ವಿಕ್ರಾಂತ್ ರೋಣ (Vikrant Rona) ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಆಗಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದರ ಜೊತೆಗ ಈ ಸಿನಿಮಾ 3ಡಿ(3D)ಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. ಪೋಸ್ಟರ್ (Poster), ಟೀಸರ್(Teaser)ಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರಕ್ಕೆ ಇದೀಗ ಬಾಲಿವುಡ್ ಭಾಯ್ಜಾನ್ ಸಾಥ್ ನೀಡುತ್ತಿದ್ದಾರೆ. ಕನ್ನಡ ಚಿತ್ರಕ್ಕೂ ಸಲ್ನಾನ್ ಖಾನ್ಗೂ ಏನಪ್ಪಾ ಸಂಬಂಧ ಎನ್ನುವ ಅನುಮಾನ ಬರೋದು ಸಹಜ. ಅದಕ್ಕೆ ಉತ್ತರ ಈ ಸ್ಟೋರಿ.
ಕಿಚ್ಚನಿಗೆ ಸಲ್ಮಾನ್ ಸಾಥ್
ಕೆಜಿಎಫ್ 2 ನಂತರ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಬಾಲಿವುಡ್ ಅಂಗಳದಲ್ಲಿ ಮೆರೆಯಲು ಸಿದ್ದವಾಗಿದ್ದು, ಕಿಚ್ಚನಿಗೆ ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಸಹಾಯ ದೊರೆದಿದೆ. ವಿಕ್ರಾಂತ್ ರೋಣ ಸಿನಿಮಾವನ್ನು ಬಾಲಿವುಡ್ನಲ್ಲಿ ರಿಲೀಸ್ ಮಾಡಲು ಸಲ್ಮಾನ್ ಖಾನ್ ನೆರವು ಸಿಕ್ಕಿದ್ದು ಕಿಚ್ಚನಿಗೆ ದೊಡ್ಡ ಕೈ ಸಹಾಯಕ್ಕೆ ಸಿಕ್ಕಂತಾಗಿದೆ. ಬಾಲಿವುಡ್ ಭಾರತದ ಅತಿ ದೊಡ್ಡ ಸಿನೆಮಾ ಮಾರುಕಟ್ಟೆ ಇಲ್ಲಿ ಬೇರೆ ಭಾಷೆಯ ಚಿತ್ರ ಡಬ್ ಆಗಿ ಬಿಡುಗಡೆಯಾಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಭಾಯ್ಜಾನ್ ಸಾಥ್ ನೀಡಿರುವುದು ನಿಜಕ್ಕೂ ಮೈಲಿಗಲ್ಲು ಎನ್ನಬಹುದು.
ಇದನ್ನೂ ಓದಿ: ಭಾವನೆಗಳೇ ಬದುಕು ಎನ್ನುವ 'ಚಾರ್ಲಿ' - ರಕ್ಷಿತ್ ಸಿನೆಮಾದ ಟ್ರೇಲರ್ ನೋಡಿ ಎಮೋಷನಲ್ ಆದ ಅಭಿಮಾನಿಗಳು
ಈ ಬಗ್ಗೆ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸಹ ಟ್ವೀಟ್ ಮಾಡಿ ಖಚಿತ ಮಾಹಿತಿ ನೀಡಿದ್ದು, ಸಲ್ಮಾನ್ ಖಾನ್ ಫಿಲ್ಮ್ಸ್ ಈ ಸಿನಿಮಾವನ್ನು ಉತ್ತರ ಭಾರತದಲ್ಲಿ ರಿಲೀಸ್ ಮಾಡುತ್ತಿದೆ. ಈ ಮೂಲಕ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 100 ಕೋಟಿ ದಾಟುವ ನಿರೀಕ್ಷೆ ಇದೆ ಎನ್ನಬಹುದು.
It just gets bigger!!! #VikrantRоna #VikrantRonaJuly28 https://t.co/0pB8xOmspz
— Priya Sudeep/ಪ್ರಿಯ (@iampriya06) May 16, 2022
ಇನ್ನು ಈ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದ್ದು, ಈ ಫ್ಯಾಂಟಸಿ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕಳೆದ ವರ್ಷ ಚಿತ್ರದ ಫಸ್ಟ್ ಲುಕ್ ಅನ್ನು ದೇಶಾದ್ಯಂತ ಥಿಯೇಟರ್‌ಗಳಲ್ಲಿ 3D ನಲ್ಲಿ ಬಿಡುಗಡೆ ಮಾಡಿ, ಪ್ರೇಕ್ಷಕರ ನಿರೀಕ್ಷೆ ಹೆಚ್ಚು ಮಾಡಿತ್ತು. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗಿನಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಅಲ್ಲದೇ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕಿಚ್ಚನ ಸಿನಿ ಜರ್ನಿಯಲ್ಲಿ ದಾಖಲೆಯ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ.
I am still spell bound by the visuals brother @KicchaSudeep Happy to present the Hindi version of #VikrantRona the biggest 3D experience in Indian cinema.@anupsbhandari @JackManjunath @SKFilmsOfficial @shaliniartss @InvenioF @ZeeStudios_ #VikrantRona3DJuly28 #VR3dJuly28 pic.twitter.com/C5ZJWvcfVK
— Salman Khan (@BeingSalmanKhan) May 16, 2022
ಇದನ್ನೂ ಓದಿ: ಸಿನಿರಂಗದಲ್ಲಿ ಬಂಗಾರದ ಬೆೆಳೆ ತೆಗೆದ 'ಕೆಜಿಎಫ್-2'! 1000 ಕೋಟಿ ಗಳಿಸಿದ 2ನೇ ಭಾರತೀಯ ಸಿನಿಮಾ
10 ಕೋಟಿಗೆ ಓವರ್ ಸೀಸ್ ರೈಟ್ಸ್ ಸೇಲ್!
ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ