Video: ಫಿಟ್​ನೆಸ್​ ಸವಾಲು ಸ್ವೀಕರಿಸಿದ ಸಲ್ಮಾನ್ ಮಾಡಿದ್ದೇನು?

news18
Updated:August 12, 2018, 1:09 PM IST
Video: ಫಿಟ್​ನೆಸ್​ ಸವಾಲು ಸ್ವೀಕರಿಸಿದ ಸಲ್ಮಾನ್ ಮಾಡಿದ್ದೇನು?
news18
Updated: August 12, 2018, 1:09 PM IST
ನ್ಯೂಸ್​ 18 ಕನ್ನಡ 

ಕೆಲ ತಿಂಗಳ ಹಿಂದೆಯಷ್ಟೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್​ ಸಿಂಗ್​ ರಾಥೋಡ್​ ಅವರು ಆರಂಭಿಸಿದ್ದ ಹಮ್​ ಫಿಟ್​ ಹೈ ತೋ ಇಂಡಿಯಾ ಫಿಟ್​ ಹೈ ಅಡಿಬಹರದೊಂದಿಗೆ ಆರಂಭಿಸಿದ್ದ ಫಿಟ್​ನೆಸ್​ ಸವಾಲಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕ್ರೀಡಾಪಟುಗಳು, ಕಲಾವಿದರು ಸೇರಿದಂತೆ ಎಲ್ಲ ಕ್ಷೇತ್ರಗಳವರೂ ಈ ಅಭಿಯಾನಕ್ಕೆ ಬೆಂಬಲ ನೀಡಿ, ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಈಗ ವಿಡಿಯೋ ಪೋಸ್ಟ್​ ಮಾಡುವ ಸಲೆಬ್ರಿಟಿಗಳ ಪಟ್ಟಿಗೆ ಬಾಲಿವುಡ್​ನ ಬ್ಯಾಡ್​ ಬಾಯ್​ ಸಲ್ಮಾನ್​ ಸಹ ಸೇರಿಕೊಂಡಿದ್ದಾರೆ.

ಸಲ್ಲು ಏನೇ ಮಾಡಿದರೂ ಲೇಟಾಗಿದ್ದರೂ ಲೆಟೆಸ್ಟಾಗಿ ಇರುತ್ತೆ. ಹೌದು ಫಿಟ್​ನೆಸ್​ ಚಾಲೆಂಜ್​ ಅನ್ನು ಸ್ವೀಕರಿಸಿರುವ ಸಲ್ಮಾನ್​ ಖಾಲಿ ರಸ್ತೆಯಲ್ಲಿ ಸೈಕಲ್​ ಹೊಡೆಯೋದರ ಜತೆಗೆ ಜಿಮ್​ನಲ್ಲಿ ಬೆವರಿಳಿಸುವ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

 



ಸದ್ಯ ಸಲ್ಮಾನ್​ 'ಭಾರತ್'​ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಿಂದ ಪ್ರಿಯಾಂಕಾ ಚೋಪ್ರಾ ಹೊರಬಿದ್ದ ನಂತರ ಈಗ ಕತ್ರಿನಾ ಎಂಟ್ರಿಯಾಗಿದ್ದಾರೆ.
First published:August 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ