ಮದುವೆಯಾದ ಎರಡು ವರ್ಷಗಳ ಬಳಿಕ ಸಿಹಿ ಸುದ್ದಿ ನೀಡುತ್ತಿದ್ದಾರೆ ಸಮಂತಾ-ನಾಗಚೈತನ್ಯ ದಂಪತಿ!

ಅಕ್ಕಿನೇನಿ ಕುಟುಂಬಕ್ಕೆ ಶೀಘ್ರವೇ ಹೊಸ ಸದಸ್ಯನ ಆಗಮನವಾಗಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಸಮಂತಾ ಒಂದು ವರ್ಷಗಳ ಕಾಲ ಮಗುವಿನ ಆರೈಕೆಯಲ್ಲಿ ತೊಡಗಲಿದ್ದಾರಂತೆ. 2021ರ ಅಂತ್ಯಕ್ಕೆ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್​ ಮಾಡುವ ಆಲೋಚನೆ ಅವರದ್ದು.

Rajesh Duggumane | news18-kannada
Updated:September 13, 2019, 8:01 PM IST
ಮದುವೆಯಾದ ಎರಡು ವರ್ಷಗಳ ಬಳಿಕ ಸಿಹಿ ಸುದ್ದಿ ನೀಡುತ್ತಿದ್ದಾರೆ ಸಮಂತಾ-ನಾಗಚೈತನ್ಯ ದಂಪತಿ!
ಸಮಂತಾ-ಪತಿ ನಾಗಚೈತನ್ಯ
  • Share this:
ನಟಿ ಸಮಂತಾ ಅಕ್ಕಿನೇನಿ ಹಾಗೂ ನಟ ನಾಗ ಚೈತನ್ಯ 2017ರಲ್ಲಿ ವಿವಾಹವಾಗಿದ್ದರು. ಸಿನಿಮಾ ನಂತರ ಸಾಲು ಸಾಲು ಹಿಟ್​ ಚಿತ್ರಗಳನ್ನು ನೀಡಿದ ಹೆಚ್ಚುಗಾರಿಕೆ ಸಮಂತಾ ಅವರದ್ದು. ಮದುವೆಯಾಗಿ ಎರಡು ವರ್ಷಗಳ ಬಳಿಕ ಅವರು ಸಿಹಿ ಸುದ್ದಿ ನೀಡುತ್ತಿದ್ದಾರೆ!

ಹೌದು, ಸಮಂತಾ ಶೀಘ್ರವೇ ತಾಯಿ ಆಗಲಿದ್ದಾರೆ ಎನ್ನುವ ವಿಚಾರ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಅದಕ್ಕೆ ಕಾರಣ ಕೂಡ ಸಾಕಷ್ಟಿವೆ. ಮದುವೆಗೆ ಮೊದಲಿದ್ದ ಮಾರುಕಟ್ಟೆ ಸಮಂತಾಗೆ ಈಗ ಉಳಿದಿಲ್ಲ. ಈ ವಿಚಾರವನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಕೂಡ.

ಸಮಂತಾ ಕೈಯಲ್ಲಿ ಈಗ ಇರುವುದು ಒಂದು ಸಿನಿಮಾ ಮಾತ್ರ. ತಮಿಳಿನಲ್ಲಿ ತೆರೆಕಂಡು ಹಿಟ್​ ಆಗಿದ್ದ ‘96’ ಚಿತ್ರ ತೆಲುಗಿಗೆ ರಿಮೇಕ್​ ಆಗುತ್ತಿದ್ದು, ಈ ಸಿನಿಮಾಗೆ ಸಮಂತಾ ನಾಯಕಿ. ವಿದೇಶಿ ಪ್ರಯಾಣ ಮುಗಿಸಿ ಬಂದಿರುವ ಸಮಂತಾ ಈ ಚಿತ್ರದ ಶೂಟಿಂಗ್​​ಅನ್ನು ಶೀಘ್ರವೇ ಪೂರ್ಣಗೊಳಿಸಿ ಎಂದು ನಿರ್ದೇಶಕರ ಬಳಿ ಕೋರಿದ್ದಾರೆ. ಅಲ್ಲದೆ, ಸಮಂತಾ ಫುಲ್​ ಕಾಲ್​ಶೀಟ್​ ನೀಡಿದ್ದಾರೆ! ಸೆ.16ರಿಂದ ಅಕ್ಟೋಬರ್​ 10ರವರೆಗೆ ಅವರು ನಿರಂತರವಾಗಿ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಶೂಟಿಂಗ್​ ಮುಗಿದ ನಂತರ ಚಿತ್ರರಂಗದಿಂದ ಬ್ರೇಕ್​ ಪಡೆದುಕೊಳ್ಳಲು ಸಮಂತಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಕ್ಕಿನೇನಿ ಕುಟುಂಬಕ್ಕೆ ಶೀಘ್ರವೇ ಹೊಸ ಸದಸ್ಯನ ಆಗಮನವಾಗಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಸಮಂತಾ ಒಂದು ವರ್ಷಗಳ ಕಾಲ ಮಗುವಿನ ಆರೈಕೆಯಲ್ಲಿ ತೊಡಗಲಿದ್ದಾರಂತೆ. 2021ರ ಅಂತ್ಯಕ್ಕೆ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್​ ಮಾಡುವ ಆಲೋಚನೆ ಅವರದ್ದು.

ಇದನ್ನೂ ಓದಿ:  ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಈ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ ನಟಿ ಸಮಂತಾ ಅಕ್ಕಿನೇನಿ!

ಸಮಂತಾ 96 ರಿಮೇಕ್​ಅನ್ನು ಶೀಘ್ರವೇ ಮುಗಿಸಬೇಕು ಎಂದು ಯೋಜನೆ ಹಾಕಿಕೊಳ್ಳಲು ಮತ್ತೊಂದು ಕಾರಣವಿದೆ.     ಸಮಂತಾ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿದ್ದಾರಂತೆ. ಮುಂದಿನ ದಿನಗಳಲ್ಲಿ ಅದರಲ್ಲಿ ಬ್ಯುಸಿ ಆಗುವುದರಿಂದ ಸಿನಿಮಾ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಆಲೋಚನೆ ಅವರದ್ದು. ಈ ಬಗ್ಗೆ ಸಮಂತಾ ಅವರ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

First published: September 13, 2019, 8:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading