96 ತೆಲುಗು ರಿಮೇಕ್​ ಸಿನಿಮಾಗೆ ಗುಡ್​ಬೈ ಹೇಳಿದ ಸಮಂತಾ ಅಕ್ಕಿನೇನಿ..!

96 Movie: ವಿವಾಹವಾದ ನಂತರ ಸಮಂತಾ ಅಭಿನಯಿಸಿದ ರಂಗಸ್ಥಲಂ, ಮಜಿಲಿ, ಓ ಬೇಬಿ, ಸೂಪರ್​ ಡಿಲಕ್ಸ್​ ಸಿನಿಮಾಗಳು ಹಿಟ್ ಆದ ಸಿನಿಮಾಗಳು. ಇವುಗಳೊಂದಿಗೆ ಸಮಂತಾ ತಮಿಳು ಸಿನಿಮಾ 96ನ ತೆಲುಗು ರಿಮೇಲ್​ನಲ್ಲೂ ಅಭಿನಯಿಸುತ್ತಿದ್ದರು. ಆದರೆ ಈಗ ಈ ಬ್ಯೂಟಿ ರಿಮೇಕ್​ ಚಿತ್ರಕ್ಕೆ ಗುಡ್​ ಬೈ ಹೇಳಿದ್ದಾರೆ. 

Anitha E | news18-kannada
Updated:October 13, 2019, 3:16 PM IST
96 ತೆಲುಗು ರಿಮೇಕ್​ ಸಿನಿಮಾಗೆ ಗುಡ್​ಬೈ ಹೇಳಿದ ಸಮಂತಾ ಅಕ್ಕಿನೇನಿ..!
ಸಮಂತಾ ಅಕ್ಕಿನೇನಿ
  • Share this:
ನಟಿ ಸಮಂತಾ ವಿವಾಹದ ನಂತರವೂ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಸಕ್ಸಸ್​ಫುಲ್​ ನಟಿ. ಅವರಿಗೆ ವಿವಾಹವಾದ ನಂತರವೂ ಅಭಿಮಾನಿಗಳ ಸಂಖ್ಯೆಯಲ್ಲಿ ಯಾವುದೇ ಕೊರತೆಯಾಗಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಇವರಿಗಿರುವ ಅಭಿಮಾನಿಗಳು ದಿನೇ ದಿನೇ ಹೆಚ್ಚುತ್ತಿದ್ದಾರೆ.

ವಿವಾಹವಾದ ನಂತರ ಸಮಂತಾ ಅಭಿನಯಿಸಿದ 'ರಂಗಸ್ಥಲಂ', 'ಮಜಿಲಿ', 'ಓ ಬೇಬಿ', 'ಸೂಪರ್​ ಡಿಲಕ್ಸ್​' ಸಿನಿಮಾಗಳು ಹಿಟ್ ಆದ ಸಿನಿಮಾಗಳು. ಇವುಗಳೊಂದಿಗೆ ಸಮಂತಾ ತಮಿಳು ಸಿನಿಮಾ '96'ನ ತೆಲುಗು ರಿಮೇಲ್​ನಲ್ಲೂ ಅಭಿನಯಿಸುತ್ತಿದ್ದರು. ಆದರೆ ಈಗ ಈ ಬ್ಯೂಟಿ ಚಿತ್ರಕ್ಕೆ ಗುಡ್​ ಬೈ ಹೇಳಿದ್ದಾರೆ.
ಸಮಂತಾ ಗುಡ್​ ಬೈ ಹೇಳಿದರು ಎಂದ ಕೂಡಲೇ ಶಾಕ್​ ಆಗುವ ಅಗತ್ಯವಿಲ್ಲ. '96' ತಮಿಳು ಸಿನಿಮಾದ ತೆಲುಗು ರಿಮೇಕ್​ನ ಚಿತ್ರೀಕರಣಕ್ಕೆ ತೆರೆ ಎಳೆಯಲಾಗಿದೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ವಿಷಯವನ್ನು ಸಮಂತಾ ತಮ್ಮ ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಂಧನದ ಭೀತಿಯಲ್ಲಿ ಬಾಲಿವುಡ್​ ನಟಿ ಅಮಿಷಾ ಪಟೇಲ್​..!

ಈ ಸಿನಿಮಾ ವಿಶೇಷವಾದದ್ದು, ಎಂದಿನಂತೆ ಈ ಪಾತ್ರವೂ ನನಗೆ ಸವಾಲಾಗಿತ್ತು. ಈ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದು ಖುಷಿ ನೀಡಿದೆ ಎಂದು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ತಮಿಳಿನಲ್ಲಿ ವಿಜಯ್​ ಸೇತುಪತಿ ಹಾಗೂ ತ್ರಿಶಾ ಅಭಿನಯಿಸಿದ್ದ ಪಾತ್ರಗಳಲ್ಲಿ ಸಮಂತಾ ಹಾಗೂ ಶರ್ವಾನಂದ ತೆಲುಗಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ ನಿರ್ದೇಶನ ಮಾಡಿದ್ದ ನಿರ್ದೇಶಕ ಪ್ರೇಮ್​ಕುಮಾರ್​ ಅವರೇ ತೆಲುಗಿನಲ್ಲೂ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

 

ವಿಭಿನ್ನ ಫೋಟೋಶೂಟ್​ನಿಂದಲೇ ಸಖತ್ ಸದ್ದು ಮಾಡುತ್ತಿದ್ದಾರೆ ಈ ಸ್ಯಾಂಡಲ್​ವುಡ್​ ನಟಿ..!


 
First published:October 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading