Hud Hud Dabangg Track: ಟ್ರಾಲಿಗರಿಗೆ ಹಬ್ಬದೂಟವಾಯ್ತು ಸಲ್ಮಾನ್​ರ ಹುಡ್​ ಹುಡ್ ದಬಾಂಗ್​ ಹಾಡು..!

Hud Hud Dabangg Track: ಸಲ್ಮಾನ್​ ಮಾಡಿರುವ ಡಾನ್ಸ್​ಗೆ ನೆಟ್ಟಿಗರು ಹಾಸ್ಯಭರಿತವಾಗಿ ಕಮೆಂಟ್​ ಹಾಗೂ ಟ್ರಾಲ್​ ಮಾಡುತ್ತಿದ್ದಾರೆ. ಸಲ್ಮಾನ್​ ಅವರ ನೃತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗೋದು ಸಹಜ. ಆದರೆ ಈಗ ಅದೇ ವಿಷಯ ಟ್ರಾಲ್​ಗೆ ಕಾರಣವಾಗಿದೆ.

'ದಬಾಂಗ್ 3'​ ಸಿನಿಮಾದಲ್ಲಿ ಸಲ್ಮಾನ್​ ಖಾನ್​

'ದಬಾಂಗ್ 3'​ ಸಿನಿಮಾದಲ್ಲಿ ಸಲ್ಮಾನ್​ ಖಾನ್​

  • Share this:
ಸಲ್ಮಾನ್​ ಖಾನ್​ ಅವರ 'ದಬಾಂಗ್​ 3' ಸಿನಿಮಾದ ಟೈಟಲ್​ ಸಾಂಗ್​ 'ಹುಡ್​ ಹುಡ್​ ದಬಾಂಗ್​ ದಬಾಂಗ್​' ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು. ಈ ಹಿಂದೆ 'ದಬಾಂಗ್​' ಸರಣಿ ಸಿನಿಮಾದಲ್ಲಿ ಬಳಸಿದ್ದ ಹಾಡಿನ ಸಾಹಿತ್ಯವನ್ನು ಕೊಂಚ ಬದಲಾಯಿಸಿ, 3ನೇ ಚಿತ್ರದಲ್ಲೂ ಬಳಸಿಕೊಳ್ಳಲಾಗಿದೆ.

ಈ ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಬೇರೆಯದ್ದೇ ಕಾರಣಕ್ಕೆ ವೈರಲ್​ ಆಗುತ್ತಿದೆ. ಹೌದು, ಸಲ್ಮಾನ್​ ಮಾಡಿರುವ ಡಾನ್ಸ್​ಗೆ ನೆಟ್ಟಿಗರು ಹಾಸ್ಯಭರಿತವಾಗಿ ಕಮೆಂಟ್​ ಹಾಗೂ ಟ್ರಾಲ್​ ಮಾಡುತ್ತಿದ್ದಾರೆ. ಸದಾ ಸಲ್ಮಾನ್​ ಅವರ ನೃತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗೋದು ಸಹಜ. ಆದರೆ ಈಗ ಅದೇ ವಿಷಯ ಟ್ರಾಲ್​ಗೆ ಕಾರಣವಾಗಿದೆ.

ಒಂದು ಕಡೆ ಅಭಿಮಾನಿಗಳಿಗೆ ಸಲ್ಮಾನ್​ ಅವರ ವಿಭಿನ್ನ ನರತ್ಯ ಶೈಲಿ ಇಷ್ಟವಾಗುತ್ತಿದ್ದರೆ, ಮತ್ತೊಂದು ಕಡೆ ನೆಟ್ಟಿಗರಿಗೆ ಅದು ತಮಾಷೆ ಹಾಗೂ ವ್ಯಂಗ್ಯ ಮಾಡುವ ವಿಷಯವಾಗಿ ಬದಲಾಗಿದೆ. ಅದರಲ್ಲೂ ಸಲ್ಮಾನ್​ ಖಾನ್​ ಬಾಯಿಂದ ಬೆಂಕಿ ಉಗುಳುವ ದೃಶ್ಯವಂತೂ ನೆಟ್ಟಿಗರನ್ನು ಹುಚ್ಚೆಬ್ಬಿಸಿದೆ. ಇದರಿಂದಾಗಿಯೇ ನಾನಾ ರೀತಿ ಟ್ರಾಲ್​ ಆಗುತ್ತಿವೆ.

ಇದನ್ನೂ ಓದಿ: ಸಿನಿಮಾಗಾಗಿ ಕಣ್ಣೀರಿಟ್ಟ 'ಗಿರ್ಮಿಟ್'​ ನಿರ್ದೇಶಕ ರವಿ ಬಸ್ರೂರು..!

ಪ್ರಭುದೇವಾ ನಿರ್ದೇಶನದ ಈ ಸಿನಿಮಾ ಇದೇ ಡಿಸೆಂಬರ್​ 20ಕ್ಕೆ ತೆರೆಕಾಣಲಿದ್ದು, ಇದರಲ್ಲಿ ಖಳನ ಪಾತ್ರದಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್​ ಆಗಲಿದೆ.

 

Shruti Hassan: ಸಿನಿಮಾಗಳಿಗೆ ವಿದಾಯ ಹೇಳಲಿದ್ದಾರಂತೆ ಶ್ರುತಿ ಹಾಸನ್​..!


 

First published: