Samantha -Naga Chaitanya Dispute: ಮಗು ಮಾಡಿಕೊಳ್ಳುವ ಪ್ಲ್ಯಾನ್​ನಲ್ಲಿದ್ರು ಸಮಂತಾ -ನಾಗ ಚೈತನ್ಯ..!

Naga Chaitanya And Samantha Akkineni: ಸಮಂತಾ ಪೋಷಕರು, ಸ್ನೇಹಿತರು ಹಾಗೂ ಆಕೆಯ ಜೊತೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದ ಕೆಲ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಆಕೆಗೆ ಕುಟುಂಬ ಎಷ್ಟು ಮುಖ್ಯ ಎಂಬುದು ತಿಳಿದಿದೆ.  ಇನ್ನು ಈ ಅವರ ವೈಯಕ್ತಿಕ ಸಂಬಂಧದ ಬಗ್ಗೆ ಏನನ್ನೂ ಹೇಳಲು ಟಾಲಿವುಡ್ ಮೂಲ ನಿರ್ಧರಿಸಿದೆ.

ಸಮಂತಾ ಅಕ್ಕಿನೇನಿ- ನಾಗ ಚೈತನ್ಯ

ಸಮಂತಾ ಅಕ್ಕಿನೇನಿ- ನಾಗ ಚೈತನ್ಯ

  • Share this:
ಟಾಲಿವುಡ್  (Tollywood)ಕ್ಯೂಟ್ ಜೋಡಿ  ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯರ (Samantha Akkineni and Naga Chaitanya) ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ವರದಿಯ ಪ್ರಕಾರ, ಅವರ ನಡುವೆ ಎಲ್ಲವೂ ಸರಿಯಿಲ್ಲ ಮತ್ತು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೆಯೆ ಈಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ ನಾಗ ಚೈತನ್ಯ ಜೊತೆ  ಕುಟುಂಬವನ್ನು ಪ್ರಾರಂಭಿಸಲು ಸಮಂತಾ ಉತ್ಸುಕರಾಗಿದ್ದರು. ಅವರು ಹೊಸ ಬದುಕಿನ ಆಲೋಚನೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ.  

ಟಾಲಿವುಡ್​ನ ಒಂದು ಮೂಲದ ಪ್ರಕಾರ.  ಟಾಲಿವುಡ್​ನಲ್ಲಿ ಹೆಚ್ಚಿನ ಜನರು ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯರ ಬದುಕಿನ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಯ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ. ಸಂಮಂತಾ ಉತ್ತಮ ನಟಿಯ ಜೊತೆ ಹೆಚ್ಚು ಕುಟುಂಬದ ಬಗ್ಗೆ ಗಮನ ನೀಡುವ ವ್ಯಕ್ತಿತ್ವದವರು. ಆಕೆಗೆ ಕುಟುಂಬ ಬಹಳ ಮುಖ್ಯ. ಅಲ್ಲದೇ ಸಮಂತಾ ನಾಗಚೈತನ್ಯ ಜೊತೆ ಕುಟುಂಬ ಪ್ರಾರಂಭಿಸಲು ನಿರ್ಧರಿಸಿದ್ದರು. ಅದೇ ಕಾರಣಕ್ಕಾಗಿ ಅವರು ಯಾವುದೇ ಪ್ರಾಜೆಕ್ಟ್ಗೆ ಸಹಿ ಹಾಕಿರಲ್ಲಿ, ಜೊತೆಗೆ  ಸ್ಕ್ರಿಪ್ಟ್ ಗಳನ್ನು ಸಹ ಕೇಳಿರಲ್ಲಿ.  ಕುಟುಂಬ ಅವರ ಆದ್ಯತೆಯಾಗಿತ್ತು.

ಸಮಂತಾ ಪೋಷಕರು, ಸ್ನೇಹಿತರು ಹಾಗೂ ಆಕೆಯ ಜೊತೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದ ಕೆಲ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಆಕೆಗೆ ಕುಟುಂಬ ಎಷ್ಟು ಮುಖ್ಯ ಎಂಬುದು ತಿಳಿದಿದೆ.  ಇನ್ನು ಈ ಅವರ ವೈಯಕ್ತಿಕ ಸಂಬಂಧದ ಬಗ್ಗೆ ಏನನ್ನೂ ಹೇಳಲು ಟಾಲಿವುಡ್ ಮೂಲ ನಿರ್ಧರಿಸಿದೆ. ಏಕೆಂದರೆ ಸ್ಯಾಮ್ ಮತ್ತು  ನಾಗ ಚೈತನ್ಯ ಮಗುವನ್ನು  ಪಡೆಯಲು ಯೋಜಿಸುತ್ತಿದ್ದರಿಂದ ಅವರು  ಗೊಂದಲಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಬಂಧನದ ಭೀತಿಯಲ್ಲಿ ಬಾಲಿವುಡ್ ​ನಟಿ Kangana Ranaut

ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ 2017 ರಲ್ಲಿ ಗೋವಾದಲ್ಲಿ  ಅದ್ಭುತವಾಗಿ ವಿವಾಹವಾಗಿದ್ದರು. ಅವರು ಮೊದಲು ಸಾಂಪ್ರದಾಯಿಕ ಹಿಂದೂ ವಿವಾಹವಾಗಿ ನಂತರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ನಡುವೆ ಕ್ರಿಶ್ಚಿಯನ್ ವಿವಾಹ ಮಾಡಿಕೊಂಡಿದ್ದರು.

ಕೆಲಸದ ವಿಚಾರಕ್ಕೆ ಬಂದರೆ ಸಮಂತಾ ಅಕ್ಕಿನೇನಿ, ತಮ್ಮ ಮುಂಬರುವ ಯೋಜನೆಗಳಿಗಾಗಿ ಚಿತ್ರೀಕರಣ ಮುಗಿಸಿ, ವಿರಾಮ ತೆಗೆದುಕೊಂಡಿದ್ದಾರೆ. ಆಕೆ ತನ್ನ ಎರಡು ಪ್ರಾಜೆಕ್ಟ್‌ಗಳ ಚಿತ್ರೀಕರಣ ಮುಗಿಸಿದ್ದಾರೆ. ಗುಣಶೇಖರ್ ಅವರ ಪೌರಾಣಿಕ ಚಿತ್ರ ಶಾಕುಂತಲಂ ಮತ್ತು ವಿಘ್ನೇಶ್ ಶಿವನ್ ನಿರ್ದೇಶನದ ತಮಿಳು ಚಿತ್ರ ಕಾತು ವಾಕುಲಾ ಎರಡು ಕಾದಲ್ ಚಿತ್ರಗಳ ಮೂಲಕ ತೆರೆಯ ಮೇಲೆ ಮಿಂಚಲಿದ್ದಾರೆ.

ಅಲ್ಲದೇ ಕಳೆದ ಕೆಲವು ದಿನಗಳಿಂದ ಕಾಲಿವುಡ್ ನಟಿ ಸಮಂತಾ ಮತ್ತು ನಾಗಚೈತನ್ಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಗುಸುಗುಸು ಕೇಳಿ ಬಂದಿತ್ತು. ಇದಕ್ಕೆ ಕಾರಣ , ಸಮಂತಾ ಅವರ ಟ್ವಿಟರ್ ಖಾತೆಯ ಹೆಸರು ಬದಲಾವಣೆ.  ಮದುವೆಗೂ ಮುನ್ನ ಸಮಂತಾ ರುತ್‌ ಪ್ರಭು ಎಂದಿದ್ದ ಹೆಸರನ್ನು ನಂತರ ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು. ಆದರೆ, ಇದೀಗ ಟ್ವಿಟರ್ ಖಾತೆಯ ಹೆಸರು ಬರಿ   ಎಸ್‌ ಎಂದು ಇದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.  ಸಮಂತಾ ಮತ್ತು ನಾಗಚೈತನ್ಯ ದೂರವಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತಿತ್ತು. ಆದರೆ  ಬಗ್ಗೆ ಸಮಂತಾ ಆಗಲಿ ಅಥವಾ ನಾಗಚೈತನ್ಯ ಸೇರಿದಂತೆ ಅಕ್ಕಿನೇಮಿ ಕುಟುಂಬದ ಯಾವ ಸದಸ್ಯರೂ ಇದುವರೆಗೂ ತುಟಿ ಬಿಚ್ಚಿರಲಿಲ್ಲ,

ಇದನ್ನೂ ಓದಿ: Rajkumar Hirani ಜೊತೆ ಹೊಸ ಸಿನಿಮಾಗಾಗಿ ಕೈ ಜೋಡಿಸಿದ Shah Rukh Khan

ಆದರೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದಾಗ, 'ಯಾವುದೇ ವಿವಾದ ಅಥವಾ ಟ್ರೋಲ್‌ಗಳಿಗೆ ನನಗೆ ಪ್ರತಿಕ್ರಿಯಿಸಬೇಕು ಎಂದು ಎನಿಸಿದರೆ ಮಾತ್ರ ನಾನು ಪ್ರತಿಕ್ರಿಯೆ ನೀಡುತ್ತೇನೆ. ಯಾರೋ ಪ್ರತಿಕ್ರಿಯೆ ನೀಡಿ ಎಂದು ಹೇಳಿದ ಮಾತ್ರಕ್ಕೆ  ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ವಿಚಾರಗಳನ್ನು ಚರ್ಚಿಸುವ ಬಗ್ಗೆ ನನಗೆ ಆಸಕ್ತಿ ಮತ್ತು ಇಷ್ಟವಿಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ಹೇಗೆ ಹೇಳುವುದಕ್ಕೆ ಅವರಿಗೆ ಹೇಗೆ ಹಕ್ಕು ಇದೆಯೋ, ಹಾಗೇ ನನಗೂ ಹಕ್ಕು ಇದೆ' ಎಂದು ಖಾರವಾಗಿ  ಪ್ರತಿಕ್ರಿಯಿಸಿದ್ದರು.
Published by:Sandhya M
First published: