ಅಕ್ಕಿನೇನಿ ನಾಗಾರ್ಜುನ ಟಾಲಿವುಡ್ನ ರಿಯಲ್ ಮನ್ಮಥ. ವಯಸ್ಸು 60 ಆದರೂ ಇನ್ನೂ ಬಾಕ್ಸಾಫಿಸ್ನಲ್ಲಿ ರಾಜ್ಯಭಾರ ಮಾಡುವ ಏಕೈಕ ನಟ. ಇತ್ತೀಚೆಗಷ್ಟೆ ಈ ನಟ 'ಮನ್ಮಥುಡು 2' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಅದು ಬಾಕ್ಸಾಫಿಸ್ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿದೆ. ಆದರೆ ನಾಗಾರ್ಜುನ ಸ್ಟೈಲ್ ಹಾಗೂ ಸ್ಮೈಲ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಾಗಾರ್ಜುನ ತೆರೆ ಮೇಲೆ ಸದಾ ತೋರುವ ಮನ್ಮಥನ ಅವತಾರಕ್ಕೆ ಅಭಿಮಾನಿಗಳು ಸೈ ಎನ್ನುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪರದೆ ಮೇಲೆ ನಾಗ್ ಮಾಡುವ ರೋಮ್ಯಾನ್ಸ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆದರೆ ನಾಗಚೈತನ್ಯ ಅವರ ಹೆಂಡತಿ ಹಾಗೂ ನಾಗಾರ್ಜುನ ಸೊಸೆ ಸಮಂತಾ ಅವರಿಗೆ ಮಾವನ ಮನ್ಮಥ ಲೀಲೆಯಿಂದ ಇರಿಸುಮುರುಸಾಗಿದೆಯಂತೆ.
![]()
ಸಮಂತಾ ಹಾಗೂ ನಾಗಾರ್ಜುನ
ಹೌದು, ನಾಗಾರ್ಜುನ ಈ ವಯಸ್ಸಿನಲ್ಲಿ 'ಮನ್ಮಥುಡು 2' ಚಿತ್ರದಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಲಿಪ್ ಲಾಕ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸೊಸೆ ಸಮಂತಾಗೆ ಕೊಂಚವೂ ಇಷ್ಟವಾಗಿಲ್ಲವಂತೆ.
ಈ ಬಗ್ಗೆ ಸಿನಿಮಾ ಮಾಡುವ ಮೊದಲೇ ಕತೆ ಕೇಳಿದಾಗಲೇ ಸಮಂತಾ ಹೇಳಿಕೊಂಡಿದ್ದರಂತೆ. ಆದರೆ ಅದು ಸಮಂತಾ ತಮಾಷೆ ಮಾಡುತ್ತಿದ್ದಾರೆಂದು ಅಂದುಕೊಳ್ಳಲಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆಯಾದ ನಂತರವೂ ಸಮಂತಾ ಚಿತ್ರದ ಪ್ರೀಮಿಯರ್ ಶೋ ಹಾಗೂ ಪ್ರಚಾರದ ಸುದ್ದಿಗೋಷ್ಠಿಗಳಿಂದ ದೂರ ಉಳಿದಿದ್ದಾರೆ. ಇದಾದ ನಂತರವೇ ನಾಗಾರ್ಜುನ ಅವರಿಗೆ ಸತ್ಯದ ಅರಿವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Kichcha Sudeep: ಟ್ವಿಟರ್ನಲ್ಲಿ ದರ್ಶನ್ರನ್ನು ಅನ್ಫಾಲೋ ಮಾಡಿದ ಕಿಚ್ಚ ಸುದೀಪ್..!
ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ ಆದರೂ ಎಲ್ಲೂ ಈ ಚಿತ್ರದ ಬಗ್ಗೆ ಸಮಂತಾ ಒಂದು ಮಾತೂ ಆಡಿಲ್ಲ. ಅಲ್ಲದೆ ನಾಗಾರ್ಜುನ ಸದ್ಯ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲಿದ್ದು, ಅದರ ಕತೆಯೂ ಹೀಗೆ ಇರುವ ಕಾರಣಕ್ಕೆ ಸಮಂತಾ ಕೋಪಗೊಂಡಿದ್ದಾರಂತೆ. ನಾಗಾರ್ಜುನ ಅವರ 'ಬಂಗಾರರಾಜು ಕಥಾ' ಸಿನಿಮಾದಲ್ಲೂ ನಾಗ್ ಮತ್ತೆ ಸಿಕ್ಕಾಪ‘ಟ್ಟಟೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
![]()
ಸಮಂತಾ, ನಾಗ ಚೈತನ್ಯ ಹಾಗೂ ನಾಗಾರ್ಜುನ
'ಬಂಗಾರರಾಜು ಕಥಾ' ಸಿನಿಮಾದಲ್ಲಿ ನಾಗಚೈತನ್ಯ ಸಹ ಅಭಿನಯಿಸುತ್ತಿದ್ದು, ಅವರ ಪಾತ್ರವೂ ಹಾಗೆಯೇ ಇರಲಿದೆಯಂತೆ. ಅದಕ್ಕೆ ಸ್ಯಾಮ್ ಸದ್ಯ ಕೆಲವು ಷರತ್ತುಗಳನ್ನು ಇಟ್ಟಿದ್ದು, ಅದಕ್ಕೆ ಒಪ್ಪಿ, ಕತೆಯಲ್ಲಿ ಬದಲಾವಣೆ ಮಾಡಿದರೆ ಮಾತ್ರ ಚೈತನ್ಯ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: Kichcha Sudeep: ಉಸಿರಿರುವುದೇ ಅಭಿಮಾನಿಗಳಿಗಾಗಿ ಎಂದ ಪೈಲ್ವಾನ್ ಸುದೀಪ್..!
ಕತೆಯಲ್ಲಿ ಬದಲಾವಣೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಮಂತಾ ಹಾಗೂ ಮಾವ ನಾಗಾರ್ಜುನ ಅವರ ನಡುವೆ ಕೊಂಚ ತಿಕ್ಕಾಟ ನಡೆಯುತ್ತಿದೆದ. ಆದರೆ ವೈಯಕ್ತಿಕ ಜೀವನದಲ್ಲಿ ಇವರ ನಡುವಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆ ಇಲ್ಲವಂತೆ.
Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್ ಲುಕ್ಸ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ