ಸಂದರ್ಶನಗಳಲ್ಲಿ ಎದುರಾಗುವ ಅಮಾನವೀಯ ಪ್ರಶ್ನೆಗಳ ಕುರಿತಾಗಿ ಮೌನ ಮುರಿದ Samantha

ಇತ್ತೀಚೆಗೆ ಫಿಲ್ಮ್ ಫೇರ್ ಜೊತೆ ಮಾತನಾಡಿದ ತೆಲುಗು ಚಿತ್ರ ನಟಿ ಸಮಂತಾ, "ನನ್ನ ಪ್ರಕಾರ ಬಹುತೇಕ ಜನರು ನಿಮ್ಮ ಬಗ್ಗೆ ತುಂಬಾನೇ ಕಾಳಜಿವಹಿಸುವಂತೆ ವರ್ತಿಸಿ, ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, ಅವರು ಒಂದು ಮುಖ್ಯವಾದ ಸುದ್ದಿಯನ್ನು ನಮ್ಮಿಂದ ಹುಡುಕುತ್ತಿರುತ್ತಾರೆ. ಆ ರೀತಿಯ ಪ್ರಶ್ನೆಗಳು ಅತ್ಯಂತ ಅಮಾನವೀಯವಾಗಿವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ನಟಿ ಸಮಂತಾ

ನಟಿ ಸಮಂತಾ

  • Share this:
ಯಾರಿಗಾದರೂ ಸಂದರ್ಶನವೊಂದರಲ್ಲಿ ಅಮಾನವೀಯ ಎನಿಸುವ ಪ್ರಶ್ನೆಗಳನ್ನು (Inhumane Questions) ಕೇಳಿದರೆ ಉತ್ತರಿಸಲು ತುಂಬಾನೇ ಕಷ್ಟವಾಗುವುದು ಹಾಗೂ ಮುಜುಗರವಾಗುವುದು ಸಹಜ. ಅದಕ್ಕಾಗಿಯೇ ಈ ಚಲನಚಿತ್ರ ನಟ - ನಟಿಯರ ಪೈಕಿ ಕೆಲವರು ಸಂದರ್ಶನಗಳೆಂದರೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸಂದರ್ಶಕರಾಗಿ ಪ್ರಶ್ನೆ ಕೇಳುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಎದುರಿನವರು ಅದಕ್ಕೆ ಮುಕ್ತವಾಗಿ ಉತ್ತರಿಸುವುದು. ಇತ್ತೀಚೆಗೆ ನಟ ನಾಗ ಚೈತನ್ಯ ಅವರೊಂದಿಗಿನ ನಾಲ್ಕು ವರ್ಷಗಳ ವಿವಾಹ ರದ್ದುಗೊಳಿಸಿದ ನಟಿ ಸಮಂತಾ  (Samantha) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಲ್ಲಿರುವುದು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸಾಮಾನ್ಯವಾಗಿ ಈ ಸಂದರ್ಶನಗಳಲ್ಲಿ ಉತ್ತರಿಸಲು 'ಅತ್ಯಂತ ಅಮಾನವೀಯ' ಎನಿಸುವ ಪ್ರಶ್ನೆಗಳ ಬಗ್ಗೆ ಮಾತನಾಡಿದ್ದಾರೆ.

ಹಾಗಾದರೆ, ಸಮಂತಾಗೆ ಯಾವ ರೀತಿಯ ಪ್ರಶ್ನೆಗಳನ್ನು ಸಂದರ್ಶಕರು ತಮ್ಮ ಸಂದರ್ಶನದಲ್ಲಿ ಕೇಳಿದರೆ ಅಮಾನವೀಯ ಪ್ರಶ್ನೆಗಳು ಎಂದೆನಿಸುತ್ತವೆ ತಿಳಿದುಕೊಳ್ಳೋಣ ಬನ್ನಿ.

ನಾಗ ಚೈತನ್ಯ ಹಾಗೂ ಸಮಂತಾ


ಇತ್ತೀಚೆಗೆ ಫಿಲ್ಮ್ ಫೇರ್ ಜೊತೆ ಮಾತನಾಡಿದ ತೆಲುಗು ಚಿತ್ರ ನಟಿ ಸಮಂತಾ, "ನನ್ನ ಪ್ರಕಾರ ಬಹುತೇಕ ಜನರು ನಿಮ್ಮ ಬಗ್ಗೆ ತುಂಬಾನೇ ಕಾಳಜಿವಹಿಸುವಂತೆ ವರ್ತಿಸಿ, ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, ಅವರು ಒಂದು ಮುಖ್ಯವಾದ ಸುದ್ದಿಯನ್ನು ನಮ್ಮಿಂದ ಹುಡುಕುತ್ತಿರುತ್ತಾರೆ. ಆ ರೀತಿಯ ಪ್ರಶ್ನೆಗಳು ಅತ್ಯಂತ ಅಮಾನವೀಯವಾಗಿವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Samantha Naga Chaitanya Divorce: ನಾವು ಬೇರೆಯಾಗುತ್ತಿದ್ದೇವೆ ವಿಚ್ಛೇದನ ನಿಜ ಎಂದ ಸಮಂತಾ-ನಾಗ ಚೈತನ್ಯ

"ಅವರು ಸಂದರ್ಶನದಲ್ಲಿ ಆ ರೀತಿಯ ಪ್ರಶ್ನೆಗಳನ್ನು ಕೇಳುವಾಗಲೂ, ಅವರು ಯಾವುದೋ ಒಂದು ಸೆನ್ಸೇಷನ್​ ಸುದ್ದಿಯನ್ನು ಹುಡುಕುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತೆ. ಆದರೆ, ಇಬ್ಬರೂ ಪರಸ್ಪರ ಏನು ತಿಳಿದಿರದಂತೆ ಆಟ ಆಡಬಹುದು" ಎಂದು ಸಮಂತಾ ಹೇಳಿದ್ದಾರೆ.

ಈ ಮಧ್ಯೆ, ನಟಿ ಸಮಂತಾ ಇತ್ತೀಚೆಗೆ ನಾಗ ಚೈತನ್ಯ ಅವರಿಂದ ದೂರಾಗುವ ವಿಷಯ ಘೋಷಿಸಿದ ನಂತರ ಸುಳ್ಳು ವದಂತಿಗಳು ಮತ್ತು ಕಟ್ಟು ಕಥೆಗಳು ತನ್ನ ವಿರುದ್ಧ ಹರಡಿರುವುದಕ್ಕೆ ತುಂಬಾ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ. ತಮ್ಮ ಟ್ವಿಟ್ಟರ್‌ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್ ಮಾಡಲಾದ ಹೇಳಿಕೆಯಲ್ಲಿ, ಸಮಂತಾ “ವಿಚ್ಛೇದನವು ಅತ್ಯಂತ ನೋವಿನ ಸಂಗತಿಯಾಗಿದ್ದು, ಪಟ್ಟುಬಿಡದ ವೈಯಕ್ತಿಕ ದಾಳಿಗಳು ಅದನ್ನು ಇನ್ನಷ್ಟು ಕಷ್ಟಕರವಾಗಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Samantha Akkineni: ಹಾಟ್​ ಫೋಟೋಶೂಟ್​ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಸಮಂತಾ ಅಕ್ಕಿನೇನಿ..!

"ನನಗೆ ಬೇರೆಯವರೊಂದಿಗೆ ಸಂಬಂಧವಿತ್ತು. ಎಂದಿಗೂ ಮಕ್ಕಳನ್ನು ಬಯಸಿಲ್ಲ. ನಾನು ಅವಕಾಶವಾದಿ ಮತ್ತು ಈಗ ನಾನು ಮಗು ಬೇಡವೆಂದು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂದು ತುಂಬಾ ಜನರು ಅನೇಕ ತರಹದ ಹೇಳಿಕೆಯನ್ನು ನನ್ನ ವಿರುದ್ಧ ನೀಡುತ್ತಿದ್ದಾರೆ. ವಿಚ್ಛೇದನವು ಅತ್ಯಂತ ನೋವಿನ ಸಂಗತಿಯಾಗಿದ್ದು ನನಗೆ ಆ ನೋವಿನಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ” ಎಂದು ನಟಿ ಹೇಳಿದ್ದಾರೆ.

“ಈ ಸಮಯದಲ್ಲಿ ವೈಯಕ್ತಿಕವಾಗಿ ನನ್ನ ಮೇಲೆ ನಡೆಯುತ್ತಿರುವ ಈ ಮಾನಸಿಕ ದಾಳಿಗಳಿಗೆ ನಾನು ಎಂದಿಗೂ ಕುಗ್ಗುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ" ಎಂದು 34 ವರ್ಷದ ನಟಿ ಸಮಂತಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿರುವ ಖಾತೆಗಳ ಪುಟದಲ್ಲಿ ಬರೆದುಕೊಂಡಿದ್ದಾರೆ.
Published by:Anitha E
First published: