ನಾಗಚೈತನ್ಯನಿಂದ ದೂರಾದ ಮೇಲೆ ಸತ್ತೇ ಹೋಗ್ತಿನಿ ಅಂದ್ಕೊಂಡಿದ್ದೆ: ಮನದಾಳದ ಮಾತು ಬಿಚ್ಚಿಟ್ಟ ಸಮಂತಾ!

ಸಮಂತಾ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ನಾಗಚೈತನ್ಯರಿಂದ ಬೇರೆಯಾದ ಬಳಿಕ ನಾನು ಕುಗ್ಗಿ ಹೋಗುತ್ತೇನೆ ಎಂದು ಭಾವಿಸಿದ್ದೆ ಆದರೆ ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಎಂದು ಊಹಿಸಿರಲಿಲ್ಲ. ಸತ್ತೇ ಹೋಗುತ್ತೆನೆ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ.

ನಟಿ ಸಮಂತಾ

ನಟಿ ಸಮಂತಾ

  • Share this:
ಭಾರತೀಯ ಚಿತ್ರರಂಗದ ಬ್ಯೂಟಿ ಕ್ವೀನ್(Beauty Queen)​ ಸಮಂತಾ(Samantha) ಅವರ ಪರ್ಸೆನಲ್​ ಲೈಫ್​ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ವಿಚ್ಛೇದನ(Divorce) ಪಡೆದಿದ್ದರು. ನಾಗಚೈತನ್ಯ(Naga Chaithanya) ಹಾಗೂ ಸಮಂತಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರಿಬ್ಬರ ನಡುವೆ ಭಿನ್ನಬಿಪ್ರಾಯಗಳು ಹೆಚ್ಚಾಗಿತ್ತು. ಹೀಗಾಗಿ ಇಬ್ಬರು ಒಪ್ಪಿಕೊಂಡೇ ದೂರಾಗಿದ್ದಾರೆ. ವಿಚ್ಛೇಧನ ಪಡೆದ ಬಳಿಕ ಸಮಂತಾ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಒಂದು ಹಾಲಿವುಡ್(Hollywood)​​ ಚಿತ್ರದಲ್ಲೂ ಸಮಂತಾ ನಟಿಸಲಿದ್ದಾರೆ. ಇನ್ನೂ ಪುಷ್ಪ(Pushpa) ಚಿತ್ರದ ಐಟಂ ಸಾಂಗ್​(Item Song) ಒಂದರಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಸಖತ್​ ಸುದ್ದಿಯಾಗಿತ್ತು. ಹೊಸ ವಿಷಯ ಅಂದರೆ, ಸಮಂತಾ ವಿಚ್ಛೇದನ ಪಡೆದ ಬಳಿಕ ಅನುಭವಿಸಿದ ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ. ವಿಚ್ಛೆದನದ ಬಳಿಕ ಸಂದರ್ಶನವೊಂದರಲ್ಲಿ ಸಮಂತಾ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ನಾಗಚೈತನ್ಯರಿಂದ ಬೇರೆಯಾದ ಬಳಿಕ ನಾನು ಕುಗ್ಗಿ ಹೋಗುತ್ತೇನೆ ಎಂದು ಭಾವಿಸಿದ್ದೆ ಆದರೆ ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಎಂದು ಊಹಿಸಿರಲಿಲ್ಲ. ಸತ್ತೇ ಹೋಗುತ್ತೆನೆ ಎಂದುಕೊಂಡಿದ್ದೆ. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಇದೇ ಮೊದಲ ಬಾರಿಗೆ ತಮ್ಮ ವಿಚ್ಛೇದನದ ನಂತರದ ಬದುಕಿನ ಕುರಿತು ಸಮಂತಾ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಲ್ಲಿ ಭಾರೀ ಚರ್ಚೆಯಾಗುತ್ತಿದೆ. 

ನನ್ನ ಬಗ್ಗೆ ನನಗೆ ಹೆಮ್ಮೆ ಇದೆ ಎಂದ ಸಮಂತಾ

ಫಿಲ್ಮ್​ ಫೇರ್​ ಸಂದರ್ಶನವೊಂದರಲ್ಲಿ ಸಮಂತಾ ನಾಗಚೈತನ್ಯರೊಂದಿಗೆ ಬೇರೆಯಾಗಿದ್ದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜೀವನದಲ್ಲಿ ಕಷ್ಟದ ದಿನಗಳು ಬರುವುದು ಸಾಮಾನ್ಯ. ಅದನ್ನು ನಾವು ಧೈರ್ಯದಿಂದ ಎದುರಿಸಬೇಕು,ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮಗೆ ಇರಬೇಕು. ನಾನು ನನ್ನನ್ನು ತುಂಬಾ ದುರ್ಬಲ ವ್ಯಕ್ತಿ ಎಂದು ಭಾವಿಸಿದ್ದೆ, ವಿಚ್ಛೇದನದ ಬಳಿಕ ಕುಗ್ಗಿ ಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ ಆದರೆ ನನ್ನನ್ನು ನಾನು ಸಮರ್ಥವಾಗಿ ನಿಭಾಯಿಸಿಕೊಂಡಿದ್ದೇನೆ. ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಎಂದು ಭಾವಿಸಿರಲಿಲ್ಲ. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಇನ್ನು ಜೀವನದಲ್ಲಿ ಬಹಳ ಮುಂದೆ ಸಾಗಬೇಕಿದೆ ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : Samantha: ಊಟ ಇಲ್ಲಾಂದ್ರೂ ಓಕೆ, ಸೆಕ್ಸ್​ ಬೇಕೇ ಬೇಕಂತೆ ಸಮಂತಾಗೆ: ವಿಡಿಯೋ ವೈರಲ್​!

‘ಯಶೋದಾ’ ಶೂಟಿಂಗ್​ನಲ್ಲಿ ಬ್ಯುಸಿ ಸಮಂತಾ

ನಿನ್ನೆ ಸಮಂತಾ ತಮ್ಮ ಹೊಸ ಚಿತ್ರ ಯಶೋದಾ ಚಿತ್ರೀಕರಣವನ್ನು ಪುಣೆಯಲ್ಲಿ ಆರಂಭಿಸಿದ್ದಾರೆ. ಈ ಚಿತ್ರವನ್ನು ಹರಿ ಮತ್ತು ಹರೀಶ್ ನಿರ್ದೇಶಿಲಿದ್ದು, ತೆಲುಗು, ಮಲಯಾಳಂ, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಮಂತಾ ಲೇಖಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಪೋಸ್ಟರ್​ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ತಮ್ಮ ಮೊಟ್ಟ ಮೊದಲ ಹಾಲಿವುಡ್​ ಸಿನಿಮಾದ ಬಗ್ಗೆಯೂ ನಟಿ ಈ ಹಿಂದೆ ಪೋಸ್ಟ್ ಮಾಡಿದ್ದರು. ಸದ್ಯ ಶೂಟಿಂಗ್​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಂತಾ ವಿಚ್ಛೇದನದ ವಿಚಾರವನ್ನು ಮರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ‘ಪುಷ್ಪ’ದಲ್ಲಿನ ಸಮಂತಾ ಲುಕ್​ಗೆ ಅಭಿಮಾನಿಗಳು ಫಿದಾ!

ಸೆಕ್ಸ್​ ಬಗ್ಗೆ ಮಾತಾಡಿದ್ದ ಹಳೇ ವಿಡಿಯೋ ವೈರಲ್​ !

ನಟಿ ಸಮಂತಾ ಅವರ ಹಳೆಯ ಸಂದರ್ಶನದ ತುಣುಕೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.  ಈ ವಿಡಿಯೋದಲ್ಲಿ ಸಮಂತಾ ಅವರು ಸೆಕ್ಸ್ ಕುರಿತು ಹೇಳಿದ ಮಾತುಗಳೂ ವೈರಲ್ ಆಗಿವೆ. 2017ರ ಸಂದರ್ಶನ ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ಸಮಂತಾರಲ್ಲಿ ಆಹಾರವೋ ಸೆಕ್ಸ್ ಮುಖ್ಯವೋ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಟಿ ಒಂದಿನ ಆಹಾರ ಇಲ್ಲಾಂದ್ರೂ ಓಕೆ, ಆದರೆ ಸೆಕ್ಸ್ ಬೇಕೇ ಬೇಕು ಎಂದು ಉತ್ತರ ಕೊಟ್ಟಿದ್ದಾರೆ ನಟಿ. ಒಂದಿನ ಊಟ ಇಲ್ಲವೆಂದರೂ ನಿಲ್ಲಬಹುದು, ಸೆಕ್ಸ್ ಇಲ್ಲದೆ ಇರಲಾರೆ ಎಂದಿದ್ದಾರೆ ಸಮಂತಾ. ಈ ವಿಡಿಯೋ ಇದೀಗ ಎಲ್ಲೆಡೆ ಸಖತ್​ ವೈರಲ್​ ಆಗುತ್ತಿದೆ. ನೆಟ್ಟಿಗರು ಸಮಂತಾ ಅವರ ಹೇಳಿಕೆ ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ
Published by:Vasudeva M
First published: