Naga Chaitanya - Samantha: ಸ್ಟಾರ್​ ನಿರ್ದೇಶಕನ ಸಿನಿಮಾದಲ್ಲಿ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ ನಾಗ ಚೈತನ್ಯ- ಸಮಂತಾ..!

Naga Chaitanya And Samantha: ನಿಜ ಜೀವನದಲ್ಲೂ ಹಿಟ್ ಜೋಡಿಯಾಗಿರುವ ಸಮಂತಾ ಹಾಗೂ ನಾಗ ಚೈತನ್ಯ ಮತ್ತೆ ತೆರೆ ಮೇಲೆ ಮತ್ತೊಂದು ಹಿಟ್​ ಸಿನಿಮಾ ನೀಡಲು ಸಜ್ಜಾಗುತ್ತಿದ್ದಾರೆ. ಗೀತ ಗೋವಿಂದಂ ನಂತಹ ಬ್ಲಾಕ್​ ಬಸ್ಟರ್​ ಸಿನಿಮಾ ಕೊಟ್ಟ ನಿರ್ದೇಶಕ ಪರಶುರಾಮ್​ ಅವರ ಮುಂದಿನ ಸಿನಿಮಾದಲ್ಲಿ ನಾಗ್​ ಹಾಗೂ ಸಮಂತಾ ಅಭಿನಯಿಸಲಿದ್ದಾರಂತೆ.

Anitha E | news18-kannada
Updated:December 2, 2019, 7:04 PM IST
Naga Chaitanya - Samantha: ಸ್ಟಾರ್​ ನಿರ್ದೇಶಕನ ಸಿನಿಮಾದಲ್ಲಿ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ ನಾಗ ಚೈತನ್ಯ- ಸಮಂತಾ..!
ನಾಗಚೈತನ್ಯ ಹಾಗೂ ಸಮಂತಾ
  • Share this:
ಸಮಂತಾ ಹಾಗೂ ನಾಗ ಚೈತನ್ಯ ಅಭಿನಯದ 'ಮಜಿಲಿ' ಸಿನಿಮಾ ಬಾಕ್ಸಾಫಿಸ್​ನಲ್ಲಿ ಸಖತ್​ ಸದ್ದು ಮಾಡಿತ್ತು. ಹೀಗಿರುವಾಗಲೇ ಈ ಜೋಡಿ ಮತ್ತೊಮ್ಮ ಸಿಹಿ ಸುದ್ದಿ ಕೊಟ್ಟಿದೆ. ಹೌದು, ಟಾಲಿವುಡ್​ನ ಸ್ಟಾರ್​ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ಮತ್ತೆ ನಾಗ ಚೈತನ್ಯ ಹಾಗೂ ಸಮಂತಾರನ್ನು ನೋಡುವ ಅವಕಾಶ ನಿಮ್ಮದಾಗಲಿದೆ.

'ಮಜಿಲಿ' ಸಿನಿಮಾದ ನಂತರ ತಮ್ಮ ಸೋದರ ಮಾವ ವೆಂಕಟೇಶ್​ ಜೊತೆ 'ವೆಂಕಿ ಮಾಮ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಲು ಸಾಲು ಫ್ಲಾಪ್​ ಸಿನಿಮಾಗಳನ್ನು ಕೊಟ್ಟಿದ್ದ ನಾಗ ಚೈತನ್ಯಗೆ 'ಮಜಿಲಿ' ಹಿಟ್​ ಕೊಡುವುದರೊಂದಿಗೆ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸುವ ಆತ್ಮವಿಶ್ವಾಸ ತಂದುಕೊಟ್ಟಿತ್ತು ಎನ್ನಬಹುದು. ಅದೂ ಸಹ ಈ ಚಿತ್ರ ಹಿಟ್​ ಆಗಲು ಕಾರಣ ಸಮಂತಾ ಎಂದೂ ಟಾಲಿವುಡ್​ನಲ್ಲಿ ಟಾಕ್​ ಆರಂಭವಾಗಿತ್ತು.

.
'ಗೀತ ಗೋವಿಂದಂ' ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ


ನಿಜ ಜೀವನದಲ್ಲೂ ಹಿಟ್ ಜೋಡಿಯಾಗಿರುವ ಸಮಂತಾ ಹಾಗೂ ನಾಗ ಚೈತನ್ಯ ಮತ್ತೆ ತೆರೆ ಮೇಲೆ ಮತ್ತೊಂದು ಹಿಟ್​ ಸಿನಿಮಾ ನೀಡಲು ಸಜ್ಜಾಗುತ್ತಿದ್ದಾರೆ. 'ಗೀತ ಗೋವಿಂದಂ' ನಂತಹ ಬ್ಲಾಕ್​ ಬಸ್ಟರ್​ ಸಿನಿಮಾ ಕೊಟ್ಟ ನಿರ್ದೇಶಕ ಪರಶುರಾಮ್​ ಅವರ ಮುಂದಿನ ಸಿನಿಮಾದಲ್ಲಿ ನಾಗ್​ ಹಾಗೂ ಸಮಂತಾ ಅಭಿನಯಿಸಲಿದ್ದಾರಂತೆ.

14 ರೀಲ್ಸ್​ ಎಂಟರ್​ಟೈನ್​ಮೆಂಟ್​ ಬ್ಯಾನರ್​ ಅಡಿ ನಿರ್ಮಾಣಗೊಳ್ಳಲಿರುವ ಈ ಚಿತ್ರದ ಕತೆಯ ಬಗ್ಗೆ ನಾಗ ಚೈತನ್ಯ ಜೊತೆ ಚರ್ಚಿಸಲಾಗಿದೆಯಂತೆ. ಪರಶುರಾಮ್​ ಅವರ ನಿರ್ದೇಶನದಲ್ಲಿ ಈ ಸಿನಿಮಾ ಸೆಟ್ಟೇರಲಿದ್ದು, ನಾಗ ಚೈತನ್ಯ ಅವರಿಗೆ ಜೊತೆಯಾಗಿ ಸಮಂತಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನಟಿ ಕಂಗನಾ ಬಳಸುವ ಒಂದು ಹ್ಯಾಂಡ್​ ಬ್ಯಾಗ್​ ಬೆಲೆ ಸಾಮಾನ್ಯನ ವಾರ್ಷಿಕ ಆದಾಯಕ್ಕಿಂತ ಹೆಚ್ಚು..!

ರೊಮ್ಯಾಂಟಿಕ್​ ಡ್ರಾಮಾ ಆಗಿರುವ ಈ ಚಿತ್ರದಲ್ಲಿ ಮತ್ತೆ ನಾಗ ಚೈತನ್ಯ ಹಾಗೂ ಸಮಂತಾ ಕಾಣಿಸಿಕೊಂಡರೆ ಮತ್ತೊಂದು ಸೂಪರ್ ಹಿಟ್​ ಸಿನಿಮಾ ಆಗಲಿದೆ ಅನ್ನೋ ಟಾಕ್​ ಈಗ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತಾಗಿ ಚಿತ್ರತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. 

 Pranutan Bahl: ಸಿಕ್ಕಾಪಟ್ಟೆ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಕಾಜೋಲ್​ ಕುಟುಂಬದ ಉಯೋನ್ಮುಖ ನಟಿ..!

First published: December 2, 2019, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading