ಸಲ್ಮಾನ್ ಖಾನ್(Salman Khan).. ಸಲ್ಲು ಭಾಯ್.. ಬಜರಂಗಿ ಭಾಯ್ಜಾನ್.. ಬಾಲಿವುಡ್ ಸುಲ್ತಾನ.. ಹೌದು, ಸಲ್ಲು ಸಿನಿಮಾಗಳು ಅಂದರೆ ಅಲ್ಲಿ ಭರ್ಜರಿ ಕಲೆಕ್ಷನ್(Collection)ಗೆ ಕಮ್ಮಿ ಇಲ್ಲ.. ಸಿನಿಮಾ ಚೆನ್ನಾಗಿಲ್ಲ ಅಂದರೂ ದುಡ್ಡಿನ ಹೊಳೆ ಹರಿಯುತ್ತೆ. ಹೀಗಾಗಿ ಸಲ್ಲು ಭಾಯ್ ಜೊತೆ ಸಿನಿಮಾ ಮಾಡಲು ನಿಮಾರ್ಪಕ(Producers)ರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೂ, ಸಲ್ಮಾನ್ ಖಾನ್ ಅವರು ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸಖತ್ ಸುದ್ದಿ ಮಾಡಿದವರೆ.ಅಪಘಾತ(Accident) ಪ್ರಕರಣ, ಕೃಷ್ಣ ಮೃಗ ಬೇಟೆ(Hunting), ಹೀಗೆ ಒಂದಲ್ಲ ಒಂದು ಸಲ್ಮಾನ್ ಖಾನ್ ಅವರ ಕೊರಳಿಗೆ ಸುತ್ತಿಕೊಂಡಿರುತ್ತೆ. ಬೇಕು ಅಂತ ಯಾವುದೇ ವಿವಾದಗಳನ್ನು ಸಲ್ಲು ಭಾಯ್ ಮಾಡಿಲ್ಲ. ಆದರೆ, ಇವರು ಏನೇ ಮಡಿದರೂ ಒಂದಲ್ಲ ಒಂದು ಕಾಂಟ್ರವರ್ಸಿ(Controversy) ಸೃಷ್ಟಿಯಾಗುತ್ತೆ. ಇದೀಗ ಸ್ಟೇಜ್ ಮೇಲೆ ಸಲ್ಲು ಅವರ ವರ್ತನೆಯಿಂದ ಸ್ವತಃ ಸಲ್ಲು ಹಾಗೂ ಪೂಜಾ ಹೆಗ್ಡೆ(Pooja Hegde) ಮುಜುಗರಕ್ಕೊಳಗಾಗಿದ್ದಾರೆ.
ದುಬೈ ದಂಬಗ್ ಟೂರ್ನಲ್ಲಿ ಸಲ್ಲು ಭಾಯ್!
ಸಲ್ಮಾನ್ ಖಾನ್ ಜೊತೆ ನಟಿ ಪೂಜಾ ಹೆಗ್ಡೆ ಕೂಡ ದಬಂಗ್ ಟೂರ್ನಲ್ಲಿ ಭಾಗಿ ಆಗಿದ್ದರು. ಈ ಹಿಂದೆ ಸಲ್ಮಾನ್ ಖಾನ್ ಜೊತೆ ಜಾಕಲಿನ್ ಫರ್ನಾಂಡಿಸ್ ಈ ದಂಬಾಗ್ ಟೂರ್ನಲ್ಲಿ ಭಾಗಿಯಾಗುತ್ತಾರೆ ಅಂತ ಹೇಳಲಾಗಿತ್ತು. ಆದರೆ, ಜಾಕಲಿನ್ ಫರ್ನಾಂಡಿಸ್ ಕೊರಳಿಗೆ ಬಹು ಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಕೇಸ್ ಸುತ್ತಿಕೊಂಡಿದೆ. ಹೀಗಾಗಿ ಜಾಕಲಿನ್ನಿಂದ ಸಲ್ಲು ಭಾಯ್ ಅಂತರ ಕಾಯ್ದುಕೊಂಡಿದ್ದಾರೆ. ಪೂಜಾ ಹೆಗ್ಡೆ ಅವರನ್ನು ಈ ಬಾರಿ ಸಲ್ಮಾನ್ ಖಾನ್ ದಬಂಗ್ ಟೂರ್ಗೆ ಕರೆದುಕೊಂಡು ಹೋಗಿದ್ದಾರೆ ಈ ವೇಳೆ ನಡೆದ ಪ್ರಸಂಗವೊಂದು ಸಲ್ಲುಗೆ ತೀವ್ರ ಮುಜುಗರ ಉಂಟು ಮಾಡುವಂತಾಗಿದೆ.
ಇದನ್ನೂ ಓದಿ: ಮೊನ್ನೆ ಹಂಗ್ ಅಂದ್ರು, ಈಗ ನೋಡಿದ್ರೆ ಇನ್ನೊಂಥರ.. `ಕಿರಿಕ್ ಕ್ವೀನ್’ನ ಅರ್ಥ ಮಾಡಿಕೊಳ್ಳೋದು ಕಷ್ಟ!
ಪೂಜಾ ಹೆಗ್ಡೆ ಸ್ಕರ್ಟ್ ಕಚ್ಚಲು ಹೋದ ಸಲ್ಮಾನ್ ಫುಲ್ ಟ್ರೋಲ್!
ಸಲ್ಮಾನ್ ಖಾನ್ ಅವರು ‘ಕಿಕ್’ ಸಿನಿಮಾದ ‘ಜುಮ್ಮೆ ಕೆ ರಾತ್ ಮೇ..’ ಹಾಡಿಗೆ ಪೂಜಾ ಹೆಗ್ಡೆ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಅದರಲ್ಲಿ ಒಂದು ಸ್ಟೆಪ್ ಇದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರ ಸ್ಕರ್ಟ್ ತುದಿಯನ್ನು ಸಲ್ಲು ಖಾನ್ ಅವರು ಬಾಯಲ್ಲಿ ಕಚ್ಚಿಕೊಂಡು ಡ್ಯಾನ್ಸ್ ಮಾಡಿದ್ದರು. ಈಗ ಅದೇ ಸ್ಟೆಪ್ ಅನ್ನು ಪೂಜಾ ಹೆಗ್ಡೆ ಜೊತೆ ಮಾಡಲು ಹೋಗಿ ಸಲ್ಲು ಟ್ರೋಲ್ ಆಗಿದ್ದಾರೆ. ಆ ಕ್ಷಣದ ವಿಡಿಯೋ ಮತ್ತು ಸ್ಕ್ರೀನ್ ಶಾಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದನ್ನು ಕಂಡು ಸಲ್ಮಾನ್ ಖಾನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.
When #SalmanKhan Tries to make the impossible Dance Step possible with #PoojaHegde ♡ Da-DanggTheTourReloaded@BeingSalmanKhan @hegdepooja pic.twitter.com/O67PXz9ZyS
— Salman Sajid Bhai Jaan (@SalmanSajidBha6) February 26, 2022
ಇದನ್ನೂ ಓದಿ: ಗರ್ಲ್ಸ್ ಜೊತೆ ಲಿಪ್ಲಾಕ್ ಮಾಡೋಕೆ ಸಖತ್ ಇಷ್ಟವಂತೆ ಈ ನಟಿಗೆ.. ಕಾಲ ಕೆಟ್ಟೋಯ್ತು ಕಣ್ರೀ!
ಮುಜುಗರಕ್ಕೀಡಾದ ಸಲ್ಲು, ಪೂಜಾ ಹೆಗ್ಡೆ
ಪೂಜಾ ಧರಿಸಿದ್ದು ಬಾಡಿಕಾನ್ ಡ್ರೆಸ್ ಆದ್ದರಿಂದ ಅದನ್ನು ಕಚ್ಚಿಕೊಳ್ಳಲು ಸಲ್ಲುಗೆ ಸಾಧ್ಯವಾಗಲಿಲ್ಲ. ಸಲ್ಮಾನ್ ಖಾನ್ ಪ್ರಯತ್ನಿಸುತ್ತಿರುವಾಗಲೇ ಪೂಜಾ ಹೆಗ್ಡೆ ಸ್ಟೇಜ್ ಮುಂದೆ ಮುಂದೆ ಹೋಗಿದ್ದಾರೆ. ಆದರೆ, ಸಲ್ಲು ಅವರ ಹಿಂದೆಯೆ ಬಗ್ಗಿಕೊಂಡು ಮುಂದೆ ಹೋಗಿದ್ದಾರೆ. ಇದರಿಂದ ಸ್ವತಃ ಸಲ್ಲು ಹಾಗೂ ಪೂಜಾ ಹೆಗ್ಡೆ ತೀವ್ರ ಮುಜುಗರ ಆಯಿತು. ಈಗ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಏನ್ ಭಾಯ್ ಹಳೇ ಖದರ್ ನಿಮ್ಮಲ್ಲಿ ಇಲ್ಲ ಅನ್ಸುತ್ತೆ. ನಿಮಗೆ ವಯಸ್ಸಾಯ್ತು ಅಂದುಕೊಂಡರೆ, ಇನ್ನೂ ಹಾಗೇ ಇದ್ದೀರ ಎಂದು ನೆಟ್ಟಿಗರು ಸಲ್ಮಾನ್ ಖಾನ್ ಅವರ ಕಾಲೆಳೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ