ಸಮಂತಾ ಅಕ್ಕಿನೇನಿ(Samantha Akkineni) ನಾಯಿ ಪ್ರೇಮಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸಮಂತಾ ಹ್ಯಾಶ್(Hash) ಎಂಬ ಸಾಕು ನಾಯಿಯನ್ನು ಹೊಂದಿದ್ದು, ಅದು ಸಾಮಾಜಿಕ ಜಾಲಾತಾಣದಲ್ಲಿ ಹೆಸರುವಾಸಿಯಾಗಿದೆ. ಸಮಂತಾ ಹೋದಲ್ಲಿ ಬಂದಲ್ಲಿ ಜೊತೆಯಲ್ಲಿರುತ್ತದೆ. ಬೆಳಗಿನ ವ್ಯಾಯಾಮದಿಂದ ಹಿಡಿದು ರಾತ್ರಿ ಮಲಗುವವರೆಗೂ ಎಲ್ಲೆಡೆ ಹೋಗುತ್ತದೆ. ಹ್ಯಾಶ್ಗೆ ಈಗ ಸಾಶಾ(Saasha) ಎಂಬ ಹೊಸ ಜೋಡಿ ಸಿಕ್ಕಿದ್ದು, ಹ್ಯಾಶ್ ಗೆ ಉಡುಗೊರೆಯಾಗಿ ನೀಡಲಾಗಿದೆ.
ಸಮಂತಾ ತನ್ನ ಹೊಸ ಕುಟುಂಬದ ಸದಸ್ಯೆಯ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ, ಸಾಶಾ ಎಂಬ ಸಣ್ಣ ಮುದ್ದು ಪ್ರಾಣಿಯು, ಹ್ಯಾಶ್ ತಂಗಿ ಎಂದು ಬರೆದಿದ್ದಾರೆ. ಹೊಸ ನಾಯಿ ಮರಿಯನ್ನು ಕಾಳಜಿಯಿಂದ ನೋಡಿಕೊಳ್ಳುವ ಸಲುವಾಗಿ ಈ ದಿನಗಳಲ್ಲಿ ಕಾಫಿ ಕುಡಿಯಲು ಅಥವಾ ಶಾಂತವಾಗಿ ವ್ಯಾಯಾಮ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಒಂದು ಕೈಯಿಂದ ಸಾಶಾ ಮತ್ತು ಇನ್ನೊಂದು ಕೈಯಿಂದ ಹ್ಯಾಶ್ನನ್ನು ಹಿಡಿದು ಮುದ್ದಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಗಂಡ ಅಕ್ಕಿನೇನಿ ನಾಗಾರ್ಜುನ್ ಜೊತೆ ಜಾಲಿ ಮೂಡ್ನಲ್ಲಿ ಬರ್ತ್ಡೇ ಕ್ವೀನ್ ಅಮಲಾ
ಓಹ್ ಬೇಬಿ 19 ನೇ ಬಾರಿಗೆ ಇಂದು ಶೌಚವನ್ನು ಸ್ವಚ್ಛಮಾಡಿದ್ದೇನೆ, ಇದು ಕೇವಲ 9 ಗಂಟೆ ಅಷ್ಟೇ.. ಈಗ 5 ನಿಮಿಷಗಳ ಶಾಂತವಾಗಿ ಕಾಫಿ ಕುಡಿಯಲು ಕುಳಿತಿದ್ದೇನೆ. ಆದರೆ ಈ ಒಂದು ಪುಟ್ಟ ಪ್ರಾಣಿ ಮನೆಯ ತುಂಬೆಲ್ಲ ತಮ್ಮ ಮೂತ್ರದ ಪ್ಯಾಡ್ ಹಿಡಿದು ಓಡಾಡುತ್ತಿದೆ. ಅದನ್ನು ಗಮನಿಸುವುದೇ ಮುಖ್ಯವಾಗಿದೆ. ಸಾಶ್ಗೆ ಎಲ್ಲರೂ ಹಾಯ್ ಹೇಳಿ. SAASHA
#pitbullsofinstagram #HashandSaasha #brotherandsister #its goingtobeaparty ಎಂದು ಫೋಟೋಗೆ ಬರೆದುಕೊಂಡಿದ್ದಾರೆ.
ಕೆಲಸದ ವಿಚಾರಕ್ಕೆ ಬಂದರೆ ಸಮಂತಾ ಅಕ್ಕಿನೇನಿ, ತಮ್ಮ ಮುಂಬರುವ ಯೋಜನೆಗಳಿಗಾಗಿ ಚಿತ್ರೀಕರಣ ಮುಗಿಸಿ, ವಿರಾಮ ತೆಗೆದುಕೊಂಡಿದ್ದಾರೆ. ಆಕೆ ತನ್ನ ಎರಡು ಪ್ರಾಜೆಕ್ಟ್ಗಳ ಚಿತ್ರೀಕರಣ ಮುಗಿಸಿದ್ದಾರೆ. ಗುಣಶೇಖರ್ ಅವರ ಪೌರಾಣಿಕ ಚಿತ್ರ ಶಾಕುಂತಲಂ ಮತ್ತು ವಿಘ್ನೇಶ್ ಶಿವನ್ ನಿರ್ದೇಶನದ ತಮಿಳು ಚಿತ್ರ ಕಾತು ವಾಕುಲಾ ಎರಡು ಕಾದಲ್ ಚಿತ್ರಗಳ ಮೂಲಕ ತೆರೆಯ ಮೇಲೆ ಮಿಂಚಲಿದ್ದಾರೆ.
ಅಲ್ಲದೇ ಕಳೆದ ಕೆಲವು ದಿನಗಳಿಂದ ಕಾಲಿವುಡ್ ನಟಿ ಸಮಂತಾ ಮತ್ತು ನಾಗಚೈತನ್ಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಗುಸುಗುಸು ಕೇಳಿ ಬಂದಿತ್ತು. ಇದಕ್ಕೆ ಕಾರಣ ,
ಸಮಂತಾ ಅವರ ಟ್ವಿಟರ್ ಖಾತೆಯ ಹೆಸರು ಬದಲಾವಣೆ. ಮದುವೆಗೂ ಮುನ್ನ ಸಮಂತಾ ರುತ್ ಪ್ರಭು ಎಂದಿದ್ದ ಹೆಸರನ್ನು ನಂತರ ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು. ಆದರೆ, ಇದೀಗ ಟ್ವಿಟರ್ ಖಾತೆಯ ಹೆಸರು ಬರಿ ಎಸ್ ಎಂದು ಇದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಸಮಂತಾ ಮತ್ತು ನಾಗಚೈತನ್ಯ ದೂರವಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತಿತ್ತು. ಆದರೆ ಬಗ್ಗೆ ಸಮಂತಾ ಆಗಲಿ ಅಥವಾ ನಾಗಚೈತನ್ಯ ಸೇರಿದಂತೆ ಅಕ್ಕಿನೇಮಿ ಕುಟುಂಬದ ಯಾವ ಸದಸ್ಯರೂ ಇದುವರೆಗೂ ತುಟಿ ಬಿಚ್ಚಿರಲಿಲ್ಲ,
ಆದರೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದಾಗ, 'ಯಾವುದೇ ವಿವಾದ ಅಥವಾ ಟ್ರೋಲ್ಗಳಿಗೆ ನನಗೆ ಪ್ರತಿಕ್ರಿಯಿಸಬೇಕು ಎಂದು ಎನಿಸಿದರೆ ಮಾತ್ರ ನಾನು ಪ್ರತಿಕ್ರಿಯೆ ನೀಡುತ್ತೇನೆ. ಯಾರೋ ಪ್ರತಿಕ್ರಿಯೆ ನೀಡಿ ಎಂದು ಹೇಳಿದ ಮಾತ್ರಕ್ಕೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ವಿಚಾರಗಳನ್ನು ಚರ್ಚಿಸುವ ಬಗ್ಗೆ ನನಗೆ ಆಸಕ್ತಿ ಮತ್ತು ಇಷ್ಟವಿಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ಹೇಗೆ ಹೇಳುವುದಕ್ಕೆ ಅವರಿಗೆ ಹೇಗೆ ಹಕ್ಕು ಇದೆಯೋ, ಹಾಗೇ ನನಗೂ ಹಕ್ಕು ಇದೆ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ