Samantha Nagachaitanya Divorce: ದೇವಸ್ಥಾನಕ್ಕೆ ಹೋದಾಗ ಡಿವೋರ್ಸ್ ಬಗ್ಗೆ ಹೀಗಂದ್ರು ಸಮಂತಾ, ರೂಮರ್ಸ್ ಸುಳ್ಳಾ? ನಿಜಾನಾ?

Samantha Divorce Rumors: ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟಾಲಿವುಡ್ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಅವರನ್ನ ಸಮಂತಾ ಪ್ರೀತಿಸಿ ಮದುವೆಯಾಗಿದ್ದರು. ಇದ್ದಕ್ಕಿದ್ದ ಹಾಗೆ ಇದೀಗ ಇವರಿಬ್ಬರ ಮಧ್ಯೆ ಬಿರುಕು ಯಾಕೆ ಆಯ್ತು ಅನ್ನೋ ಪ್ರಶ್ನೆ ಸದ್ಯ ಟಾಲಿವುಡ್ ಅಂಗಳದಲ್ಲಿ ಮೂಡಿದೆ.

ನಾಗಚೈತನ್ಯ-ಸಮಂತಾ

ನಾಗಚೈತನ್ಯ-ಸಮಂತಾ

  • Share this:
    Samantha Akkineni: ಕಳೆದ ಕೆಲ ದಿನಗಳಿಂದ ಟಾಲಿವುಡ್ ಅಂಗಳದಲ್ಲಿ ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಬಿರುಕು ಮುಡಿದ್ಯಾ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಸಮಂತಾ ಅಥವಾ ನಾಗಚೈತನ್ಯ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಇವರ ನಾಲ್ಕು ವರ್ಷದ ದಾಂಪತ್ಯದಲ್ಲಿ ಬಿರುಕು ಮೂಡಿದೆ ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಸಮಂತಾರನ್ನ ಪ್ರಶ್ನೆ ಮಾಡಿದ್ದಕ್ಕೆ ಸಿಡಿಮಿಡಿಗೊಂಡಿದ್ದಾರೆ. ದೇವಾಲಯವೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಂತಾರನ್ನ ಈ ಬಗ್ಗೆ ಪ್ರಶ್ನಿಸಲಾಯಿತು. ಇಷ್ಟಕ್ಕೆ ನಟಿ ಸಮಂತಾ ಕೋಪಗೊಂಡಿದ್ದಾರೆ.

    " ನಾನು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ, ಇಲ್ಲಿ ಈತರ ಪ್ರಶ್ನೆ ಕೇಳುವುದು ಸರಿಯಲ್ಲ. ನಿಮಗೆ ಬುದ್ಧಿ ಇದೆಯಾ? ಎಲ್ಲಿ ಯಾವ ಪ್ರಶ್ನೆ ಕೇಳಬೇಕು ಎಂಬ ಸಾಮಾನ್ಯ ತಿಳುವಳಿಕೆಯೂ ನಿಮಗೆ ಇಲ್ವಾ?" ಎಂದು ಪ್ರಶ್ನೆ ಕೇಳಿದವರ ವಿರುದ್ಧ ಬ್ಯೂಟಿ ಕ್ವೀನ್ ಸಮಂತಾ ಹರಿಹಾಯ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟಾಲಿವುಡ್ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಅವರನ್ನ ಸಮಂತಾ ಪ್ರೀತಿಸಿ ಮದುವೆಯಾಗಿದ್ದರು. ಇದ್ದಕ್ಕಿದ್ದ ಹಾಗೆ ಇದೀಗ ಇವರಿಬ್ಬರ ಮಧ್ಯೆ ಬಿರುಕು ಯಾಕೆ ಆಯ್ತು ಅನ್ನೋ ಪ್ರಶ್ನೆ ಸದ್ಯ ಟಾಲಿವುಡ್ ಅಂಗಳದಲ್ಲಿ ಮೂಡಿದೆ. ಸದ್ಯಕ್ಕೆ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವ ಬಗ್ಗೆ ಕೊನೆಗೂ ಸ್ಪಷ್ಟನೆ ಸಿಕ್ಕಿಲ್ಲ.

    ಇದನ್ನೂ ಓದಿ: ಗಾಳಿ ಸುದ್ದಿಗಳಿಗೆ ಬ್ರೇಕ್​ ಹಾಕಿದ್ರಾ Samantha Akkineni: ನಟಿಯ ಮದುವೆ ದಿನವನ್ನು ನೆನಪಿಸುತ್ತೆ ಈ ಚಿತ್ರಗಳು..!

    ಈ ಗಾಸಿಪ್ ಶುರುವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನಲ್ಲಿ ಸಮಂತಾ ಮಾಡಿದ ಬದಲಾವಣೆಯಿಂದ. ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ‘ಸಮಂತಾ ಅಕ್ಕಿನೇನಿ’ ಅಂತಿದ್ದ ಹೆಸರಿಗೆ ಸಮಂತಾ ಕತ್ತರಿ ಪ್ರಯೋಗ ಮಾಡಿಬಿಟ್ಟರು. ‘ಸಮಂತಾ ಅಕ್ಕಿನೇನಿ’ ಅಂತ ಇದ್ದ ಹೆಸರನ್ನು ತೆಗೆದು ಬರೀ ‘ಎಸ್’ ಅಂತ ಹಾಕಿದ್ರು. ಏಕಾಏಕಿ ‘ಅಕ್ಕಿನೇನಿ’ ಹೆಸರನ್ನು ಕೈಬಿಟ್ಟಿದ್ದಕ್ಕೆ ನೂರೆಂಟು ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತ್ತು. ಕೇವಲ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಮಾತ್ರ ಸಮಂತ ತಮ್ಮ ಹೆಸರನ್ನು ಬದಲಾಯಿಸಿದ್ದರು. ಫೇಸ್ಬುಕ್ ನಲ್ಲಿ ಈಗಲೂ ಸಮಂತ ಅಕ್ಕಿನೇನಿ ಹೆಸರು ಇದೆ. ಇಷ್ಟಿದ್ದರೂ ಇವರ ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ನಟನಟಿಯ ದಾಂಪತ್ಯ ಜೀವನದಲ್ಲಿ ಯಾವುದು ಸರಿ ಇಲ್ಲ ಅನ್ನೋ ಅನುಮಾನ ಕಾಡಿತ್ತು. ಇತ್ತೀಚೆಗೆ ನಡೆದ ಅಕ್ಕಿನೇನಿ ನಾಗಾರ್ಜುನ ಹುಟ್ಟುಹಬ್ಬದ ಆಚರಣೆಯಲ್ಲೂ ಸಮಂತಾ ಕಾಣಿಸಿಕೊಂಡಿರಲಿಲ್ಲ. ಇದು ಈ ವದಂತಿಗೆ ಮತ್ತಷ್ಟು ಪುಷ್ಟಿಯನ್ನು ನೀಡಿತ್ತು.





    2017ರಲ್ಲಿ ನಾಗಚೈತನ್ಯ ಹಾಗೂ ಸಮಂತಾ ಗೋವಾದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಮದುವೆಯಾದ ಬಳಿಕವೂ ಸಮಂತ ಹಲವಾರು ಚಿತ್ರಗಳು ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಇತ್ತ ನಾಗಚೈತನ್ಯ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಎಲ್ಲವೂ ಸುಗಮವಾಗಿಯೇ ಇತ್ತು. ನಾಲ್ಕು ವರ್ಷದ ಇವರ ದಾಂಪತ್ಯ ಹಳಸಲು ಕಾರಣವೇನು ಅಂತ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ. ಮತ್ತೊಂದು ಅಭಿಮಾನಿಗಳ ವರ್ಗ ಇವರಿಬ್ಬರ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ. ಇವೆಲ್ಲವೂ ಕೇವಲ ವದಂತಿಯಷ್ಟೇ ಅಂತ ಸಮಜಾಯಿಷಿ ನೀಡುತ್ತಿದ್ದಾರೆ.

    ಹೆಚ್ಚಿದ ಗೊಂದಲ

    ಇದೀಗ ಸಮಂತಾ ಸ್ಪಷ್ಟನೆ ಕೊಡದ ಕಾರಣ ಧಗಧಗ ಉರಿಯುತ್ತಿದ್ದ ಗಾಸಿಪ್‌ಗೆ ಹೆಚ್ಚು ತುಪ್ಪ ಸುರಿದಂತಾಗಿದೆ. ಆದ್ರೆ ಇನ್ನೂ ಇದಕ್ಕೊಂದು ಸ್ಪಷ್ಟ ಉತ್ತರ ಸಿಗ್ತಿಲ್ವಲ್ಲಾ ಅಂತ ಕೆಲವರಂತೂ ಕೈಕೈ ಹಿಸುಕಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡ್ತಿರೋ ವಿಡಿಯೋ ಜೊತೆಗೆ ಪರ ಮತ್ತು ವಿರೋಧದ ಕಮೆಂಟ್​ ಗಳೂ ಭರ್ಜರಿಯಾಗೇ ಹರಿದಾಡ್ತಿದೆ.

    (ವರದಿ - ವಾಸುದೇವ್. ಎಂ)
    Published by:Soumya KN
    First published: