One Bucket challenge: ಹೀಗೊಂದು ಕ್ಯಾಂಪೇನ್​​ ಸಮಂತಾ ಅಕ್ಕಿನೇನಿ ಶುರು ಮಾಡಿದ್ದೇಕೆ?

ಸಮಂತಾ ತನ್ನ ಟ್ಟಿಟ್ಟರ್​ ಖಾತೆಯಲ್ಲಿ ಅಭಿಮಾನಿಗಳಿಗೆ ‘ಒನ್​ ಬಕೆಟ್‘​ ಚಾಲೆಂಜ್​ ನೀಡಿದ್ದು, ​ಜುಲೈ 21 ರಂದು ಭಾನುವಾರ ಒಂದು ಬಕೆಟ್​ ನೀರು ಮಾತ್ರ ಉಪಯೋಗಿಸಿ ಎಂದು ಅಭಿಮಾನಿಗಳಿಗೆ ಒತ್ತಾಯಿಸಿದ್ದಾರೆ. ಮುಖ ತೊಳೆಯುವಾಗ, ವಾಹನ ತೊಳೆಯುವಾಗ ಅಥವಾ ಟ್ಯಾಪ್​ ಆನ್​ ಮಾಡಿದಾಗ ಕೇವಲ ಒಂದು ಬಕೆಟ್​ ನೀರನ್ನು ಮಾತ್ರ ಉಪಯೋಗಿಸಿ, ಹೆಚ್ಚು ನೀರಿನ ಬಳಕೆಯನ್ನು ಮಾಡಬೇಡಿ ಎಂದು ಬರೆದಿದ್ದಾರೆ.

Harshith AS | news18
Updated:July 18, 2019, 7:27 PM IST
One Bucket challenge: ಹೀಗೊಂದು ಕ್ಯಾಂಪೇನ್​​ ಸಮಂತಾ ಅಕ್ಕಿನೇನಿ ಶುರು ಮಾಡಿದ್ದೇಕೆ?
ಸಮಂತಾ ಅಕ್ಕಿನೇನಿ
  • News18
  • Last Updated: July 18, 2019, 7:27 PM IST
  • Share this:
ಟಾಲಿವುಡ್​ ನಟಿ ಸಮಂತಾ ಅಕ್ಕಿನೇನಿ ಅಭಿಮಾನಿಗಳಿಗೆ ಹೊಸ ಚಾಲೆಂಜ್​ವೊಂದನ್ನು ನೀಡಿದ್ದಾರೆ. ದೇಶದಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಮಂತಾ, ಅಭಿಮಾನಿಗಳಿಗೆ ‘ಒನ್ ಬಕೆಟ್​‘ ಚಾಲೆಂಜ್​ ಅನ್ನು ನೀಡಿದ್ದಾರೆ.

ಸಮಂತಾ ತನ್ನ ಟ್ಟಿಟ್ಟರ್​ ಖಾತೆಯಲ್ಲಿ ಅಭಿಮಾನಿಗಳಿಗೆ ‘ಒನ್​ ಬಕೆಟ್‘​ ಚಾಲೆಂಜ್​ ಬಗ್ಗೆ ಬರೆದುಕೊಂಡಿದ್ದು, ​ಎಲ್ಲರೂ ಜುಲೈ 21 ರಂದು ಭಾನುವಾರ ಒಂದು ಬಕೆಟ್​ ನೀರು ಮಾತ್ರ ಉಪಯೋಗಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಮುಖ ತೊಳೆಯುವಾಗ, ವಾಹನ ತೊಳೆಯುವಾಗ ಅಥವಾ ಟ್ಯಾಪ್​ ಆನ್​ ಮಾಡಿದಾಗ ಕೇವಲ ಒಂದು ಬಕೆಟ್​ ನೀರನ್ನು ಮಾತ್ರ ಉಪಯೋಗಿಸಿ, ಹೆಚ್ಚು ನೀರಿನ ಬಳಕೆಯನ್ನು ಮಾಡಬೇಡಿ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸದನವನ್ನು ಮುಂದೂಡಿದ ಸ್ಪೀಕರ್;ಬಹುಮತ ಸಾಬೀತಿಗೆ ಅಹೋರಾತ್ರಿ ಧರಣಿ ಕರೆಕೊಟ್ಟ ಬಿಎಸ್​ವೈ

 


ಅಭಿಮಾನಿಗಳಿಗೆ ನೀರಿನ ಸಮಸ್ಯೆ ಮತ್ತು ಜಾಗೃತಿಯ ಬಗ್ಗೆ ಚಾಲೆಂಜ್​ ನೀಡಿರುವ ಸಮಂತಾ, ಇದರಲ್ಲಿ ಯಾವುದೇ ಮೋಸವಿರಬಾರದು, ಒಂದು ಬಕೆಟ್​ಗಿಂತ ಹೆಚ್ಚಿನ ನೀರು ಬಳಸಬಾರದು ಎಂದು ಹೇಳಿದ್ದಾರೆ. ಸಮಂತಾಳ ಈ ಜಾಲೆಂಜ್​ ಅನ್ನು ಅಭಿಮಾನಿಗಳು ಫಾಲೋಮಾಡುತ್ತಿದ್ದು, ಆಕೆಗೆ ಶುಭ ಹಾರೈಸಿದ್ದಾರೆ.

First published: July 18, 2019, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading