Salman Khan: ಸಿದ್ಧವಾಗುತ್ತಿದೆ ಸಲ್ಮಾನ್ ಸಿನಿ ಜರ್ನಿಯ  Document - Series

Salman Stardom Docu Series: ಈ ಮಧ್ಯೆ ಸಲ್ಮಾನ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಟೈಗರ್ 3 ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಸಲ್ಮಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅಭಿನಯಿಸುತ್ತಿರುವ ಟೈಗರ್ ಮೂರನೇ ಭಾಗದ ಚಿತ್ರೀಕರಣ  ಹೆಚ್ಚು ಬೇರೆ ದೇಶಗಳಲ್ಲಿ ಪ್ರಸ್ತುತ ನಡೆಯುತ್ತಿದೆ

ನಟ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್

  • Share this:
ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಚಿತ್ರರಂಗದ  ಪ್ರಯಾಣವನ್ನು  ಡಾಕ್ಯುಮೆಂಟ್-ಸರಣಿ ಮಾಡಲು ಯೋಜನೆ ನಡೆಯುತ್ತಿದೆ ಎಂದು ವರದಿಯಾಗಿದೆ. ಸುದ್ದಿ ವೆಬ್‌ಸೈಟ್‌ನ ಪ್ರಕಾರ, ಸಲ್ಮಾನ್ ಅವರ ಬಾಲಿವುಡ್‌ನಲ್ಲಿ ಮೂರು ದಶಕಗಳ ಸುದೀರ್ಘ ಪ್ರಯಾಣ,  ಅವರ ಕುಟುಂಬ, ಅವರ ಸಹನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ಸಹೋದ್ಯೋಗಿಗಳ ಸಂದರ್ಶನಗಳನ್ನು ಒಳಗೊಂಡಿರುವ ಸರಣಿಯನ್ನು ತಯಾರು ಮಾಡಲು ನಿರ್ಧರಿಸಲಾಗಿದೆ. ಈ ಸರಣಿಯ ಸಿದ್ದತೆಗಳು ಆರಂಭವಾಗಿದ್ದು, ಇದನ್ನು ಸಲ್ಮಾನ್ ವ ಖಾನ್ ವಿಜ್  ಫಿಲ್ಮ್ಸ್ ಮತ್ತು  ಅಪ್ಲಾಸ್ ಎಂಟರ್​ಟೈನ್​ಮೆಂಟ್ ಜೊತೆ  ಸೇರಿ ನಿರ್ಮಾಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ಪೋರ್ಟಲ್ ಪ್ರಕಾರ, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು  OTT ಯಲ್ಲಿ ಬಿಡುಗಡೆ ಮಾಡಲು ಓಟಿಟಿ ಸಂಸ್ಥೆಗಳ ಜೊತೆ ತಂಡ ಈಗಾಗಲೇ ಮಾತುಕತೆ ಆರಂಭಿಸಿದೆ. ಇದೇ ಸರಣಿಯನ್ನು ಟೆನಿಸ್ ಜೋಡಿ ಮಹೇಶ್ ಭೂಪತಿ ಮತ್ತು ಲಿಯಾಂಡರ್  ಭೂಪತಿ ಮೇಲೆ  ಕೂಡ ಮಾಡಲಾಗಿದ್ದು, ಇದನ್ನು ಪಾಯಿಂಟ್ ಬ್ರೇಕ್ ಎಂದು ಹೆಸರಿಸಲಾಗಿದೆ.

ಈ ಮಧ್ಯೆ ಸಲ್ಮಾನ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಟೈಗರ್ 3 ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಸಲ್ಮಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅಭಿನಯಿಸುತ್ತಿರುವ ಟೈಗರ್ ಮೂರನೇ ಭಾಗದ ಚಿತ್ರೀಕರಣ  ಹೆಚ್ಚು ಬೇರೆ ದೇಶಗಳಲ್ಲಿ ಪ್ರಸ್ತುತ ನಡೆಯುತ್ತಿದೆ. ರಷ್ಯಾದಲ್ಲಿ ಚಿತ್ರೀಕರಣ ಮುಗಿಸಿದ ನಂತರ, ಚಿತ್ರತಂಡ ಮತ್ತು ಸಿಬ್ಬಂದಿ ಟರ್ಕಿಗೆ ತೆರಳಿದ್ದರು, ಅಲ್ಲಿ ಅವರು ಮೂರು ವಾರಗಳ ಕಾಲ ಕೆಲವು ಸಾಹಸ ಸನ್ನಿವೇಶಗಳು ಮತ್ತು ಹಾಡಿನ ಚಿತ್ರೀಕರಣಕ್ಕೆ ಹೋಗುತ್ತಿದ್ದಾರೆ. ತಂಡವು ಈಗ ತಮ್ಮ ಮುಂದಿನ ಚಿತ್ರೀಕರಣಕ್ಕಾಗಿ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾಕ್ಕೆ ತೆರಳಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಪ್ಪ Mahesh Bhatt 73ನೇ ಹುಟ್ಟುಹಬ್ಬ ಆಚರಿಸಿದ Alia Bhatt

ಟೈಗರ್ 3’ ಚಿತ್ರಕ್ಕೆ ಇನ್ನೂ ಅಧಿಕೃತವಾಗಿ ಶೀರ್ಷಿಕೆಯನ್ನು ನೀಡಿಲ್ಲ. ಈ ಹಿಂದಿನ ‘ಏಕ್ತಾ ಟೈಗರ್’ ಹಾಗೂ ‘ಟೈಗರ್ ಜಿಂದಾ ಹೈ’ ಚಿತ್ರಗಳು ಬಹುದೊಡ್ಡ ಹಿಟ್ ಆಗಿದ್ದಲ್ಲದೇ, ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ್ದವು. ಆದ್ದರಿಂದಲೇ ಸರಣಿಯ ಮೂರನೇ ಚಿತ್ರದ ಮೇಲೆ ಬಹುದೊಡ್ಡ ನಿರೀಕ್ಷೆ ಇದೆ.

ಮರಾಠಿ ಚಿತ್ರ ಮುಲ್ಶಿ ಪ್ಯಾಟರ್ನ್ ಆಧರಿಸಿ ಸಲ್ಮಾನ್ ಆಂಟಿಮ್: ದಿ ಫೈನಲ್ ಟ್ರುತ್ ನ ಪೋಸ್ಟರ್ ಅನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಮುಂಬರುವ 15 ನೇ ಬಿಗ್ ಬಾಸ್ ಸೀಸನ್ ಅನ್ನು ಸಲ್ಮಾನ್ ಹೋಸ್ಟ್ ಮಾಡಲಿದ್ದು, ಇದು ಅಕ್ಟೋಬರ್ 2 ರಂದು ಪ್ರಸಾರವಾಗಲಿದೆ, ಸಲ್ಮಾನ್ 14 ವಾರಗಳ ಕಾರ್ಯಕ್ರಮಕ್ಕೆ ಕನಿಷ್ಠ 350 ಕೋಟಿ ರೂ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಅಂದರೆ ಬಿಗ್ ಬಾಸ್ ಸೀಸನ್ 14ರಲ್ಲಿ ಪ್ರತಿ ಎಪಿಸೋಡ್​ಗೆ  ಸಲ್ಲು ಬಾಯ್ 2.5 ಕೋಟಿ ಸಂಭಾವನೆ ಪಡೆದಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಬಿಗ್ ಬಾಸ್ ಸೀಸನ್ 13ರಲ್ಲಿ ಪ್ರತಿ ವಾರಕ್ಕೆ 13 ಕೋಟಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಇದು ವದಂತಿಯೇ.. ನಿಜವೇ ತಿಳಿದುಬರಬೇಕಿದೆ.

ಇದನ್ನೂ ಓದಿ: Bigg Boss ಕಾರ್ಯಕ್ರಮ ನಿರೂಪಣೆಗಾಗಿ 14 ವಾರಕ್ಕೆ 350 ಕೋಟಿ ಸಂಭಾವನೆ ಪಡೆದ ಖ್ಯಾತ ನಟ!

ಇತ್ತೀಷೆಗಷ್ಟೇ ವಿದೇಶದಲ್ಲಿ ಚಿತ್ರೀಕರಣದ ನಂತರ ನೆರೆದಿದ್ದ ಅಭಿಮಾನಿಗಳೊಂದಿಗೆ ಸಲ್ಲು ಜಾಲಿಯಾಗಿ‌ ಸ್ಟೆಪ್ ಹಾಕಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು.
Published by:Sandhya M
First published: