Samantha: ಬಾಕ್ಸ್​ ಆಫೀಸ್​​ನಲ್ಲಿ ಮಾಜಿ ಪತ್ನಿ-ಪತಿ ಮುಖಾಮುಖಿ! ನಾಗಚೈತನ್ಯಗೆ ಸವಾಲೆಸೆದ ಸಮಂತಾ

ತುಂಬಾ ಅನನ್ಯವಾಗಿದ್ದು ಈ ಜೋಡಿ ಇದ್ದಕ್ಕಿದ್ದ ಹಾಗೆ ದೂರವಾಗಿ ಬಿಟ್ಟಿದ್ದರು. ನಟಿ ಸಮಂತಾ ಹಾಗೂ ನಾಗಚೈತನ್ಯ ತಮ್ಮ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ನಾನೊಂದು ತೀರಾ.. ನೀನೊಂದು ತೀರಾ ಅನ್ನುತ್ತಿದೆ ಬಹಳ ಪ್ರೀತಿಸುತ್ತಿದ್ದ ಜೋಡಿ.

ಸಮಂತಾ, ನಾಗಚೈತನ್ಯ

ಸಮಂತಾ, ನಾಗಚೈತನ್ಯ

  • Share this:
ಸಮಂತಾ (Samantha) ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಟಾಕ್​ ಆಫ್​ ದಿ ಟೌನ್ ​(Talk of The Town) ಅಂದರೆ ತಪ್ಪಾಗುವುದಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಸಮಂತಾ ಸುದ್ದಿಯಾಗುತ್ತಿರುತ್ತಾರೆ. ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದ ಸಮಂತಾ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದು ವೃತ್ತಿ ಜೀವನದತ್ತ ಗಮನಹರಿಸಿದ್ದಾರೆ. ಮದುವೆ ಬಳಿಕ ವಿಶೇಷ ಮಹಿಳಾ(Woman's) ಪ್ರಧಾನ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆ(Small Screen)ಯಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ತಮ್ಮನ್ನ ಬಹುಮುಖ ಪ್ರತಿಭೆ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಊರ ಕಣ್ಣು.. ಯಾರ ಕಣ್ಣು.. ಮಾರಿ ಕಣ್ಣು.. ಹೋರಿ ಕಣ್ಣು.. ಯಾವ ಮಸಣಿ ಕಣ್ಣು.. ಬಿತ್ತಮ್ಮ ಬಿತ್ತಮ್ಮ.. ಇವರ ಪ್ರೀತಿ ಮ್ಯಾಗೆ.. ಎಂಬ ಹಾಡನ್ನು ಎಲ್ಲರೂ ಕೇಳಿದ್ದೀರಾ. ಇದೀಗ ಸಮಂತಾ(Samantha) ನಾಗಚೈತನ್ಯ(Nagachaitnaya) ಅವರ ಜೋಡಿಯನ್ನು ನೋಡಿದರೆ ಈ ಹಾಡು ನೆನಪಾಗುತ್ತೆ.

ನಾಗಚೈತನ್ಯಗೆ  ಸವಾಲೆಸೆದ ಸಮಂತಾ!

ತುಂಬಾ ಅನನ್ಯವಾಗಿದ್ದು ಈ ಜೋಡಿ ಇದ್ದಕ್ಕಿದ್ದ ಹಾಗೆ ದೂರವಾಗಿ ಬಿಟ್ಟಿದ್ದರು. ನಟಿ ಸಮಂತಾ ಹಾಗೂ ನಾಗಚೈತನ್ಯ ತಮ್ಮ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ನಾನೊಂದು ತೀರಾ.. ನೀನೊಂದು ತೀರಾ ಅನ್ನುತ್ತಿದೆ ಬಹಳ ಪ್ರೀತಿಸುತ್ತಿದ್ದ ಜೋಡಿ. ಇಬ್ಬರೂ ಇದೀಗ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಸಮಂತಾ ಇದೀಗ ಮಾಜಿ ಪತಿ ನಾಗಚೈತನ್ಯಗೆ ಸವಾಲೆಸೆದಿದ್ದಾರೆ. ಹೌದು, ನಾಗಚೈತನ್ಯ ಸಿನಿಮಾ ರಿಲೀಸ್​ ಆಗುತ್ತಿರುವ ದಿನವೇ ಸಮಂತಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಕೂಡ ರಿಲೀಸ್​ ಅಗುತ್ತಿದೆ.

ಲಾಲ್ ಸಿಂಗ್ ಛಡ್ಡಾ ರಿಲೀಸ್​ ದಿನವೇ ಯಶೋಧಾ ಬಿಡುಗಡೆ!

ಲಾಲ್​ ಸಿಂಗ್​ ಛಡ್ಡಾ ಸಿನಿಮಾದಲ್ಲಿ ಆಮಿರ್ ಖಾನ್​ ಹಾಗೂ ಕರೀನಾ ಕಪೂರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ನಟ ನಾಗಚೈತನ್ಯ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಾಗಚೈತನ್ಯ ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಆಗಸ್ಟ್​ 11ರಂದು ಈ ಸಿನಿಮಾ ರಿಲೀಸ್​ ಆಗುತ್ತಿದೆ. ಒಂದು ದಿನದ ನಂತರ ಮಾಜಿ ಪತ್ನಿ ಸಮಂತಾ ಅವರ ಯಶೋದಾ ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಈ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಮಾಜಿ ಪತ್ನಿ-ಪತಿ ಸಿನಿಮಾಗಳು ಮುಖಾಮುಖಿಯಾಗುತ್ತಿದೆ.ಇದನ್ನೂ ಓದಿ: ಕೊನೆಗೂ ಆಮಿರ್​ ಖಾನ್​ ಆಂತಕ ನಿಜವಾಯ್ತು, ರಾಕಿ ಭಾಯ್ ಅಬ್ಬರಕ್ಕೆ ದಂಗಲ್​ ದಾಖಲೆ ಧೂಳಿಪಟ!

ಯಶೋದಾ ಗ್ಲಿಂಪ್ಸ್​ ವಿಡಿಯೋ ರಿಲೀಸ್​!

ಸಮಂತಾ ಅವರೇ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಯಶೋದಾ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಅಭಿಮಾನಿಗಳು ಸಮಂತಾ ಲುಕ್ ಕಂಡು ಫಿದಾ ಆಗಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಈ ಮೂಲಕ ಸಮಂತ್ ಮತ್ತೊಂದು ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಈ ಗ್ಲಿಂಪ್ಸ್ ಜೊತೆಗೆ ಯಶೋದ ಸಿನಿಮಾದ ಸಣ್ಣ ವಿಡಿಯೋ ತುಣುಕನ್ನು ಕೂಡ ಇಂದು ರಿಲೀಸ್ ಮಾಡಲಾಗಿದ್ದು, ಈ ವಿಡಿಯೋ ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಮಕ್ಕಳಷ್ಟೇ ಸುಂದರವಾಗಿದ್ದಾರೆ ಈ ಬಾಲಿವುಡ್​ ನಟಿಯರ ತಾಯಂದಿರು!

ಚಕ್ರವ್ಯೂಹದಲ್ಲಿ ಸಿಲುಕಿದ್ರಾ ಸಮಂತಾ!

ಈಗಾಗಲೇ ಸಿನಿಮಾದ ಶೇ.80ರಷ್ಟು ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ತೊಡಗಿದೆ ಚಿತ್ರತಂಡ. ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ಈ ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ಈ ವಿಡಿಯೋದಲ್ಲಿ ಸಮಂತಾ ಆಸ್ಪತ್ರೆ ಅಥವಾ ಜೈಲಿನಂತಿರುವ ಕಟ್ಟಡದಲ್ಲಿ ಮಲಗಿರುತ್ತಾರೆ. ನಂತರ ಎದ್ದು ಕಿಟಕಿ ಬಳಿ ಬಂದು ಅಲ್ಲೇ ಕುಳಿತಿದ್ದ ಪಾರಿವಾಳ ಮುಟ್ಟಲು ಮುಂದಾಗುತ್ತಾರೆ. ನಂತರ ಆ ಕಟ್ಟಡವನ್ನು ತೋರಿಸಲಾಗಿದೆ. ಈ ಕಟ್ಟಡ ನೋಡಿದರೆ ಇದೊಂದು ಚಕ್ರವ್ಯೂಹದಂತೆ ಕಾಣುತ್ತಿದೆ
Published by:Vasudeva M
First published: