HOME » NEWS » Entertainment » SALMAN KHANS NO KISS POLICY TAPE ON DISHA PATANIS MOUTH IN RADHE TRAILER STG AE

ಸಲ್ಮಾನ್ ಖಾನ್​-ದಿಶಾ ಪಟಾನಿ ಲಿಪ್​ ಲಾಕ್: ಕಿಸ್ಸಿಂಗ್​ ದೃಶ್ಯದ ವೇಳೆ ನಟಿಯ ಬಾಯಿಗೆ ಟೇಪ್ !

ಮೋಸ್ಟ್ ವಾಂಟೆಡ್ ಭಾಯ್  ರಾಧೆ ಬೆಳ್ಳಿತೆರೆ ಮೇಲಿನ ನೋ ಕಿಸ್​ ಶಪಥವನ್ನು ಮುರಿದು ಹಾಕಿದ್ದಾರೆಯೇ? ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಆಶ್ಚರ್ಯಪಟ್ಟಿದ್ದರು. ಆದರೆ, ಸಲ್ಮಾನ್ ಅವರ ಮುತ್ತಿನ ಶಪಥವನ್ನು ಗಂಭೀರವಾಗಿ ಪರಿಗಣಿಸಿರುವ ಅಭಿಮಾನಿಗಳ ಮತ್ತೊಂದು ವರ್ಗ ಸಲ್ಮಾನ್ ಖಾನ್ ಅವರ ಪರ ನಿಂತಿದೆ.

news18-kannada
Updated:May 1, 2021, 4:57 PM IST
ಸಲ್ಮಾನ್ ಖಾನ್​-ದಿಶಾ ಪಟಾನಿ ಲಿಪ್​ ಲಾಕ್: ಕಿಸ್ಸಿಂಗ್​ ದೃಶ್ಯದ ವೇಳೆ ನಟಿಯ ಬಾಯಿಗೆ ಟೇಪ್ !
ರಾಧೆ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ದಿಶಾ ಪಟಾಣಿ
  • Share this:
ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಸಿನಿಮಾದ   ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಲ್ಮಾನ್ ಅವರ ನೋ ಕಿಸ್ ನೀತಿ ಕುರಿತಾದ ವಿಷಯ ಇನ್ನೂ ಮುಕ್ತಾಯವಾಗಿಲ್ಲವೆಂಬುದು ಸ್ಪಷ್ಟವಾಗಿದೆ. ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ರಾಧೆ ಚಿತ್ರದ  ಟ್ರೇಲರ್ ಬಿಡುಗಡೆಯಾಯಿತು. ಅಲ್ಲದೇ ಈ ಸಿನಿಮಾ ಸಲ್ಮಾನ್ ಖಾನ್ ಅವರ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಸಿನಿಮಾವಾಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಬ್ಬ ಮಾಡಿದ್ದರು. ಇದರ ಜೊತೆಗೆ ಸಲ್ಮಾನ್​ ಖಾನ್​  ರಾಧೆ ಸಿನಿಮಾದಲ್ಲಿ ಲಿಪ್​ ಕಿಸ್​ ಮಾಡಿದ್ದು, ಇದು ಚಿತ್ರ ರಸಿಕರು ಹಾಗೂ ಸಲ್ಮಾನ್​ ಅಭಿಮಾನಿಗಳ ಹುಬ್ಬೇರುವಂತೆ ಮಾಡಿತ್ತು. ಸಲ್ಮಾನ್​ ಅವರ ಸಿನಿಮಾಗಳಲ್ಲಿ ಇಂಟಿಮೇಟ್​ ದೃಶ್ಯಗಳಿರುತ್ತವೆ ಆದರೆ ಚುಂಬನದ ದೃಶ್ಯಗಳು ಇರುವುದಿಲ್ಲ. ರಾಧೆ ಟ್ರೇಲರ್​ ರಿಲೀಸ್​ ಆದಾಗಿನಿಂದ  ಸಾಮಾಜಿಕ ಜಾಲತಾಣದಲ್ಲಿ ಇದರದ್ದೇ ಚರ್ಚೆ. 

'ಮೋಸ್ಟ್ ವಾಂಟೆಡ್ ಭಾಯ್  ರಾಧೆ ಬೆಳ್ಳಿತೆರೆ ಮೇಲಿನ ನೋ ಕಿಸ್​ ಶಪಥವನ್ನು ಮುರಿದು ಹಾಕಿದ್ದಾರೆಯೇ?' ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಆಶ್ಚರ್ಯಪಟ್ಟಿದ್ದರು. ಆದರೆ, ಸಲ್ಮಾನ್ ಅವರ ಮುತ್ತಿನ ಶಪಥವನ್ನು ಗಂಭೀರವಾಗಿ ಪರಿಗಣಿಸಿರುವ ಅಭಿಮಾನಿಗಳ ಮತ್ತೊಂದು ವರ್ಗ ಸಲ್ಮಾನ್ ಖಾನ್ ಅವರ ಪರ ನಿಂತಿದೆ.
ಸಲ್ಮಾನ್ ಖಾನ್ ಇಂದಿಗೂ ತಮ್ಮ ಮುತ್ತಿನ ಶಪಥಕ್ಕೆ ಬದ್ಧರಾಗಿದ್ದಾರೆ ಎಂದು ಹೇಳುತ್ತಿದ್ದಾರೆ ಬ್ಯಾಡ್​ ಅಭಿಮಾನಿಗಳು. ಇದಕ್ಕೆ ಅನುಗುಣವಾಗಿ ಲಿಪ್ ಕಿಸ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ ಎಂದಿದ್ದಾರೆ. ಏಕೆಂದರೆ 'ಲಿಪ್ ಕಿಸ್ ದೃಶ್ಯದಲ್ಲಿ ದಿಶಾ ಪಟಾನಿ ಅವರ ಬಾಯಿಯನ್ನು ಟೇಪ್‌ನಿಂದ ಮುಚ್ಚಲಾಗಿದೆ. ಟೇಪ್ ಮೇಲೆ ಸಲ್ಮಾನ್​ ಖಾನ್​ ಮುತ್ತಿಟ್ಟಿದ್ದಾರೆ. ಆದ್ದರಿಂದ ಭಾಯ್ ಇನ್ನೂ ತಮ್ಮ ಶಪಥ ಕಾಪಾಡಿಕೊಂಡಿದ್ದಾರೆ' ಎನ್ನುತ್ತಿದ್ದಾರೆ ಫ್ಯಾನ್ಸ್​.
ದಿಶಾ ಪಟಾನಿ ಬಾಯಿಗೆ ಟೇಪ್​ ಹಾಕಿರುವ ಸುದ್ದಿ ವೈರಲ್​ ಆಗುತ್ತಿದೆ. ಈ ಕುರಿತಾಗಿ ಕಮೆಂಟ್​ ಮಾಡಿರುವ ಟ್ವೀಟಿಗರೊಬ್ಬರು 'ಟೇಪ್ ಹಾಕಿಕೊಂಡು ನೀಡಿದ ಮೊದಲ ತೆರೆಯ ಮೇಲಿನ ದೃಶ್ಯ' ಎಂದಿದ್ದಾರೆ. 'ದಿಶಾ ಪಟಾನಿ ಸಲ್ಮಾನ್ ಕಾರಣಕ್ಕೆ ತಮ್ಮ ತುಟಿಗೆ ಟೇಪ್ ಹಾಕಿಕೊಂಡಿದ್ದಾರೆ' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ಕಿಸ್ ಅಥವಾ ನೋ ಕಿಸ್ ಏನೇ ಇರಲಿ ಟ್ರೇ ಲರ್ ನೋಡಿದ ಜನರು ಕೆಮಿಸ್ಟ್ರಿ, ಬಯಾಲಜಿ ಎನ್ನುತ್ತಾ ಮೀಮ್ಸ್ ಸೃಷ್ಟಿಸುತ್ತಿದ್ದಾರೆ. ಮತ್ತೊಬ್ಬ ಬಳಕೆದಾರರು ರಾಧೆ ಟ್ರೇಲರ್ ನೋಡಿದ ನಂತರ ದಿಶಾ ಪಟಾನಿ ಇನ್ನೊಬ್ಬ ನಟಿಯ ಜತೆ ಕುಸ್ತಿ ಆಡಿದಂತೆ ಇರುವ ಮೀಮ್ಸ್ ಕ್ರಿಯೇಟ್ ಮಾಡಿದ್ದಾರೆ. ಮತ್ತೊಬ್ಬರು 'ಇದ್ಯಾವ ನಶೆ?' ಎಂದಿದ್ದಾರೆ.

ಪ್ರಭುದೇವ ಅವರ ನಿರ್ದೇಶನವಿರುವ ಈ ಸಿನಿಮಾದಲ್ಲಿ ಜಾಕಿ ಶ್ರಾಫ್ ಮತ್ತು ರಣದೀಪ್ ಹೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಜನರ ಮುಖದ ಮೇಲೆ ಮತ್ತೆ ನಗು ಮೂಡಿದಾಗಲೇ ನನ್ನ ಹುಟ್ಟುಹಬ್ಬ ಎಂದ ಹರ್ಷಿಕಾ ಪೂಣಚ್ಚ

ಇನ್ನು, ಕಳೆದ ಬುಧವಾರ ಈ ಬಗ್ಗೆ ಮಾತನಾಡಿದ ಚಿತ್ರತಂಡ, ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರಮಂದಿರ ಹಾಗೂ ಒಟಿಟಿ ವೇದಿಕೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ರಾಧೆ ಮೇ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
First published: May 1, 2021, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories