳು ದೇಶದ ಮೂಲೆ ಮೂಲೆಯಲ್ಲೂ ಸಿಗುವಷ್ಟು ಇವರು ಭಾರತ ಸಿನಿಮಾ ರಂಗದಲ್ಲಿ ಪ್ರಸಿದ್ಧಿ ಪಡೆದ ನಟಿ ಸಮಂತಾ ರುತ್ ಪ್ರಭು. ಆದರೆ ಇವರು ವೃತ್ತಿ ಜೀವನದಲ್ಲಿ ಉತ್ತಮ ನಟಿಯಾಗಿ ಹೊರ ಹೊಮ್ಮಲು ತುಂಬಾ ಕಷ್ಟ ಪಟ್ಟಿದ್ದಾರೆ. ಇವರಿಗೆ ಯಶಸ್ಸು ಅಷ್ಟು ಸುಲಭವಾಗಿ ಸಿಕ್ಕಿಲ್ಲ ಎಂದು ಹೇಳಬಹುದು. ಅವರ ಮಾತಿನಲ್ಲಿ ಅವರ ಜೀವನದ ಬಗ್ಗೆ ಕೇಳುವ ಸುದಿನ ಇಂದು ನಮ್ಮದಾಗಿದೆ. ಬನ್ನಿ ಅವರ ಶಾಲಾ ಜೀವನದಿಂದ ವೃತ್ತಿ ಜೀವನದವರೆಗಿನ ಕಥೆಯನ್ನು ಅವರ ಬಾಯಲ್ಲಿಯೇ ಕೇಳೋಣ.

ಸಮಂತಾ ರುತ್ ಪ್ರಭು

ಸಮಂತಾ ರುತ್ ಪ್ರಭು

  • Share this:
ಸಮಂತಾ ರುತ್ ಪ್ರಭು (Samantha Ruth Prabhu) ತನ್ನನ್ನು ತಾನು ಅಸಾಧಾರಣ ನಟಿಯಾಗಿ ಗುರುತಿಸಿಕೊಳ್ಳಲು ವೃತ್ತಿ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದಾಳೆ. ಇವರು ಅತ್ಯಂತ ಸುಂದರ ನಟಿ (Beautiful Actress)) ಮತ್ತು ಉತ್ತಮ ನಟನಾ ಕೌಶಲ್ಯದಿಂದ (Acting Skill) ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.  ಅಭಿಮಾನಿಗಳು ದೇಶದ ಮೂಲೆ ಮೂಲೆಯಲ್ಲೂ ಸಿಗುವಷ್ಟು ಇವರು ಭಾರತ ಸಿನಿಮಾ ರಂಗದಲ್ಲಿ ಪ್ರಸಿದ್ಧಿ ಪಡೆದ ನಟಿಯಾಗಿದ್ದಾರೆ. ಆದರೆ ಇವರು ವೃತ್ತಿ ಜೀವನದಲ್ಲಿ ಉತ್ತಮ ನಟಿಯಾಗಿ ಹೊರ ಹೊಮ್ಮಲು ತುಂಬಾ ಕಷ್ಟ ಪಟ್ಟಿದ್ದಾರೆ. ಇವರಿಗೆ ಯಶಸ್ಸು (Success)  ಅಷ್ಟು ಸುಲಭವಾಗಿ ಸಿಕ್ಕಿಲ್ಲ. ಅವರ ಮಾತಿನಲ್ಲಿ ಅವರ ಜೀವನದ ಬಗ್ಗೆ ಕೇಳುವ ಸುದಿನ ಇಂದು ನಮ್ಮದಾಗಿದೆ. ಬನ್ನಿ ಅವರ ಶಾಲಾ ಜೀವನದಿಂದ ವೃತ್ತಿ ಜೀವನದವರೆಗಿನ ಕಥೆಯನ್ನು ಅವರ ಬಾಯಲ್ಲಿಯೇ ಕೇಳೋಣ.

ನಟಿಯಾಗುವ ಮೊದಲು ಸಮಂತಾ ಅವರ ಜೀವನಶೈಲಿ ಹೇಗಿತ್ತು 
ಸಮಂತಾ ಅವರು ನಾನು ಹೆಸರಾಂತ ನಟಿಯಾಗುವ ಮೊದಲು ನನ್ನ ಜೀವನದ ಹೋರಾಟ ಹೇಗಿತ್ತು? ಎಂಬುದರ ಬಗ್ಗೆ ಸತ್ಯಬಾಮಾ ವಿಶ್ವವಿದ್ಯಾಲಯದಲ್ಲಿ ಪ್ರೋತ್ಸಾಯಕ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಕನಸು ಕಾಣುವುದಷ್ಟೆ ಮುಖ್ಯವಲ್ಲ, ಆ ಕನಸಿನ ಜಾಡು ಹಿಡಿದು ಅದರ ಉತ್ತುಂಗವನ್ನು ತಲುಪಬೇಕು. ಆಗ ಅದು ಅದು ನಮ್ಮ ನಿಜವಾದ ಕನಸು ಆಗುತ್ತದೆ ಎಂದು ತಮ್ಮ ಜೀವನದ ಕಷ್ಟದ ದಿನಗಳ ಬಗ್ಗೆ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ.

ಶಿಕ್ಷಣದ ಬಗ್ಗೆ ನಟಿ ಏನು ಹೇಳಿದ್ದಾರೆ 
“ನಾನು ಓದುತ್ತಿದ್ದಾಗ ನನ್ನ ತಾಯಿ ಮತ್ತು ತಂದೆ ನನಗೆ ಕಷ್ಟಪಟ್ಟು ಓದು ಮತ್ತು ಆ ಓದು ನಿಮ್ಮನ್ನು ದೊಡ್ಡ ವ್ಯಕ್ತಿಗಳನ್ನಾಗಿ ಮಾಡುತ್ತದೆ ಎಂದು ಹೇಳಿದರು. ನಾನು ಕಷ್ಟಪಟ್ಟು ಓದಿದೆ. ನಾನು 10ನೇ ತರಗತಿ, 12ನೇ ತರಗತಿ ಮತ್ತು ಕಾಲೇಜಿನಲ್ಲಿ ಅಗ್ರಸ್ಥಾನ ಪಡೆದಿದ್ದೇನೆ. ಆದರೆ ನಂತರ, ನಾನು ಮುಂದೆ ಓದಲು ಬಯಸಿದಾಗ, ನನ್ನ ಹೆತ್ತವರಿಗೆ ಆ ಕಾಲೇಜು ಶಿಕ್ಷಣಕ್ಕೆ ಬೇಕಾಗುವ ಹಣವನ್ನು ಭರಿಸಲು ಸಾಧ್ಯವಾಗಲಿಲ್ಲ. ಆಗ ನನ್ನಲ್ಲಿ ಯಾವುದೇ ಕನಸು ಇರಲಿಲ್ಲ. ಭವಿಷ್ಯದ ಬಗ್ಗೆಯಂತೂ ನನಗೆ ನಂಬಿಕೆಯೇ ಇರಲಿಲ್ಲ. ಹಣವಂತೂ ಮೊದಲೇ ಇರಲಿಲ್ಲ.” ಎಂದು ತಮ್ಮ ಕಷ್ಟದ ಜೀವನ ಹೇಳಿಕೊಂಡರು.

ಇದನ್ನೂ ಓದಿ: Keerthi Suresh: ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ಮಹಾನಟಿ, ಕೀರ್ತಿ ಸುರೇಶ್ ನೋಟಕ್ಕೆ ಮನಸೋತ ಫ್ಯಾನ್ಸ್

ವಿದ್ಯಾರ್ಥಿಗಳಿಗೆ ಸಮಂತಾ ಕಿವಿಮಾತು ಏನು
"ನಿಮ್ಮ ಪೋಷಕರು ಏನು ಬಯಸುತ್ತಾರೋ ಅದನ್ನು ಮಾಡಲು ನೀವು ಕಷ್ಟಪಡುತ್ತೀರಿ. ಅದರ ಬಗ್ಗೆಯೇ ನೀವು ಕನಸು ಕಾಣುತ್ತಿರಿ ಎಂದು ನನಗೆ ತಿಳಿದಿದೆ. ಆದರೆ ನಾನು ನಿಮಗೆ ಕನಸು ಕಾಣುವಂತೆ ಹೇಳಲು ಬಂದಿದ್ದೇನೆ. ನಿಮಗೆ ಬೇಕಾಗಿರುವ ಕನಸನ್ನು ಕಾಣಿ ಮತ್ತು ಅದನ್ನು ನೀವು ಸಾಧಿಸಿ. ಅದರಿಂದ ನಿಮಗೆ ಮೊದಲು ವಿಫಲತೆ ಬರಬಹುದು. ಕಷ್ಟಗಳು ಸರದಿ ಸಾಲಿನಲ್ಲಿ ಬರಬಹುದು. ಆದರೆ ನೀವು ಮುಂದುವರಿಯಿರಿ. ಆಗ ನಿಮ್ಮ ಕನಸೇ ನಿಮ್ಮ ಸುಂದರ ಜೀವನವನ್ನು ರೂಪಿಸುತ್ತದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Alia Bhatt: ಸೋಶಿಯಲ್ ಮೀಡಿಯಾ ಪೋಸ್ಟ್​ಗೆ ಆಲಿಯಾ ಪಡೆಯುವ ಸಂಭಾವನೆ ಕೇಳಿ ಶಾಕ್ ಆದ ಬಾಲಿವುಡ್​

ಈ ಹಿಂದೆ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಸಮಂತಾ ತನ್ನನ್ನು ತಾನು ಬೆಂಬಲಿಸಲು ತುಂಬಾ ಶ್ರಮ ವಹಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಯಶಸ್ವಿಯಾಗಲು ನಿರ್ಧರಿಸಿದರು. “ನಾನು ಕನಿಷ್ಠ ಎರಡು ತಿಂಗಳ ಕಾಲ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದೆ. ನಾನು ಹಗಲು -ರಾತ್ರಿಯೆನ್ನದೇ ಕೆಲಸಗಳನ್ನು ಮಾಡುತ್ತಿದ್ದೆ. ಆದ್ದರಿಂದ ಇಂದು ನಾನು ಇಲ್ಲಿದ್ದೇನೆ. ನಾನು ನನ್ನ ಕನಸನ್ನು ಈಡೇರಿಸಿಕೊಂಡಿದ್ದೇನೆ ಎಂದರೆ ನೀವು ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು” ಎಂದು ವಿದ್ಯಾರ್ಥಿಗಳನ್ನು ಈ ದೇಶದ ಏಕೈಕ ಭವಿಷ್ಯ ಎಂದು ಕರೆದರು.

ಸಮಂತಾ ಬಗ್ಗೆ ಒಂದಿಷ್ಟು ಮಾಹಿತಿ 
ಸಮಂತಾ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತಮ್ಮ ಅದ್ಭುತ ಅಭಿನಯಕ್ಕೆ ಹೆಸರಾಗಿರುವ ಸಮಂತಾ ರುತ್ ಪ್ರಭು 1987 ಎಪ್ರಿಲ್ 28 ರಲ್ಲಿ ಚೆನ್ನೈನಲ್ಲಿ ಜನಿಸಿದರು. ಅವರು ವಾಣಿಜ್ಯ ಪದವಿ ಓದುವಾಗ ಪಾರ್ಟ್ ಟೈಮ್ ಮಾಡೆಲಿಂಗ್ ಮಾಡಿಕೊಂಡಿದ್ದ ಸಮಂತಾ 2010 ರಲ್ಲಿ ತೆರೆಕಂಡ ಗೌತಮ್ ಮೆನನ್ ರ `ಯೇ ಮಾಯಾ ಚೇಸಾವೆ' ತೆಲಗು ಚಿತ್ರದಿಂದ ಸಿನಿಜೀವನ ಪ್ರಾರಂಭಿಸಿದರು. ನಂತರ ತಮಿಳು ಚಿತ್ರಗಳಲ್ಲಿ ಕೂಡ ಮಿಂಚತೊಡಗಿದ ಸಮಂತಾ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2017 ರಲ್ಲಿ ತಮ್ಮ ಮೊದಲ ಚಿತ್ರದ ನಾಯಕ ನಾಗ ಚೈತನ್ಯರನ್ನು ವಿವಾಹವಾಗಿ ಸದ್ಯ ಬೇರ್ಪಟ್ಟಿದ್ದಾರೆ.
Published by:Ashwini Prabhu
First published: