ರಾಣಾ ಹಾಗೂ ಮಿಹಿಕಾರ 'ರೊಕಾ' ಮೊನ್ನೆಯಷ್ಟೆ ನಡೆದಿದೆ. ಹೈದರಾಬಾದಿನಲ್ಲಿ ಸರಳವಾಗಿ ನಡೆದ ಸಮಾರಂಭದ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನಿನ್ನೆ
ರಾಣಾ-ಮಿಹಿಕಾರ ನಿಶ್ಚಿತಾರ್ಥ ನಡೆದಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ರಾಣಾ ನಡೆದದ್ದು ನಿಶ್ಚಿತಾರ್ಥ ಅಲ್ಲ ಅದು ರೊಕಾ ಎಂದು ಸ್ಪಷ್ಟಪಡಿಸಿದರು. ಈ ರೊಕಾದಲ್ಲಿ ರಾಣಾ ಸಂಬಂಧಿಕರು ಹಾಗೂ ಕೆಲ ಸೆಲೆಬ್ರಿಟಿಗಳೂ ಭಾಗಿಯಾಗಿದ್ದರು.
![samantha and Naga Chaitanya attended Rana Daggubati and miheekas roka function]()
ಮಿಹಿಕಾ ಬಜಾಜ್
ಸಿನಿ ರಂಗದ ಸ್ಟಾರ್ ನಟ ಮನೆಯಲ್ಲಿ ನಡೆಯುವ ಸಮಾರಂಭ ಎಂದರೆ ಸೆಲೆಬ್ರಿಟಿಗಳ ದಂಡೇ ಅಲ್ಲಿರುತ್ತದೆ. ಆದರೆ ಲಾಕ್ಡೌನ್ನಿಂದಾಗಿ ತುಂಬಾ ಜನರು ಸೇರುವಂತಿರಲಿಲ್ಲ. ಈ ಕಾರಣದಿಂದಾಗಿ ರಾಣಾ-ಮಿಹಿಕಾರ ರೊಕಾದಲ್ಲಿ ಕಡಿಮೆ ಜನರು ಭಾಗಿಯಾಗಿದ್ದರು. ಅವರಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಇದ್ದದ್ದು ವಿಶೇಷ.
ರಾಣಾ, ಮಿಹಿಕಾ, ನಾಗ ಚೈತನ್ಯ ಹಾಗೂ ಸಮಂತಾ ಒಳ್ಳೆಯ ಸ್ನೇಹಿತರಂತೆ. ಇದೇ ಕಾರಣಕ್ಕೆ ಈ ಜೋಡಿಯ ವಿಶೇಷ ದಿನದಂದು ಹಾಜರಾಗಿದ್ದಾರೆ. ಇನ್ನು ರಾಣಾ ಹಾಗೂ ಮಿಹಿಕಾ ಈ ಈ ಕಾರ್ಯಕ್ರಮದಲ್ಲಿ ತುಂಬಾ ಸಿಂಪಲ್ ಆಗಿ ರೆಡಿಯಾಗಿದ್ದರು.
ಇದನ್ನೂ ಓದಿ: ಸ್ಯಾಂಡಲ್ವುಡ್ನಿಂದ ಸಿನಿ ಜೀವನ ಆರಂಭಿಸಿದ ಈ ನಟಿ ಬೆತ್ತಲಾಗಿ ನಟಿಸಿದರೂ ಗಂಡ ನೋ ಹೇಳುವುದಿಲ್ಲವಂತೆ..!
ಮೊನ್ನೆ ನಡೆದ ರೊಕಾದಲ್ಲಿ ರಾಣಾ ಮತ್ತು ಮಿಹಿಕಾರ ನಿಶ್ಚಿತಾರ್ಥ ಹಾಗೂ ಮದುವೆಯ ದಿನಾಂಕದ ಬಗ್ಗೆ ಮಾತುಕತೆ ನಡೆದಿದೆಯಂತೆ. ಆದರೆ ಈ ಜೋಡಿಯ ವಿವಾಹ ನಡೆಯುವ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ.
Adah Sharma: ಹೊಸ ಚಾಲೆಂಜ್ ಕೊಟ್ಟ ಅದಾ ಶರ್ಮಾ: ಹಾಟ್ ಫೋಟೋಗಳು ವೈರಲ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ