ಪತಿಯಿಂದ ದೂರಾದ ನಂತರ ಹೊಸ ಸಿನಿಮಾ ಪ್ರಕಟಿಸಿದ Samantha

ಸಮಂತಾ ಅವರ ಬಹು ನಿರೀಕ್ಷಿತ ಸಿನಿಮಾ ಎಂದರೆ ಪೌರಾಣಿಕ ಚಿತ್ರ ಶಾಕುಂಲಂ. ಟಾಲಿವುಡ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಮಂತಾ, ಇದಾದ ನಂತರ ಮತ್ತೆ ಯಾವ ಸಿನಿಮಾವನ್ನೂ ಪ್ರಕಟಿಸಿರಲಿಲ್ಲ. ಆದರೆ, ಈಗ ಅವರ ಹೊಸ ಸಿನಿಮಾದ ಸುದ್ದಿಯೊಂದು ಹೊರ ಬಿದ್ದಿದೆ.

ನಟಿ ಸಮಂತಾ

ನಟಿ ಸಮಂತಾ

  • Share this:
ನಾಗ ಚೈತನ್ಯ ಅವರ ಜತೆಗಿನ ವಿಚ್ಛೇದನದ ವಿಷಯವನ್ನು ಬಹಿರಂಗಪಡಿಸಿದ ನಂತರ ನಟಿ ಸಮಂತಾ ಅವರು ಕೇವಲ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದರು. ತಮ್ಮ ವಿಚ್ಛೇದನದ ವಿಷಯದಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುವ ಸಮಂತಾ ಅವರ ವೈಯಕ್ತಿಕ ಜೀವನಕ್ಕೆ ಕುರಿತಂತೆ ಸಾಕಷಟು ಗಾಳಿ ಸುದ್ದಿಗಳು ಹಾಗೂ ಆರೋಪಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳ ವಿಷಯವಾಗಿ ಸ್ಪಷ್ಡನೆ ಕೊಟ್ಟಿದ್ದ ಸಮಂತಾ ಅವರು ಈಗ ತಮ್ಮ ಸಿನಿಮಾ ಕುರಿತಾದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ಇದೀಗ ಸಮಂತಾ ದ್ವಿಭಾಷಾ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಅವರ ಈ ಹೊಸ ಸಿನಿಮಾ ಕುರಿತಾದ ಮಾಹಿತಿ ಇಲ್ಲಿದೆ.

ಸಮಂತಾ ಅವರ ಬಹು ನಿರೀಕ್ಷಿತ ಸಿನಿಮಾ ಎಂದರೆ ಪೌರಾಣಿಕ ಚಿತ್ರ ಶಾಕುಂಲಂ. ಟಾಲಿವುಡ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಮಂತಾ, ಇದಾದ ನಂತರ ಮತ್ತೆ ಯಾವ ಸಿನಿಮಾವನ್ನೂ ಪ್ರಕಟಿಸಿರಲಿಲ್ಲ. ಆದರೆ, ಈಗ ಅವರ ಹೊಸ ಸಿನಿಮಾದ ಸುದ್ದಿಯೊಂದು ಹೊರ ಬಿದ್ದಿದೆ.

ಹೌದು, ಸಮಂತಾ ಅವರು ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣವಾಗಲಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಲಿವುಡ್​ನ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ಸ್​ ಪಿಕ್ಚರ್ಸ್​ ಈ ದ್ವಿಭಾಷಾ ಸಿನಿಮಾವನ್ನು ನಿರ್ಮಿಸುತ್ತಿದೆ. ಶಂತರುಬನ್ ​ಜ್ಞಾನಶೇಖರನ್​ ಎಂಬುವರು ಈ ಸಿನಿಮಾಗೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ.

ವಿಜಯದಶಮಿಯಂದು ಈ ಹೊಸ ಸಿನಿಮಾದ ಪ್ರಕಟಣೆಯಾಗಿದ್ದು, ಚಿತ್ರೀಕರಣ ಇನ್ನಷ್ಟೆ ಆರಂಭವಾಗಬೇಕಿದೆ. ಇದಲ್ಲದೆ ತಮಿಳಿನಲ್ಲಿ ಸಮಂತಾ ಅವರು ಕಾತು ವಾಕುಲ ರೆಂಡು ಕಾದಲ್​ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಇದಲ್ಲದೆ ಮತ್ತೊಂದು ಸಿನಿಮಾಗೂ ಸಮಂತಾ ಹಸಿರು ನಿಶಾನೆ ತೋರಿದ್ದು, ಆ ಚಿತ್ರದ ಇನ್ನು ಅಧಿಕೃತವಾಗಿ ಪ್ರಕಟವಾಗಿಲ್ಲ.

ಇದನ್ನೂ ಓದಿ: ಪುರುಷರು ತಪ್ಪು ಮಾಡಿದರೆ ಏಕೆ ಪ್ರಶ್ನಿಸೋದಿಲ್ಲ ಎಂದ Samantha: ಹೊಸ ಪೋಸ್ಟ್​ ವೈರಲ್​..!

ಸಮಂತಾ ಅವರಿಗೆ ತಮ್ಮ ವೈವಾಹಿಕ ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟದ ಸಮಯವನ್ನು ಎದುರಿಸುವುದು ದೊಡ್ಡ ಸವಾಲಾಗಿದೆ. ಇನ್ನು ಈ ಜೋಡಿಯ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾಲದಕ್ಕೆ ನಾಗ ಚೈತನ್ಯ ಹಾಗೂ ಸಮಂತಾ ಅವರ ವೈಯಕ್ತಿಕ ಜೀವನದ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತಾಗಿ ನಟಿ ಸಮಂತಾ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಒಂದು ಪೋಸ್ಟ್​ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದರು.

ಅಕ್ಟೋಬರ್ 2 ರಂದು ಸಮಂತಾ ಹಾಗೂ ನಾಗ ಚೈತನ್ಯ ಅವರು ತಮ್ಮ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಈ ಸುದ್ದಿ ಅಕ್ಕಿನೇನಿ ಕುಟುಂಬ ಹಾಗೂ ಸಮಂತಾ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿದಿತ್ತು. ಇದರ ನಡುವೆ ಈಗ ಈ ವಿಚ್ಛೇದನಕ್ಕೆ ಕಾರಣ ಸಮಂತಾ ಅವರೇ ಎನ್ನುವಂತಹ ಗಾಳಿ ಸುದ್ದಿಗಳು ಹರಿದಾಡುತ್ತಿವೆ.ಇದನ್ನೂ ಓದಿ: Samantha Naga Chaitanya Divorce: ಒಂದು ಕಡೆ ವಿಚ್ಛೇದನದ ಸುದ್ದಿ, ಮತ್ತೊಂದು ಕಡೆ ಪಾರ್ಟಿ ಮಾಡೋದ್ರಲ್ಲಿ ಬ್ಯುಸಿಯಾದ ಸಮಂತಾ

ಹರಿದಾಡುತ್ತಿರುವ ವದಂತಿಗಳ ಕುರಿತಾಗಿ ಸಮಂತಾ ಅವರು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದರು. ಅಲ್ಲದೆ ಯಾರು ಈ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ ಅವರಿಗೆ ಸರಿಯಾಗಿ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯಿಸಿದ್ದರು. ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಒಂದು ಪುಟ್ಟ ನೋಟ್​ ಹಂಚಿಕೊಂಡಿರುವ ಸಮಂತಾ, ತನ್ನ ಕಷ್ಟದ ದಿನಗಳಲ್ಲಿ ನೈತಿಕವಾಗಿ ಬೆಂಬಲ ಕೊಟ್ಟು ಎಲ್ಲರಿಗೂ ಧನ್ಯವಾದ ತಿಳಿಸಿದ್ದರು.

ಇದರ ಜೊತೆಗೆ ತಮ್ಮ ಕುರಿತಾಗಿ ಹಬ್ಬಿಸುತ್ತಿರುವ ವದಂತಿಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದರು. ನನಗೆ ಅಫೇರ್ಸ್​ ಇವೆ. ನನಗೆ ಮಕ್ಕಳು ಮಾಡಿಕೊಳ್ಳಲು ಇಷ್ಟವಿರಲಿಲ್ಲ. ನಾನು ಅವಕಾಶವಾದಿ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ಜೊತೆಗೆ ಈಗ ಅಬಾರ್ಷನ್​ ಸುದ್ದಿ ಸಹ ಸೇರಿಕೊಂಡಿದೆ. ಇವೆಲ್ಲ ಸುಳ್ಳು ಸುದ್ದಿಗಳು. ಇದರಲ್ಲಿ ಯಾವುದೇ ಹುರುಳಿಲ್ಲ. ಇನ್ನು ಯಾರ ಜೀವನದಲ್ಲಾದರೂ ವಿಚ್ಛೇದನ ಅನ್ನೋದು ನೋವಿನಿಂದ ಕೂಡಿದ ಪ್ರಕ್ರಿಯೆ. ಇಂತಹ ಸಮಯದಲ್ಲಿ ಹೀಗೆಲ್ಲ ವೈಯಕ್ತಿಕವಾಗಿ ನಡತೆ ಬಗ್ಗೆ ದಾಳಿ ಮಾಡುವುದು ಸರಿಯಲ್ಲ. ನಾನು ನಿಮಗೆ ಮಾತು ನೀಡುತ್ತೇನೆ. ಹೀಗೆಲ್ಲ ಸುದ್ದಿ ಹಬ್ಬಿಸಿ ನನ್ನನ್ನು ಒಳಗಿನಿಂದ ಮುರಿಯಬಹುದು ಎಂದು ನೀವು ತಿಳಿಯಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದರು ಸಮಂತಾ.
Published by:Anitha E
First published: