Samantha: ನಟನೆಯಿಂದ ಕೃಷಿಯತ್ತ: ತರಕಾರಿ ಬೆಳೆಯಲು ಮುಂದಾದ ಸಮಂತಾ ಅಕ್ಕಿನೇನಿ

Samantha Akkineni: ನಟನೆಯಿಂದ ಕೃಷಿಯತ್ತ ಮುಖ ಮಾಡಿರುವ ಸಮಂತಾ ರೈತ ಮಹಿಳೆಯಾಗುವ ಕನಸು ಕಂಡಿದ್ದರಂತೆ. ಇದೇ ಕಾರಣಕ್ಕೆ ಇರಬೇಕು ಈಗ ಅದನ್ನು ನನಸಾಗಿಸಿಕೊಳ್ಳಲು ಮುಂದಾಗಿದ್ದಾರೆ.

Anitha E | news18-kannada
Updated:May 30, 2020, 7:00 AM IST
Samantha: ನಟನೆಯಿಂದ ಕೃಷಿಯತ್ತ: ತರಕಾರಿ ಬೆಳೆಯಲು ಮುಂದಾದ ಸಮಂತಾ ಅಕ್ಕಿನೇನಿ
ಸಮಂತಾ ಅಕ್ಕಿನೇನಿ
  • Share this:
ಸಮಂತಾ ಅಕ್ಕಿನೇನಿ ಲಾಕ್​ಡೌನ್​ನಿಂದಾಗಿ ಸಿಕ್ಕಿರುವ ಸಮಯವನ್ನು ತಮಗೆ ಬೇಕಾದಂತೆ ಕಳೆಯುತ್ತಿದ್ದಾರೆ. ಮನೆಯಲ್ಲಿ ಗಂಡ ನಾಗ ಚೈತನ್ಯ ಹಾಗೂ ಮುದ್ದಾದ ನಾಯಿ ಮರಿಯೊಂದಿಗೆ ಖುಷಿಯಿಂದ ಎಂಜಾಯ್​ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ  ಪ್ರಯತ್ನದಲ್ಲಿದ್ದಾರೆ.

ನಟನೆಯಿಂದ ಕೃಷಿಯತ್ತ ಮುಖ ಮಾಡಿರುವ ಸಮಂತಾ ರೈತ ಮಹಿಳೆಯಾಗುವ ಕನಸು ಕಂಡಿದ್ದರಂತೆ. ಇದೇ ಕಾರಣಕ್ಕೆ ಇರಬೇಕು ಈಗ ಅದನ್ನು ನನಸಾಗಿಸಿಕೊಳ್ಳಲು ಮುಂದಾಗಿದ್ದಾರೆ.

samantha akkineni started terrace gardening and shears photos in Instagram  
ಸಮಂತಾ ಹಾಗೂ ನಾಗಚೈತನ್ಯ


ಸಮಂತಾ ತಮ್ಮ ಮನೆಯ ಮೇಲೆ ಟೆರೇಸ್​ನಲ್ಲಿ ತರಕಾರಿ ಬೆಳೆಯುವ ಪ್ಲಾನ್​ ಮಾಡಿದ್ದಾರೆ. ಇದು ಬಹಳ ಹಿಂದಿನ ಯೋಜನೆಯಾದರೂ ಅದನ್ನು ಮಾಡಲು ಲಾಕ್​ಡೌನ್​ನಿಂದಾಗಿ ಈಗ ಅವರಿಗೆ ಅವಕಾಶ ಸಿಕ್ಕಿದೆಯಂತೆ. ಟೆರೇಸ್ ಗಾರ್ಡನಿಂಗ್ ಬಗ್ಗೆ ಸಹ ತರಬೇತಿ ಪಡೆದಿದ್ದಾರಂತೆ ಸಮಂತಾ.

ಇದನ್ನೂ ಓದಿ: ಕೇರಳದಲ್ಲಿ ಸಿಲುಕಿದ್ದ 167 ಹೆಣ್ಣು ಮಕ್ಕಳಿಗೆ ಮನೆ ಸೇರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿದ ಸೋನು ಸೂದ್​

ಮನೆಯ ಮೇಲೆ ಚಿಕ್ಕದಾಗಿ ಹಾಗೂ ಚೊಕ್ಕವಾಗಿ ಕೃಷಿ ಮಾಡಲು ಬೇಕಿರುವ ತಯಾರಿ ನಡೆದಿದೆ. ಅದಕ್ಕೆ ಒಂದೇ ಒಂದು ಹೆಜ್ಜೆ ಮಾತ್ರ ಬಾಕಿ ಇದೆ ಎಂದು ಸಮಂತಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ತರಕಾರಿ ಬೆಳೆಯಲು ರೆಡಿಯಾಗುತ್ತಿರುವ ಟೆರೇಸ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ.

samantha akkineni started terrace gardening and shears photos in Instagram  
ಕೈ ತೋಟಕ್ಕೆ ಸಿದ್ಧಗೊಳ್ಳುತ್ತಿರುವ ಸಮಂತಾರ ಟೆರೇಸ್​
samantha akkineni started terrace gardening and shears photos in Instagram  
ಸಮಂತಾ ಅಕ್ಕಿನೇನಿ


ಮನೆಯಂಗಳದಲ್ಲಿ ಲಭ್ಯವಿರುವ ಜಾಗದಲ್ಲೇ ಅಡುಗೆಗೆ ಬೇಕಾದಷ್ಟು ತರಕಾರಿ ಬೆಳೆಯುವ ಸೆಲೆಬ್ರಿಟಿಗಳು ಸಾಕಷ್ಟು ಮಂದಿ ಇದ್ದಾರೆ. ನಟಿ ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ ಸೇರಿದಂತೆ ಹಲವರಿದ್ದಾರೆ. ಈ ಪಟ್ಟಿಗೆ ಈಗ ಸಮಂತಾ ಸಹ ಸೇರಿಕೊಂಡಿದ್ದಾರೆ.

 Kareena Kapoor: ಕರೀನಾರ ಇನ್​ಸ್ಟಾಗ್ರಾಂನಲ್ಲೂ ಸ್ಟಾರ್ ಕಿಡ್​ ತೈಮೂರ್​ನದ್ದೇ ದರ್ಬಾರ್​..!

First published: May 30, 2020, 7:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading