Viral Photo: ವರ್ಕ್​ಔಟ್ ವೇಳೆ 'ಶರ್ಟ್ ಲೆಸ್' ಫೋಟೋ ಶೇರ್ ಮಾಡಿದ ಸಲ್ಲು; ಫ್ಯಾನ್ಸ್ ಫುಲ್ ಫಿದಾ

ಇತ್ತೀಚೆಗೆ, ಸಲ್ಮಾನ್ ಖಾನ್ ತಮ್ಮ ಇನ್ಸ್ಟಾಗ್ರಾಂ ಪುಟದ ಖಾತೆಯ ಮೂಲಕ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಒಂದು ಚಿತ್ರ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಅವರು ಆ ಚಿತ್ರದಲ್ಲಿ ಶರ್ಟ್ ಇಲ್ಲದೆಯೇ ವರ್ಕೌಟ್ ಮಾಡುತ್ತಿರುವುದನ್ನು ನೋಡಬಹುದು. ಈ ಮೂಲಕ ಅವರು ತಮ್ಮ ದೇಹದ ಬಲಿಷ್ಠತೆಯನ್ನು ಮತ್ತು ಸಿಕ್ಸ್ ಪ್ಯಾಕ್ ಅನ್ನು ಅದ್ಭುತವಾಗಿ ತೋರಿಸಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

  • Share this:
ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಲ್ಮಾನ್ ಖಾನ್ (Salman Khan) ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 1989 ರಲ್ಲಿ ಬಿಡುಗಡೆಯಾಗಿದ್ದ ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಹಿಂದಿ ಚಿತ್ರರಂಗಕ್ಕೆ (Hindi cinema) ಕಾಲಿಟ್ಟಿದ್ದ ಸಲ್ಮಾನ್ ಖಾನ್ ಅಂದಿನ ಸಮಯದಲ್ಲಿ ಲವರ್ ಬಾಯ್ ಇಮೇಜ್ ಅನ್ನು ಹೊಂದಿದ್ದರು. ಮೂರು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಸಲ್ಮಾನ್ ಪ್ರಸ್ತುತ ಚಿತ್ರರಂಗದ ಅತ್ಯುನ್ನತ ಮಟ್ಟದ ಸ್ಟಾರ್ ನಟರುಗಳಲ್ಲಿ (Star Actor) ಒಬ್ಬರಾಗಿದ್ದಾರೆ. ಮೊದಲಿನಿಂದಲೂ ಸಲ್ಮಾನ್ ತಮ್ಮ ದೇಹದಾರ್ಢ್ಯತೆಗೆ ಸಾಕಷ್ಟು ಗಮನವನ್ನು ಹರಿಸಿದ್ದಾರೆ. ಸದಾ ಫಿಟ್ (Fit) ಆಗಿರುವ ಸಲ್ಮಾನ್ ಅವರ ದೇಹವನ್ನು ಉತ್ತಮವಾಗಿರಿಸಿಕೊಂಡಿರುವುದಲ್ಲದೆ ಸಿಕ್ಸ್ ಪ್ಯಾಕ್ ಆಬ್ಸ್ ಗಳನ್ನು ಸಹ ಹೊಂದಿದ್ದಾರೆ.

ಸಿನೆಮಾದಲ್ಲಿಅವರು ಶರ್ಟ್ ಲೆಸ್ ಆಗುತ್ತಿದ್ದಾರೆಂದರೆ ಅವರ ಪುರುಷ ಅಭಿಮಾನಿಗಳು ಸಿಳ್ಳೆ ಹೊಡೆದರೆ ಮಹಿಳಾ ಅಭಿಮಾನಿಗಳು ಮೂಕವಿಸ್ಮಿತರಾಗಿ ಹೋಗುತ್ತಾರೆ. ಇದೊಂದೆಡೆಯಾದರೆ ಸಾಮಾನ್ಯವಾಗಿ ಸಲ್ಮಾನ್ ಅವರು ಚಿತ್ರದ ಯಾವುದಾದರೂ ಆಕ್ಷನ್ ಸನ್ನಿವೇಶದಲ್ಲಿ ನಟಿಸುವಾಗ ಅವರು ಯಾವಾಗ ತಮ್ಮ ಶರ್ಟನ್ನು ತೆಗೆಯುತ್ತಾರೋ ಎಂದು ಆತುರಗೆಟ್ಟು ಕಾದು ಕೂರುವ ಅಭಿಮಾನಿಗಳು ಸಾಕಷ್ಟಿದ್ದಾರೆ.

'ಶರ್ಟ್ ಲೆಸ್' ಆಗಿ ವರ್ಕೌಟ್ ಮಾಡುವ ಫೋಟೋ ಶೇರ್
ಇತ್ತೀಚೆಗೆ, ಸಲ್ಮಾನ್ ಖಾನ್ ತಮ್ಮ ಇನ್ಸ್ಟಾಗ್ರಾಂ ಪುಟದ ಖಾತೆಯ ಮೂಲಕ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಒಂದು ಚಿತ್ರ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಅವರು ಆ ಚಿತ್ರದಲ್ಲಿ ಶರ್ಟ್ ಇಲ್ಲದೆಯೇ ವರ್ಕೌಟ್ ಮಾಡುತ್ತಿರುವುದನ್ನು ನೋಡಬಹುದು. ಈ ಮೂಲಕ ಅವರು ತಮ್ಮ ದೇಹದ ಬಲಿಷ್ಠತೆಯನ್ನು ಮತ್ತು ಸಿಕ್ಸ್ ಪ್ಯಾಕ್ ಅನ್ನು ಅದ್ಭುತವಾಗಿ ತೋರಿಸಿದ್ದಾರೆ. ಅಷ್ಟೆ ಅಲ್ಲದೆ, ಈ ಚಿತ್ರದ ಪೋಸ್ಟಿಗೆ ಅವರು 'ಬೀಯಿಂಗ್ ಸ್ಟ್ರಾಂಗ್' ಎಂಬ ಶಿರ್ಷಿಕೆಯನ್ನೂ ಸಹ ನೀಡಿದ್ದಾರೆ.

ಇದನ್ನೂ ಓದಿ: Akshay Kumar: ಸಹೋದರಿಯ ಮಾತು ಕೇಳಿ ಭಾವುಕರಾದ ನಟ ಅಕ್ಷಯ್! ಅಷ್ಟಕ್ಕೋ ಏನ್ ಹೇಳಿದ್ರು ಅಲ್ಕಾ ಭಾಟಿಯಾ

ಫೋಟೋ ನೋಡಿ ಫ್ಯಾನ್ಸ್ ಫುಲ್ ಫಿದಾ 
ಮಂಗಳವಾರದಂದು ತಮ್ಮ ಇನ್ಸ್ಟಾ ಮೂಲಕ ಚಿತ್ರ ಹಂಚಿಕೊಳ್ಳುವ ಮೂಲಕ ಸಲ್ಮಾನ್ ಖಾನ್ ಅವರು ತಮ್ಮ ಅಭಿಮಾನಿಗಳು ಫುಲ್ ಫಿದಾ ಆಗುವಂತೆ ಮಾಡಿದ್ದಾರೆ. ಅವರ ಸಾವಿರಾರು ಅಭಿಮಾನಿಗಳು ಈ ಚಿತ್ರವನ್ನು ನೋಡಿ ಮೆಚ್ಚಿ ಅವರಿಗೆ ತಮ್ಮ ಪ್ರೀತಿಯ ಶುಭ ಹಾರೈಕೆಗಳನ್ನು ಇಮೋಜಿಗಳ ಮೂಲಕ ನೀಡುತ್ತಲೇ ಇದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಸಲ್ಮಾನ್ ಈ ಚಿತ್ರದಲ್ಲಿ ಗಂಭೀರ ಮನೋಭಾವದಲ್ಲಿರುವುದನ್ನು ಕಾಣಬಹುದು.  ಸಲ್ಮಾನ್ ಅವರು ಪ್ರಸ್ತುತ ತಮ್ಮ ಇನ್ಸ್ಟಾ ಖಾತೆಯಲ್ಲಿ 50 ಮಿಲಿಯನ್ ಗಿಂತಲೂ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆಂದರೆ ಅದು ಅವರಿಗಿರುವ ಜನಪ್ರೀಯತೆಯನ್ನು ತೋರಿಸುತ್ತದೆ.
ಹಾಗಾಗಿ, ಅವರ ಲಕ್ಷಾಂತರ ಅಭಿಮಾನಿಗಳು ಅವರ ಲೇಟೆಸ್ಟ್ ಪೋಸ್ಟಿಗಾಗಿ ಬಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಕಳೆದ ಮಂಗಳವಾರ, ಅವರ ಅಭಿಮಾನಿಗಳಿಗೆ ಒಂದು ಅದ್ಭುತ ಕ್ಷಣವಾಗಿತ್ತು, ಏಕೆಂದರೆ ಅವರು ಸದಾ ಬಯಸುವಂತಹ ಸಲ್ಮಾನ್ ಅವರು ತಮ್ಮ ದೇಹದ ಬಲಿಷ್ಠತೆಯನ್ನು ತೋರಿಸುವಂತಹ ಪಿಕ್ ಶೇರ್ ಮಾಡಿಕೊಂಡಿದ್ದೇ ಅದಕ್ಕೆ ಪ್ರಮುಖ ಕಾರಣವಾಗಿತ್ತೆಂದರೆ ತಪ್ಪಾಗಲಿಕ್ಕಿಲ್ಲ. ಈ ಮುಂಚೆಯೂ ಸಲ್ಮಾನ್ ಖಾನ್ ತಮ್ಮ ಕೆಲ ಚಿತ್ರಗಳಲ್ಲಿ ಶರ್ಟ್ ಲೆಸ್ ಆಗಿ ಫೈಟ್ ಮಾಡಿರುವುದನ್ನು ನೋಡಬಹುದಾಗಿದೆ.

ಶರ್ಟ್ ಲೆಸ್ ಆಗಿ ಜನಪ್ರಿಯತೆ ಪಡಿದಿದ್ದು ಯಾವ ಸಿನೆಮಾದಲ್ಲಿ ಗೊತ್ತಾ?
ಸಲ್ಮಾನ್ ಖಾನ್ ತಮ್ಮ ಚಿತ್ರವಾದ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ' ದಲ್ಲಿ "ಒ..ಓ...ಜಾನೆ ಜಾನಾ" ಎಂಬ ಹಾಡಿನಲ್ಲಿ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದರು. ಅದು ತುಂಬಾನೇ ಹಿಟ್ ಆಗಿ ಸಲ್ಮಾನ್ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. ಆ ನಂತರವೇ ಅವರು ಶರ್ಟ್ ಲೆಸ್ ಆಗುವುದು ಸಾಕಷ್ಟು ಜನಪ್ರೀಯತೆ ಪಡೆದುದುಕೊಂಡು ಇಂದಿಗೂ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆ 'ಸಂದರ್ಭ'ಕ್ಕಾಗಿ ಕಾಯುತ್ತಲೇ ಇರುತ್ತಾರೆ.

ಇದನ್ನೂ ಓದಿ: Mannat: ಶಾರುಖ್​ಗಿಂತ ಮೊದಲು ಸಲ್ಮಾನ್ ಖಾನ್​ಗೆ ‘ಮನ್ನತ್’ ಖರೀದಿಸುವ ಆಫರ್ ಬಂದಿತ್ತಂತೆ! ಮತ್ಯಾಕೆ ಖರೀದಿಸಿಲ್ಲ?

ಸಲ್ಮಾನ್ ಖಾನ್ ಅವರ ಮುಂಬರುವ ಸಿನೆಮಾ 
ಪ್ರಸ್ತುತ, ಅವರ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಸಲ್ಮಾನ್ ಕೆಲ ಪ್ರಾಜೆಕ್ಟುಗಳಲ್ಲಿ ಬ್ಯೂಸಿಯಾಗಿದ್ದಾರೆ. ಅವರು ಸಾಜಿದ್ ನದಿಯಾದ್ವಾಲಾ ಅವರ ಮುಂಬರುವ ಆಕ್ಷನ್ ಕಾಮೆಡಿ ಚಿತ್ರವಾದ 'ಕಭೀ ಈದ್ ಕಭೀ ದಿವಾಲಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ, ಜಹೀರ್ ಇಕ್ಬಾಲ್ ಹಾಗೂ ವೆಂಕಟೇಶ್ ದಗ್ಗುಬಾಟಿ ಸಹ ಅಭಿನಯಿಸುತ್ತಿದ್ದು ಸಲ್ಮಾನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಬಿಗ್ ಬಾಸ್ ಖ್ಯಾತಿಯ ಶಹನಾಜ್ ಗಿಲ್ ಸಹ ಈ ಚಿತ್ರದ ಭಾಗವಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆಯಾದರೂ ಆ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
Published by:Ashwini Prabhu
First published: