ಪಬ್​ನಲ್ಲಿ ನಟ-ನಟಿ ಮಸ್ತ್ ಮಜಾ: ಕ್ಯೂಟ್ ಜೋಡಿಯ ವಿಡಿಯೋ ವೈರಲ್

Samantha Akkineni: ಸ್ಯಾಮ್ ಓ ಬೇಬಿಯೊಂದಿಗೆ ಮರಳಿದರೆ, ನಾಗ್ ತಮ್ಮದೇ ಕೆಲ ಪ್ರೊಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ತಮಿಳಿನ ಸೂಪರ್ ಹಿಟ್ ಸಿನಿಮಾ 96 ರಿಮೇಕ್​ನಲ್ಲಿ ಸಮಂತಾ ನಟ ಶರ್ವಾನಂದ್ ಜೊತೆ ಕಾಣಿಸಲಿದ್ದಾರೆ.

zahir | news18-kannada
Updated:September 2, 2019, 10:38 AM IST
ಪಬ್​ನಲ್ಲಿ ನಟ-ನಟಿ ಮಸ್ತ್ ಮಜಾ: ಕ್ಯೂಟ್ ಜೋಡಿಯ ವಿಡಿಯೋ ವೈರಲ್
chay samantha
  • Share this:
ಟಾಲಿವುಡ್ ಬೇಬಿ ಸಮಂತಾ ಅಕ್ಕಿನೇನಿ ಹಾಗೂ ಪತಿ ನಾಗಚೈತನ್ಯ ಈಗ ಜಾಲಿ ಹಾಲಿಡೇ ಮೂಡ್​ನಲ್ಲಿದ್ದಾರೆ. ಮಾವ ನಟ ನಾಗಾರ್ಜುನ ಅವರ 60ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಸ್ಪೇನ್​ಗೆ ತೆರೆಳಿರುವ ಕುಟುಂಬ ಕಳೆದ ಮೂರು ದಿನಗಳಿಂದ ಭಾರೀ ಸುದ್ದಿಯಲ್ಲಿದೆ. ಈ ಹಿಂದೆ ನಾಗಾರ್ಜುನ ಅವರ ಫೋಟೋ ಹಾಕಿ ಮಾವನಿಗೆ ಸರಿಸಾಟಿ ಯಾರು ಎಂಬಾರ್ಥದಲ್ಲಿ ಫೋಸ್ಟ್​ ಹಾಕಿದ್ದ ಸ್ಯಾಮ್, ಈ ಬಾರಿ ಪತಿಯೊಂದಿಗೆ ಪಬ್​ನಲ್ಲಿ ಕುಣಿದು ಕುಪ್ಪಳಿಸುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸ್ಪೇನ್​ನ ಇಬಿಜಾ ದ್ವೀಪದಲ್ಲಿರುವ ಈ ಸ್ಟಾರ್ ಫ್ಯಾಮಿಲಿ ಕೆಲ ದಿನಗಳ ಹಿಂದೆ ಬೀಚ್​ನಲ್ಲಿ ಸುತ್ತಾಡುತ್ತಿರುವ, ಮೋಜು ಮಸ್ತಿಯಲ್ಲಿರುವ ಫೋಸ್ಟ್​ಗಳನ್ನು ಶೇರ್ ಮಾಡಿದ್ದರು. ಇದೀಗ ಪಬ್​ವೊಂದರಲ್ಲಿ ಪತಿಯೊಂದಿಗೆ ಮಸ್ತ್ ಮಜಾ ಮಾಡುತ್ತಿರುವ ವಿಡಿಯೋವೊಂದನ್ನು ಸುಂದರಿ ಸ್ಯಾಮ್ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಅಮೆರಿಕನ್ ಪಾಪ್ ಗೀತೆಗೆ ಸಮಂತಾ ಸಖತ್ ಸ್ಟೆಪ್ಸ್ ಹಾಕುತ್ತಿದ್ದು, ಮುದ್ದು ಮಡದಿಗೆ ಟಾಲಿವುಡ್ ಯಂಗ್​ಮ್ಯಾನ್ ನಾಗಚೈತನ್ಯ ಕೂಡ ಸಾಥ್ ನೀಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಅಕ್ಕಿನೇನಿ ಫ್ಯಾನ್ಸ್​ಗಳು ಕ್ಯೂಟ್ ಜೋಡಿ ಮಜದಾಟಕ್ಕೆ ಮನಸೋತಿದ್ದಾರೆ.

ಟಾಲಿವುಡ್​ನ ಹಿಟ್ ಜೋಡಿ ಎನ್ನಲಾಗಿರುವ ಸಮಂತಾ-ನಾಗಚೈತನ್ಯ ಕೊನೆಯ ಬಾರಿ 'ಮಜಿಲಿ'ಯಲ್ಲಿ ಜೊತೆಯಾಗಿದ್ದರು. ಆ ಬಳಿಕ ಸ್ಯಾಮ್ 'ಓ ಬೇಬಿ'ಯೊಂದಿಗೆ ಮರಳಿದರೆ, ನಾಗ್ ತಮ್ಮದೇ ಕೆಲ ಪ್ರೊಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ತಮಿಳಿನ ಸೂಪರ್ ಹಿಟ್ ಸಿನಿಮಾ '96' ರಿಮೇಕ್​ನಲ್ಲಿ ಸಮಂತಾ ನಟ ಶರ್ವಾನಂದ್ ಜೊತೆ ಕಾಣಿಸಲಿದ್ದಾರೆ ಎನ್ನಲಾಗಿದೆ. 
View this post on Instagram
 

I love you for always pretending to be as enthusiastic as I am 😂😂 @chayakkineni ❤️❤️ #childrenofthe80s


A post shared by Samantha Akkineni (@samantharuthprabhuoffl) on


 

First published: September 1, 2019, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading