Samantha Ruth Prabhu: ಹೆಣ್ಣು ಮಕ್ಕಳನ್ನು ಹೆತ್ತ ಪೋಷಕರಿಗೆ ಸಮಂತಾ ನೀಡಿದ್ರು ಹೀಗೊಂದು ಸಂದೇಶ!

Samantha Ruth Prabhu: ಕಳೆದ ಹಲವು ತಿಂಗಳುಗಳಿಂದ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದ ಸಮಂತಾ ಈ ಬಾರಿ ಸುದ್ದಿಯಲ್ಲಿರುವುದು ಹೆಣ್ಣು ಮಕ್ಕಳ ತಂದೆ ತಾಯಿಗೆ ನೀಡಿದ ಒಂದು ಒಳ್ಳೆಯ ಸಂದೇಶಕ್ಕಾಗಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸಮಂತಾ ರುಥ್ ಪ್ರಭು / Samantha Ruth Prabhu

ಸಮಂತಾ ರುಥ್ ಪ್ರಭು / Samantha Ruth Prabhu

 • Share this:
  ಇತ್ತೀಚೆಗೆ ತಮ್ಮ ಪತಿ ಮತ್ತು ಟಾಲಿವುಡ್ ನಟನಾದ ನಾಗ ಚೈತನ್ಯರೊಂದಿಗೆ (Naga chaitanya) ವಿವಾಹ ಬಂಧನದಿಂದ ಹೊರಬಂದಿರುವ ನಟಿ ಸಮಂತಾ ರುಥ್ ಪ್ರಭು (Samantha Ruth Prabhu) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದ ಸಮಂತಾ ಈ ಬಾರಿ ಸುದ್ದಿಯಲ್ಲಿರುವುದು ಹೆಣ್ಣು ಮಕ್ಕಳ ತಂದೆ ತಾಯಿಗೆ ನೀಡಿದ ಒಂದು ಒಳ್ಳೆಯ ಸಂದೇಶಕ್ಕಾಗಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ತಮ್ಮ ವೈವಾಹಿಕ ಜೀವನದಿಂದ ಹೊರ ಬಂದಿರುವ ಸಮಂತಾ ಇದೀಗ ಮತ್ತೆ ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಒಳ್ಳೆಯ ಸಂದೇಶ ಪೋಸ್ಟ್ ಮಾಡಿದ್ದಾರೆ.

  ಹೆಣ್ಣು ಮಕ್ಕಳ ಮದುವೆಗಾಗಿ ದುಡ್ಡು ಉಳಿಸುವ ಬದಲಿಗೆ ತಮ್ಮ ಮಗಳ ಶಿಕ್ಷಣಕ್ಕಾಗಿ ಖರ್ಚು ಮಾಡುವಂತೆ ಪೋಷಕರನ್ನು ಕೋರಿದ್ದಾರೆ. ಈ ಪೋಸ್ಟ್ ಅನ್ನು ಮೂಲತಃ ಭಾರತೀಯ ಹಾಕಿ ತಂಡದ ಕ್ಯಾಪ್ಟನ್ ರಾಣಿ ರಾಂಪಾಲ್ ( Indian hockey captain Rani Rampal) ಹಂಚಿಕೊಂಡಿದ್ದು, ಈ ಸ್ಫೂರ್ತಿದಾಯಕ ಸಂದೇಶವನ್ನುದಕ್ಷಿಣ ಚಲನಚಿತ್ರೋದ್ಯಮದ ತಾರೆ ಸಮಂತಾ ಮರು ಪೋಸ್ಟ್ ಮಾಡಿದ್ದಾರೆ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು, ಅವರನ್ನು ಆರ್ಥಿಕವಾಗಿ ಸ್ವತಂತ್ರವನ್ನಾಗಿಸುವುದು ಇದರ ಅರ್ಥವಾಗಿದೆ.

  "ನಿಮ್ಮ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂದು ನೀವು ಚಿಂತಿಸಬೇಕಾಗಿಲ್ಲ, ಅಷ್ಟರ ಮಟ್ಟಿಗೆ ನೀವು ಅವಳನ್ನು ಸಮರ್ಥಳಾಗಿ ಮಾಡಿರಿ. ಅವಳ ಮದುವೆಯ ದಿನಕ್ಕಾಗಿ ಹಣ ಉಳಿಸುವ ಬದಲು, ಅದನ್ನು ಅವಳ ಶಿಕ್ಷಣಕ್ಕಾಗಿ ಖರ್ಚು ಮಾಡಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅವಳನ್ನು ಮದುವೆಗೆ ಸಿದ್ಧಗೊಳಿಸುವುದಕ್ಕಿಂತಲೂ ಅವಳನ್ನು ತನ್ನ ಜೀವನಕ್ಕೆ ಸಿದ್ಧಗೊಳಿಸಿ. ಅಗತ್ಯವಿದ್ದರೆ ಅವಳು ಯಾರನ್ನಾದರೂ ಎದುರಿಸಬಹುದಾದಂತಹ ಆತ್ಮ ವಿಶ್ವಾಸವನ್ನು ಅವಳಲ್ಲಿ ತುಂಬಿರಿ“ ಎಂದು ಸಂದೇಶದಲ್ಲಿ ಬರೆಯಲಾಗಿದೆ.

  Read Also: Kareena kapoor: ಜೆಹ್ ಹುಟ್ಟಿದಾಗ ನನಗೆ 40 ವರ್ಷ, ತಡವಾಗಿ ತಾಯಿಯಾಗುವುದು ತಪ್ಪಲ್ಲ ಎಂದ ಕರೀನಾ ಕಪೂರ್

  ಸಮಂತಾ ಇತ್ತೀಚೆಗೆ ನಾಗ ಚೈತನ್ಯ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದರು. "ನಮ್ಮ ಎಲ್ಲ ಹಿತೈಷಿಗಳಿಗೆ, ನಾವು ಸಾಕಷ್ಟು ಚರ್ಚೆ ಮತ್ತು ಆಲೋಚನೆಯ ನಂತರವೇ ಸ್ಯಾಮ್ ಮತ್ತು ನಾನು ನಮ್ಮದೇ ಆದ ದಾರಿಗಳಲ್ಲಿ ನಡೆಯಲು ಇಚ್ಚಿಸಿ, ಬೇರ್ಪಡಲು ನಿರ್ಧರಿಸಿದ್ದೇವೆ. ನಮ್ಮ ಒಂದು ದಶಕದ ಸ್ನೇಹವನ್ನು ನಾವು ಎಂದಿಗೂ ಮರೆಯುವುದಿಲ್ಲ, ನಾವು ಯಾವಾಗಲೂ ಒಂದು ವಿಶೇಷವಾದ ಬಂಧವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮನ್ನು ಬೆಂಬಲಿಸುವಂತೆ ಮತ್ತು ನಾವು ಮುಂದುವರಿಯಲು ಅಗತ್ಯವಿರುವ ಗೌಪ್ಯತೆ ನೀಡುವಂತೆ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳನ್ನು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು," ಎಂದು ಬರೆದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

  Read Also: Tamannaah Bhatia: ಖ್ಯಾತ ನಟಿ ತಮನ್ನಾರಿಂದ ನಿರ್ಮಾಪಕರಿಗೆ 5 ಕೋಟಿ ರೂಪಾಯಿ ನಷ್ಟ! ಕಾರಣವೇನು ಗೊತ್ತಾ..?

  ಇದೆಲ್ಲದರ ಮಧ್ಯೆ, ನಟಿ ಸಮಂತಾ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಅವರು ಇತ್ತೀಚೆಗೆ ಚಾರ್‌ಧಾಮ್ ಯಾತ್ರೆಯಿಂದ ಹಿಂತಿರುಗಿದ್ದರು. ಆಧ್ಯಾತ್ಮಿಕ ಪ್ರವಾಸಕ್ಕೆ ಆಪ್ತ ಸ್ನೇಹಿತೆ ಶಿಲ್ಪಾ ರೆಡ್ಡಿ ಅವರೊಂದಿಗೆ ಹೋಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ತಮ್ಮ ಪತಿ ನಾಗ ಚೈತನ್ಯದಿಂದ ಬೇರ್ಪಟ್ಟ ನಂತರ ಇದು ಅವರ ಎರಡನೇ ಪ್ರವಾಸವಾಗಿದೆ.
  First published: