ಗಾಳಿ ಸುದ್ದಿಗೆ ಬ್ರೇಕ್​ ಹಾಕಿದ Samantha Akkineni: ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ..!

ಮಂತಾ ಅಕ್ಕಿನೇನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಇತ್ತೀಚೆಗಷ್ಟೆ ಅವರು ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದು ಅವರು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಈ ವೇಳೆ ಅವರ ಕುರಿತಾಗಿ ಹರಿದಾಡುತ್ತಿರುವ ಗಾಸಿಪ್ ಒಂದಕ್ಕೆ ಸಂಬಂಧಿಸಿದಂತೆ ಸಮಂತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ಸಮಂತಾ-ನಾಗಚೈತನ್ಯ

ಸಮಂತಾ-ನಾಗಚೈತನ್ಯ

  • Share this:
ನಾಗ ಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ಅವರ ವೈವಾಹಿಕ ಜೀವನ ಹಾಗೂ ಅವರ ಕೆಲವು ವೈಯಕ್ತಿಕ ವಿಷಯಗಳ ಕುರಿತಾಗಿ ಸಾಕಷ್ಟು ಗಾಳಿ ಸುದ್ದಿ ಹರಿದಾಡುತ್ತಿವೆ. ಈ ಸಂಬಂಧ ಇತ್ತೀಚೆಗಷ್ಟೆ ನಾಗ ಚೈತನ್ಯ ಅವರು ತಮ್ಮ ಹೊಸ ಸಿನಿಮಾ ಲವ್​ ಸ್ಟೋರಿ ಪ್ರಚಾರ ಕಾರ್ಯಕ್ರಮದಲ್ಲಿ ಸ್ಪಷ್ಟನೆ ಕೊಟ್ಟಿದ್ದರು. ಇನ್ನು ನಾಗ ಚೈತನ್ಯ ಹಾಗೂ ಸಮಂತಾ ಅವರ ವೈವಾಹಿಕ ಜೀವನದಲ್ಲಿ ಬಿರುಕುಂಟಾಗಿದ್ದು, ಅವರು ಈಗ ಒಟ್ಟಿಗೆ ಇಲ್ಲ. ಸದ್ಯದಲ್ಲೇ ಈ ಜೋಡಿ ತಮ್ಮ ವಿಚ್ಛೇದನದ ವಿಷಯ ಪ್ರಕಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದರ ಜತೆಗೆ ಸಮಂತಾ ಅವರು ಹೈದರಾಬಾದ್​ ಅನ್ನು ತೊರೆಯಲಿದ್ದಾರೆ. ನಾಗ ಚೈತನ್ಯ ತಮ್ಮ ಅಪ್ಪನ ಮನೆ ಸೇರಿಕೊಂಡಿದ್ದಾರೆ ಅನ್ನೋ ಸುದ್ದಿಗಗೂ ಹರಿದಾಡುತ್ತಿವೆ. ಈ ಗಾಸಿಪ್​ಗಳ ಕುರಿತಾಗಿ ಸಮಂತಾ ಈಗ ತಮ್ಮ ಮೌನ ಮುರಿದಿದ್ದಾರೆ. ಅಭಿಮಾನಿಗಳಿಗೆ ತಾವೇ ಹರಿದಾಡುತ್ತಿರುವ ಗಾಳಿ ಸುದ್ದಿಯೊಂದರ ಕುರಿತಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. 

ಸಮಂತಾ ಅಕ್ಕಿನೇನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಇತ್ತೀಚೆಗಷ್ಟೆ ಅವರು ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದು ಅವರು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಈ ವೇಳೆ ಅವರ ಕುರಿತಾಗಿ ಹರಿದಾಡುತ್ತಿರುವ ಗಾಸಿಪ್ ಒಂದಕ್ಕೆ ಸಂಬಂಧಿಸಿದಂತೆ ಸಮಂತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಹೌದು, ಸಮಂತಾ ಅಕ್ಕಿನೇನಿ ಅವರು ಮುಂಬೈಗೆ ಹಾರಲಿದ್ದು, ಅಲ್ಲೇ ಸೆಟಲ್ ಆಗಲಿದ್ದಾರೆ. ಗಂಡನಿಂದ ದೂರಾಗಿರುವ ಸಮಂತಾ ಈಗ ಬಾಲಿವುಡ್​ ಪ್ರಾಜೆಕ್ಟ್​ಗಳತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಕುರಿತಾಗಿ ಅಭಿಮಾನಿಯೊಬ್ಬರು ಸಮಂತಾ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿರುವ ನಟಿ,ನಾನು ಹೈದರಾಬಾದ್​ ಬಿಟ್ಟು ಹೋಗುವುದಿಲ್ಲ. ಹೈದರಾಬಾದ್​ ನನ್ನ ಮನೆ ಎಂದಿದ್ದಾರೆ.

ಇದನ್ನೂ ಓದಿ: ಗಾಳಿ ಸುದ್ದಿಗಳಿಗೆ ಬ್ರೇಕ್​ ಹಾಕಿದ್ರಾ Samantha Akkineni: ನಟಿಯ ಮದುವೆ ದಿನವನ್ನು ನೆನಪಿಸುತ್ತೆ ಈ ಚಿತ್ರಗಳು..!

ಸಮಂತಾ ಹಾಗೂ ನಾಗ ಚೈತನ್ಯ ಅವರ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದ್ದು ಅವರು ಬೇರೆ ಮನೆ ಮಾಡುವ ಯೋಚನೆ ಮಾಡಿದ್ದಾರಂತೆ. ಅಲ್ಲದೆ ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿಯಲ್ಲಿನ ಅಭಿನಯದಿಂದಾಗಿ ಉತ್ತರ ಭಾರತದಲ್ಲಿ ಸಮಂತಾ ಅಕ್ಕಿನೇನಿ ಅವರಿಗೆ ಬೇಡಿಕೆ ಹೆಚ್ಚಿದೆಯಂತೆ. ಈ ಕಾರಣದಿಂದಲೇ ಅವರು ಇನ್ನು ಮುಂಬೈನತ್ತ ಮುಖ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಸಮಂತಾ ಅವರು ಕೊಟ್ಟಿರುವ ಸ್ಪಷ್ಟನೆಯಿಂದ ಈ ಸುದ್ದಿಗೆ ಬ್ರೇಕ್ ಬಿದ್ದಂತಾಗಿದೆ. ಇನ್ನು ನಾಗ ಚೈತನ್ಯ ಜೊತೆಗಿನ ಸಂಬಂಧದ ಕುರಿತಾಗಿ ಕೇಳಿದ ಯಾವ ಪ್ರಶ್ನೆಗೂ ಸಮಂತಾ ಉತ್ತರಿಸಿಲ್ಲ.

ಅಕ್ಟೋಬರ್ 7ರಂದು ನಟಿ ಸಮಂತಾ ಹಾಗೂ ನಾಗ ಚೈತನ್ಯ ಅವರ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಇದೆ. 2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಈ ಜೋಡಿಯ ಮದುವೆಯಾಗಿತ್ತು. ಈ ದಿನದಂದೇ ಈ ಸೆಲೆಬ್ರಿಟಿ ಜೋಡಿ ತಮ್ಮ ವಿಚ್ಛೇದನದ ಸುದ್ದಿ ಪ್ರಕಟಿಸಲಿದ್ದಾರೆ ಅನ್ನೋ ಸುದ್ದಿ ಸಹ ಹರಿದಾಡುತ್ತಿದೆ. ಆದರೆ ಅಕ್ಟೋಬರ್. 7ರಂದು ಯಾವ ಸುದ್ದಿ ಹೊರ ಬೀಳಲಿದೆ ಅನ್ನೋ ಕುತೂಹಲ ಸಿನಿಪ್ರಿಯರನ್ನು ಕಾಡುತ್ತಿದೆ. ಏನೇ ಆಗಲಿ, ಈ ಮುದ್ದಾದ ಜೋಡಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ಹುರುಳಿಲ್ಲ ಎಂದು ಹೇಳುವ ಮೂಲಕ ಸಿಹಿ ಸುದ್ದಿ ನೀಡಲಿ ಅನ್ನೋದು ಅಭಿಮಾನಿಗಳ ಆಶಯ.

ಇದನ್ನೂ ಓದಿ: Samantha ಕುರಿತಾಗಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ Naga Chaitanya

ಸಮಂತಾ ಅಕ್ಕಿನೇನಿ ಕಳೆದ ಕೆಲ ಸಮಯದಿಂದ ಪತಿ ನಾಗ ಚೈತನ್ಯ ಹಾಗೂ ಅವರ ಕುಟುಂಬದವರ ಜೊತೆ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೆ ಪತಿಯ ಸಿನಿಮಾ ಲವ್ ಸ್ಟೋರಿ ಕಾರ್ಯಕ್ರಮಗಳಲ್ಲೂ ಗೈರಾಗಿದ್ದರು. ನಾಗಾರ್ಜುನ ಅವರ ಹುಟ್ಟುಹಬ್ಬ, ಅಮೀರ್ ಖಾನ್​ ಜತೆಗಿನ ಡಿನ್ನರ್ ಪಾರ್ಟಿ ಹೀಗೆ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಸಮಂತಾ ಕಾಣಿಸಿಕೊಂಡಿಲ್ಲ. ಸಿನಿಮಾಗಳ ಜತೆಗೆ ಸಮಂತಾ ತಮ್ಮ ಫೋಟೋಶೂಟ್​ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
Published by:Anitha E
First published: