Sam Bahadur: ಸ್ಯಾಮ್ ಬಹದ್ದೂರ್ ಟೈಟಲ್ ಫೈನಲ್; ಭಾರತದ ಪ್ರಥಮ ಫೀಲ್ಡ್ ಮಾರ್ಷಲ್ ಬಯೋಪಿಕ್

ಸ್ಯಾಮ್ ಮಾಣಿಕ್‍ಶಾರ ನಿಜ ಹೆಸರು ಸ್ಯಾಮ್ ಹೋರ್ಮಸ್ಜೀ ಫ್ರಾಮ್‍ಜೀ ಜಮ್‍ಶೆಡ್‍ಜೀ ಮಾಣಿಕ್‍ಶಾ. ಅವರನ್ನು ಅವರ ಗೆಳೆಯರು, ಸೈನಿಕರು, ಅವರನ್ನು ತಿಳಿದುವರು ಪ್ರೀತಿಯಿಂದ ಹಲವಾರು ಹೆಸರುಗಳಲ್ಲಿ ಕರೆಯುತ್ತಿದ್ದರು. ಕೆಲವರು ಮಾಣಿಕ್‍ಸ್ಯಾಮ್, ಕೆಲವರು ಮ್ಯಾಕಿಂಟೋಶ್, ಮಾಣಿಕ್‍ಜೀ, ಸ್ಯಾಮ್ ಮಾಣಿಕ್‍ಶಾ... ಹೀಗೆ ನಾನಾ ಹೆಸರುಗಳನ್ನು ಬಳಸುತ್ತಿದ್ದರು.

 ಸ್ಯಾಮ್ ಮಾಣಿಕ್‍ಶಾ

ಸ್ಯಾಮ್ ಮಾಣಿಕ್‍ಶಾ

  • Share this:
ಸ್ಯಾಮ್ ಬಹದ್ದೂರ್ ಮಾಣಿಕ್‍ಶಾ ಭಾರತದ ಪ್ರಥಮ ಫೀಲ್ಡ್ ಮಾರ್ಷಲ್. ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೇನೆಯನ್ನು ಬಗ್ಗು ಬಡಿದು ಬಾಂಗ್ಲಾದೇಶದಿಂದ ಹೊರಗಟ್ಟಿದ ವೀರ ಸೇನಾನಿ. ಈಗ ದೇಶ ಕಂಡ ಅಪ್ರಥಿಮ ಧೀರನ ಬಯೋಪಿಕ್ ಸಿದ್ಧವಾಗುತ್ತಿದೆ. ಚಿತ್ರದ ಹೆಸರು ಸ್ಯಾಮ್ ಬಹದ್ದೂರ್.

ಹೌದು, 2019ರಲ್ಲಿಯೇ ನಿರ್ದೇಶಕ ಮೇಘನಾ ಗುಲ್ಜಾರ್ ಫೀಲ್ಡ್ ಮಾರ್ಷಲ್ ಸ್ಯಾಮ್ ಬಹದ್ದೂರ್ ಮಾಣಿಕ್‍ಶಾ ಬಯೋಪಿಕ್ ಅನೌನ್ಸ್ ಮಾಡಿದ್ದರು. ಮಾಣಿಕ್‍ಶಾ ಪಾತ್ರದಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ನಟಿಸುತ್ತಿದ್ದು, ಅವರ ಲುಕ್ ಕೂಡ ರಿಲೀಸ್ ಆಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಬರೋಬ್ಬರಿ ಒಂದು ವರ್ಷ ತಡವಾಗಿದೆ. ಈಗ ಹೊಸ ಹುರುಪಿನೊಂದಿಗೆ ವಾಪಸ್ಸಾಗಿರುವ ಚಿತ್ರತಂಡ ಸ್ಯಾಮ್ ಮಾಣಿಕ್‍ಶಾ ಅವರ ಹುಟ್ಟುಹಬ್ಬದಂದೇ ಚಿತ್ರದ ಟೈಟಲ್ ಸ್ಯಾಮ್ ಬಹದ್ದೂರ್ ಎಂದು ಅನೌನ್ಸ್ ಮಾಡಿದೆ.

ಅಂದ್ಹಾಗೆ, ಸ್ಯಾಮ್ ಮಾಣಿಕ್‍ಶಾರ ನಿಜ ಹೆಸರು ಸ್ಯಾಮ್ ಹೋರ್ಮಸ್ಜೀ ಫ್ರಾಮ್‍ಜೀ ಜಮ್‍ಶೆಡ್‍ಜೀ ಮಾಣಿಕ್‍ಶಾ. ಅವರನ್ನು ಅವರ ಗೆಳೆಯರು, ಸೈನಿಕರು, ಅವರನ್ನು ತಿಳಿದುವರು ಪ್ರೀತಿಯಿಂದ ಹಲವಾರು ಹೆಸರುಗಳಲ್ಲಿ ಕರೆಯುತ್ತಿದ್ದರು. ಕೆಲವರು ಮಾಣಿಕ್‍ಸ್ಯಾಮ್, ಕೆಲವರು ಮ್ಯಾಕಿಂಟೋಶ್, ಮಾಣಿಕ್‍ಜೀ, ಸ್ಯಾಮ್ ಮಾಣಿಕ್‍ಶಾ... ಹೀಗೆ ನಾನಾ ಹೆಸರುಗಳನ್ನು ಬಳಸುತ್ತಿದ್ದರು. ಹೀಗಾಗಿಯೇ ನಿರ್ದೇಶಕಿ ಮೇಘನಾ ಗುಲ್ಜಾರ್ ಭಾರತದ ಪ್ರಥಮ ಫೀಲ್ಡ್ ಮಾರ್ಷಲ್‍ರ ಬಯೋಪಿಕ್‍ಗೆ ಏನಂತ ಟೈಟಲ್ ಇಡಬೇಕು ಎಂದು ಸಾಕಷ್ಟು ಯೋಚಿಸಬೇಕಿತ್ತು. ಕೊನೆಗೆ ಸ್ಯಾಮ್ ಬಹದ್ದೂರ್ ಎಂಬ ಟೈಟಲ್‍ಅನ್ನು ಚಿತ್ರತಂಡ ಅಂತಿಮಗೊಳಿಸಿದೆ.

ರಾಜ್ಯಕ್ಕೆ ಬರಲಿದೆ ಮಕ್ಕಳಲ್ಲಿ ಆವಿಷ್ಕಾರ ಮನೋಭಾವ ಬೆಳೆಸುವ ಬಿ-ಕ್ಯಾಂಪ್‌ ಆ್ಯಂಡ್ ಫೆಸ್ಟ್‌

ಇನ್ನು ಬಾಲಿವುಡ್‍ನ ಹೆಸರಾಂತ ಚಿತ್ರಸಾಹಿತಿ ಗುಲ್ಜಾರ್ ಹಾಗೂ ಹಿರಿಯ ನಟಿ ರಾಖೀ ಪುತ್ರಿಯಾದ ಮೇಘನಾ ಗುಲ್ಜಾರ್ 2002ರಲ್ಲಿ ಫಿಲ್ಹಾಲ್ ಚಿತ್ರದ ಮೂಲಕ ನಿರ್ದೇಶನಕ್ಕಿಳಿದರು. ಆ ಬಳಿಕ ಜಸ್ಟ್ ಮ್ಯಾರೀಡ್, ದಸ್ ಕಹಾನಿಯಾ ಚಿತ್ರಗಳನ್ನು ನಿರ್ದೇಶಿಸಿದರು. ನಂತರ 8 ವರ್ಷಗಳ ಗ್ಯಾಪ್ ಪಡೆದ ಅವರು 2015ರಲ್ಲಿ ತಲ್ವಾರ್ ಚಿತ್ರದ ಮೂಲಕ ಮತ್ತೆ ವಾಪಸ್ಸಾದರು. ಅದು ನೋಯ್ಡಾದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದ ಕುರಿತ ಸಿನಿಮಾ. ನಂತರ ಭಾರತದ ಪರ ಪಾಕಿಸ್ತಾನದಲ್ಲಿ ಬೇಹುಗಾರಿಕೆ ಕೆಲಸ ಮಾಡಿದ್ದ ರಾ ಏಜೆಂಟ್ ಜೀವನಾಧಾರಿತ ರಾಝೀ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು. ಇನ್ನು ಕಳೆದ ವರ್ಷ ಮೇಘನಾ ಗುಲ್ಜಾರ್ ಆಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನಾಧಾರಿತ ಛಪಾಕ್ ಸಿನಿಮಾ ನಿರ್ದೇಶಿಸಿದರು. ಹೀಗೆ ಬ್ಯಾಕ್ ಟು ಬ್ಯಾಕ್ ಬಯೋಪಿಕ್‍ಗಳ ಮೂಲಕವೇ ಹೆಚ್ಚು ಸುದ್ದಿ ಮಾಡಿರುವ ಮೇಘನಾ ಗುಲ್ಜಾರ್ ಈಗ ಭಾರತದ ಪ್ರಥಮ ಫೀಲ್ಡ್ ಮಾರ್ಷಲ್ ಸ್ಯಾಮ್ ಬಹದ್ದೂರ್ ಮಾಣಿಕ್‍ಶಾ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಇನ್ನು ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ನಾಯಕನಾಗಿರುವ ವಿಕ್ಕಿ ಕೌಶಲ್ ಕೂಡ ಬಯೋಪಿಕ್‍ಗಳಿಂದಲೇ ಹೆಸರು ಮಾಡಿದವರು. ಸೀರಿಯಲ್ ಕಿಲ್ಲರ್ ಕುರಿತ ರಮಣ್ ರಾಘವ್ 2.0 ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ, ರಾಝೀ ಚಿತ್ರದಲ್ಲಿ ಪಾಕಿಸ್ತಾನದ ಪೊಲೀಸ್ ಆಫೀಸರ್ ಪಾತ್ರದಲ್ಲಿ, ಬಾಲಿವುಡ್ ನಟ ಸಂಜಯ್ ದತ್‍ರ ಬಯೋಪಿಕ್ ಸಂಜು ಚಿತ್ರದಲ್ಲಿ ಅವರ ಬಾಲ್ಯದ ಗೆಳೆಯನಾಗಿ, ಉರಿ - ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದಲ್ಲಿ ಭಾರತೀಯ ಸೇನೆಯ ಅಧಿಕಾರಿಯಾಗಿ ಈಗಾಗಲೇ ವಿಕ್ಕಿ ಕೌಶಲ್ ಮಿಂಚಿದ್ದಾರೆ. ಇವುಗಳ ಜೊತೆಗೆ 1919ರ ಜಲಿಯನ್‍ವಾಲಾ ಭಾಗ್ ಹತ್ಯಾಕಾಂಡಕ್ಕೆ ಕಾರಣನಾದ ಬ್ರಿಟನ್ ಅಧಿಕಾರಿ ಜನರಲ್ ಡೈಯರ್ ಅನ್ನು ಕೊಂದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಉದ್ಧಮ್ ಸಿಂಗ್ ಬಯೋಪಿಕ್‍ನಲ್ಲೂ ವಿಕ್ಕಿ ಕೌಶಲ್ ಉದ್ಧಮ್ ಸಿಂಗ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಸ್ಯಾಮ್ ಮಾಣಿಕ್‍ಶಾ ಪಾತ್ರದಲ್ಲಿ ಮಿಂಚಲು ವಿಕ್ಕಿ ಕೌಶಲ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
Published by:Latha CG
First published: