Samantha: `ಫ್ಯಾಮಿಲಿ ಮ್ಯಾನ್​’ ನ್ಯೂ ಸೀರಿಸ್​ನಲ್ಲಿ ಸಮಂತಾ? ಮತ್ತಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಚೆಂದುಳ್ಳಿ ಚೆಲುವೆ!

‘ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್‌ನ ಎರಡನೇ ಸೀಸನ್‌ನಲ್ಲಿ ಕಾಣಿಸಿಕೊಂಡ ಸಮಂತಾ, ಎಲ್‌ಟಿಟಿಇ ಉಗ್ರಗಾಮಿ ರಾಜಿ ಪಾತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಿದ್ದಾರೆ. ಅವರು ಹೊಸ ವೆಬ್ ಸೀರಿಸ್‌ನ ತಯಾರಿ ನಡೆಸುತ್ತಿದ್ದಾರೆ, ಇದು ಫ್ಯಾಮಿಲಿ ಮ್ಯಾನ್ 2ರ ಪ್ರೀಕ್ವೆಲ್‌ ಎಂದು ಹೇಳಲಾಗುತ್ತಿದೆ.

ಸಮಂತಾ

ಸಮಂತಾ

  • Share this:
ಈಗಾಗಲೇ ಬಿಡುಗಡೆಯಾದ ತೆಲುಗು ನಟ ಅಲ್ಲು ಅರ್ಜುನ್(Allu Arjun) ನಾಯಕ ನಟನಾಗಿ ಅಭಿನಯಿಸಿದ ಪುಷ್ಪಾ: ದಿ ರೈಸ್(Pushpa: The Rice) ಚಿತ್ರದಲ್ಲಿ 'ಊ ಅಂಟಾವಾ' ಐಟಂ(Item) ನಂಬರ್ ಹಾಡಿಗೆ ಮಾದಕವಾಗಿ ಡ್ಯಾನ್ಸ್ ಮಾಡಿ ಪಡ್ಡೆ ಹೈಕ್ಳ ಮನಸ್ಸು ಕದ್ದ ನಟಿ ಸಮಂತಾ ರುತ್ ಪ್ರಭು(Samanth Ruthu Prabhu) ಅವರು ಈಗ ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಸಹ ಬಹು ಬೇಡಿಕೆಯ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ‘ಪುಷ್ಪಾ: ದಿ ರೈಸ್’ ಚಿತ್ರದಲ್ಲಿನ ಐಟಂ ಹಾಡಿಗೆ ಮಾಡಿದ ಡ್ಯಾನ್ಸ್‌ನಿಂದಾಗಿ ಸುದ್ದಿಯಲ್ಲಿರುವ ನಟಿ ಸಮಂತಾ ಅವರು ಈಗ ಅಮೆಜಾನ್ ಪ್ರೈಮ್(Amazon Prime) ಅಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ವೆಬ್ ಸಿರೀಸ್ ಆದಂತಹ ‘ಫ್ಯಾಮಿಲಿ ಮ್ಯಾನ್’(Family Man) ನ ನಿರ್ದೇಶಕರ ಜೊತೆ ಹೊಸ ವೆಬ್ ಸೀರೀಸ್​(Web Series) ಒಂದನ್ನು ಪ್ಲ್ಯಾನ್ ಮಾಡುತ್ತಿರುವ ಸುದ್ದಿ ಚಿತ್ರೋದ್ಯಮದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸುಕುಮಾರ್ ನಿರ್ದೇಶನದ ಪುಷ್ಪಾ ಚಿತ್ರವು ಡಿಸೆಂಬರ್ 17ರಂದು ದೇಶಾದ್ಯಂತ ಬಿಡುಗಡೆಯಾಯಿತು. ಅಂದಿನಿಂದ ಇಂದಿನವರೆಗೂ ಅಭಿಮಾನಿಗಳು ಸಮಂತಾ ಅವರು ಮಾಡಿದ ಡ್ಯಾನ್ಸ್ ಅನ್ನು ಮರೆತೇ ಇಲ್ಲ ಎಂದು ಹೇಳಬಹುದು.

ರಾಜ್​ ನಿಡಿಮೋರು ಜೊತೆ ಸಮಂತಾ ನೆಕ್ಸ್ಟ್​ ಪ್ರಾಜೆಕ್ಟ್​!

ಸುದ್ದಿ ಮಾಧ್ಯಮದ ವರದಿಗಳ ಪ್ರಕಾರ, ನಟಿ ಸಮಂತಾ ಅವರು ಈಗ ಫ್ಯಾಮಿಲಿ ಮ್ಯಾನ್ ನಿರ್ದೇಶಕ ಜೋಡಿ ರಾಜ್ ನಿಡಿಮೋರು ಮತ್ತು ರಾಜ್-ಡಿಕೆ ಎಂದು ಜನಪ್ರಿಯವಾಗಿರುವ ಕೃಷ್ಣ ಡಿ.ಕೆ. ಅವರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್‌ನ ಎರಡನೇ ಸೀಸನ್‌ನಲ್ಲಿ ಕಾಣಿಸಿಕೊಂಡ ಸಮಂತಾ, ಎಲ್‌ಟಿಟಿಇ ಉಗ್ರಗಾಮಿ ರಾಜಿ ಪಾತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಿದ್ದಾರೆ. ಅವರು ಹೊಸ ವೆಬ್ ಸೀರಿಸ್‌ನ ತಯಾರಿ ನಡೆಸುತ್ತಿದ್ದಾರೆ, ಇದು ಫ್ಯಾಮಿಲಿ ಮ್ಯಾನ್ 2ರ ಪ್ರೀಕ್ವೆಲ್‌ ಎಂದು ಹೇಳಲಾಗುತ್ತದೆ. ರಾಜಿ ಅವರ ಜೀವನದ ಸುತ್ತ ಕೇಂದ್ರೀಕೃತವಾಗಿರುತ್ತದೆ ಎಂದು ತೆಲುಗು ಮನೋರಂಜನೆ ವೆಬ್‌ಸೈಟ್ ವರದಿ ಮಾಡಿದೆ.

ಸಮಂತಾ ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು!

ಈ ಹಿಂದೆ, ಸಮಂತಾ ಮತ್ತು ರಾಜ್-ಡಿಕೆ ಇಬ್ಬರೂ ಅಮೆಜಾನ್ ಪ್ರೈಮ್ ವಿಡಿಯೋ ಸೀರೀಸ್ 'ಸಿಟಾಡೆಲ್'ನಲ್ಲಿ ಕೆಲಸ ಮಾಡುತ್ತಾರೆ ಎಂದು ವರದಿಯಾಗಿತ್ತು. ನಟಿ ಸಮಂತಾ ಅವರ ಬಳಿ ಇನ್ನೂ ‘ಯಶೋಧಾ’, ‘ಶಕುಂತಲಂ’ ಮತ್ತು ‘ಕಾತು ವಕುಲ ರೆಂಡು ಕಾದಲ್’ ಎಂಬ ಮೂರು ಚಿತ್ರಗಳಿವೆ ಎಂದು ಹೇಳಲಾಗುತ್ತಿದೆ. ‘ಕಾತು ವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಟಿ ಸಮಂತಾ ಅವರ ಜೊತೆಯಲ್ಲಿ ಇನ್ನೊಬ್ಬ ನಟಿ ನಯನತಾರಾ ಮತ್ತು ನಟ ವಿಜಯ್ ಸೇತುಪತಿ ತೆರೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: `ಊ ಅಂಟವಾ ಮಾವ..’ ಅನ್ನೋಕೆ ಸಮಂತಾ ತಗೊಂಡಿದ್ದು ಒಂದೂವರೆ ಕೋಟಿ ಅಲ್ಲ.. ಅದಕ್ಕೂ ಮೇಲೆ!

‘ಯಶೋಧಾ’ ಶೂಟಿಂಗ್​ನಲ್ಲಿ ಸಮಂತಾ ಬ್ಯುಸಿ!

ಇವುಗಳಲ್ಲಿ ಎರಡು ಚಲನಚಿತ್ರಗಳು ಈಗಾಗಲೇ ಪೋಸ್ಟ್-ಪ್ರೊಡಕ್ಷನ್‌ನಲ್ಲಿವೆ ಮತ್ತು ಯಶೋಧಾ ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. ಸೈ-ಫೈ ಥ್ರಿಲ್ಲರ್ ಆಗಿರುವ ಯಶೋದಾ ಚಿತ್ರವನ್ನು ಹರಿ ಶಂಕರ್ ಮತ್ತು ಹರೀಶ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ. ಈ ಯೋಜನೆಯನ್ನು ಶಿವಲೆಂಕಾ ಕೃಷ್ಣ ಪ್ರಸಾದ್ ನಿರ್ಮಿಸಿದ್ದಾರೆ. ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಈ ಚಿತ್ರವು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.ಸಮಂತಾ ಅವರ ಮುಂಬರುವ ಈ 3 ಚಲನಚಿತ್ರಗಳನ್ನು ಹೊರತು ಪಡಿಸಿ ಇನ್ನೊಂದು ಹೆಸರಿಡದ ಚಿತ್ರದಲ್ಲಿ ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ ಪಿಕ್ಚರ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಇದನ್ನು ಓದಿ: ಪಾಪ.. `ಊ ಅಂಟವಾ ಮಾವ..’ ಅನ್ನೋಕೆ ಎಷ್ಟು ಕಷ್ಟ ಪಟ್ಟಿದ್ರು ಸಮಂತಾ.. ನೀವೇ ನೋಡಿ..!

ಈ ಚಿತ್ರವನ್ನು ಶಾಂತರುಬಾನ್ ಜ್ಞಾನಶೇಖರನ್ ನಿರ್ದೇಶಿಸಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇಷ್ಟಲ್ಲದೇ ಸಮಂತಾ ಅವರು ಬಾಫ್ಟಾ ಪ್ರಶಸ್ತಿ ವಿಜೇತ ಹಾಲಿವುಡ್ ನಿರ್ದೇಶಕರಾದ ಫಿಲಿಪ್ ಜಾನ್ ಅವರ ಮುಂದಿನ ಹಾಲಿವುಡ್ ಚಿತ್ರವಾದ ‘ಅರೆಂಜ್ಮೆಂಟ್ ಆಫ್ ಲವ್’ ನಲ್ಲಿ ಸಹ ಇವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Vasudeva M
First published: