ಕೃಷಿ ಅಲ್ಲ ಕೇವಲ ಪೋಸ್ ಎಂದು ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ ಸಲ್ಮಾನ್ ಖಾನ್

ಸಲ್ಮಾನ್​ ಖಾನ್​ ಕೊನೆಯದಾಗಿ ತೆರೆಮೇಳೆ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಕಂಡ ದಬಾಂಗ್​ 3 ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಸುದೀಪ್​ ಕೂಡ ಬಣ್ಣ ಹಚ್ಚಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

news18-kannada
Updated:July 20, 2020, 11:25 AM IST
ಕೃಷಿ ಅಲ್ಲ ಕೇವಲ ಪೋಸ್ ಎಂದು ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ ಸಲ್ಮಾನ್ ಖಾನ್
ಸಲ್ಮಾನ್​ ಖಾನ್​
  • Share this:
ಸಲ್ಮಾನ್​ ಖಾನ್​ ಇತ್ತೀಚೆಗಷ್ಟೇ ಕೃಷಿ ಮಾಡಿ ಸುಸ್ತಾಗಿ ಕುಳಿತಿದ್ದ ಫೋಟೋ ಒಂದನ್ನು ಹಾಕಿದ್ದರು. ಈ ವೇಳೆ ಮೈ ಪೂರ್ತಿ ಮಣ್ಣಾಗಿತ್ತು. ಆದರೆ, ಕೈ ಮಾತ್ರ ಮಣ್ಣಾಗಿರಲಿಲ್ಲ. ಇದು ಸಾಕಷ್ಟು ಟ್ರೋಲ್​ ಆಗಿತ್ತು. ಈ ವಿಚಾರದಲ್ಲಿ ಟ್ರೋಲ್​ ಮಾಡಿದವರಿಗೆ ಸಲ್ಮಾನ್​ ಖಾನ್​ ಖಡಕ್​ ತಿರುಗೇಟು ನೀಡಿದ್ದಾರೆ.

ಕೊರೋನಾ ವೈರಸ್ ಘೋಷಣೆ ಆದ ಬೆನ್ನಲ್ಲೇ ಸಲ್ಮಾನ್​ ಖಾನ್​ ತಮ್ಮ ಫಾರ್ಮ್​ಹೌಸ್​ಗೆ ತೆರಳಿದ್ದಾರೆ. ಅಲ್ಲಿರುವ ಗದ್ದೆಯಲ್ಲಿ ಭತ್ತದ ಕೃಷಿಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಸಲ್ಮಾನ್​ ಖಾನ್​ ಗದ್ದೆಯಲ್ಲಿ ಕೆಲಸ ಮಾಡಿ ಬಂದ ನಂತರದ ಫೋಟೋ ಒಂದನ್ನು ಹಾಕಿದ್ದರು.
ಈ ಫೋಟೋದಲ್ಲಿ ಸಲ್ಮಾನ್​ ಖಾನ್​ ಅಂಗೈ ಬಿಟ್ಟು ಉಳಿದೆಲ್ಲ ಭಾಗವೂ ಮಣ್ಣನಿನಲ್ಲಿ ತೊಯ್ದಿತ್ತು. ಈ ಫೋಟೋ ನೋಡಿದ ಅನೇಕರು ಸಲ್ಮಾನ್​ ಖಾನ್​ ಕೇವಲ ಪೋಸ್​ ನೀಡುತ್ತಿದ್ದಾರೆ ಎಂದು ಟೀಕಿಸಿದ್ದರು. ಈಗ ಸಲ್ಮಾನ್​ ಖಾನ್​ ಇವರೆಲ್ಲರಿಗೂ ಉತ್ತರ ನೀಡಿದ್ದಾರೆ.ಸಲ್ಮಾನ್​ ಖಾನ್ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಲ್ಮಾನ್​ ಖಾನ್​ ಟ್ರ್ಯಾಕ್ಟರ್​ ಓಡಿಸುತ್ತಿದ್ದಾರೆ. ಸ್ವತಃ ಗದ್ದೆಯಲ್ಲಿ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.ಸಲ್ಮಾನ್​ ಖಾನ್​ ಕೊನೆಯದಾಗಿ ತೆರೆಮೇಳೆ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಕಂಡ ದಬಾಂಗ್​ 3 ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಸುದೀಪ್​ ಕೂಡ ಬಣ್ಣ ಹಚ್ಚಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದ್ಯ ಸಲ್ಮಾನ್​ ಖಾನ್​ ರಾಧೇ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಮೇ ತಿಂಗಳಲ್ಲಿ ತೆರೆಕಾಣಬೇಕಿತ್ತು. ಆದರೆ, ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳನ್ನು ಮುಂದೂಡಲಾಗಿತ್ತು.
Published by: Rajesh Duggumane
First published: July 20, 2020, 11:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading