ಬಾಲಿವುಡ್ ನಟ (Bollywood Actor) ಸಲ್ಮಾನ್ ಖಾನ್ (Salman Khan) ಮುಂಬೈ ಪೊಲೀಸ್ ಕಮಿಷನರ್ (Mumbai Police) ಕಚೇರಿಯಲ್ಲಿ ಸ್ವಯಂ ರಕ್ಷಣೆಗಾಗಿ ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ನಟನಿಗೆ ಇತ್ತೀಚೆಗೆ ಬೆದರಿಕೆ ಪತ್ರಗಳು ಬಂದಿದ್ದ ಕಾರಣ, ಈ ಬಾಲಿವುಡ್ ಬಾಯ್ಜಾನ್ ತನ್ನ ವೈಯಕ್ತಿಕ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಯೋಚಿಸಿದ್ದು, ಪರವಾನಗಿ ಕೇಳಿದ್ದಾರೆ ಎನ್ನಲಾಗುತ್ತಿದೆ. ಕೆಲ ಮಾಹಿತಿಗಳ ಪ್ರಕಾರ ನಟ ಸಲ್ಮಾನ್ ಖಾನ್ ಮುಂಬೈ ಸಿಪಿ ಕಚೇರಿಯಲ್ಲಿ ಸ್ವಯಂ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ, ಇತ್ತೀಚೆಗೆ ಅವರಿಗೆ ಜೀವ ಬೆದರಿಕೆ ಪತ್ರ ಬಂದ ನಂತರ ಅವರ ರಕ್ಷಣೆಗೆ ಶಸ್ತ್ರಾಸ್ತ್ರ ಅಗತ್ಯವಿದೆ ಎಂದು ಸಲ್ಮಾನ್ ಖಾನ್ ಈ ಹೆಜ್ಜೆ ಇಟ್ಟಿದ್ದಾರೆ.
View this post on Instagram
ನಟ ದಕ್ಷಿಣ ಮುಂಬೈನಲ್ಲಿರುವ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಪಂಜಾಬ್ ನ ರ್ಯಾಪ್ ಸಿಂಗರ್ ಸಿಧು ಮುಸೇವಾಲಾ ಸಾವಿನ ಬೆನ್ನಲ್ಲೇ, ಬಾಲಿವುಡ್ನ ಸಲ್ಮಾನ್ ಖಾನ್ ಹಾಗೂ ಸಲೀಂ ಖಾನ್ ಗೆ ಜೀವ ಬೆದರಿಕೆ ಪತ್ರವೊಂದು ಬಂದಿತ್ತು. ಬೆದರಿಕೆ ಪ್ರಕರಣದ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು, ಅಲ್ಲದೆ, ಆರೋಪಿಗಳ ಪತ್ತೆಗೆ ಬ್ಯಾಂಡ್ ಸ್ಟ್ಯಾಂಡ್ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿತ್ತು. ಘಟನೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟಿದ್ದರು.
ಇದನ್ನೂ ಓದಿ: ಆ್ಯಕ್ಷನ್ ಸೀನ್ಗೆ ಫುಲ್ ತಯಾರಿ ಮಾಡ್ತಿದ್ದಾರೆ ಧ್ರುವ ಸರ್ಜಾ, ಮಾರ್ಟಿನ್ ಸಿನಿಮಾ ಬಗ್ಗೆ ಹೊಸ ಅಪ್ಡೇಟ್
#WATCH | Maharashtra: Actor Salman Khan leaves from the office of Mumbai Commissioner of Police Vivek Phansalkar pic.twitter.com/1NsJ2T375a
— ANI (@ANI) July 22, 2022
ಮಾಧ್ಯಮ ವರದಿಗಳ ಪ್ರಕಾರ, 2018ರಲ್ಲಿ ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್ ಅವರ ಗುರಿಯಾಗಿದ್ದರು. ಅವರ ಗೂಂಡಾಗಳು ಬಾಲಿವುಡ್ ಬ್ಯಾಡ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಕಾರಣ ಸಲ್ಮಾನ್ ಖಾನ್ ಅವರ ಬ್ಲ್ಯಾಕ್ಬಕ್ ಹಂಟಿಂಗ್ ಕೇಸ್.
ಇದನ್ನೂ ಓದಿ: ಬಿಗ್ಬಾಸ್ ಓಟಿಟಿ ಹೊಸ ಪ್ರೋಮೋ ರಿಲೀಸ್, ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದ ಕಿಚ್ಚ
ಬೆದರಿಕೆ ಪತ್ರ ಬಂದಿತ್ತು
ಹೌದು, ಲಾರೆನ್ಸ್ ಕಪ್ಪು ಜಿಂಕೆಗಳನ್ನು ಪವಿತ್ರ ಪ್ರಾಣಿ ಎಂದು ಪರಿಗಣಿಸುವ ಬಿಷ್ಣೋಯ್ ಸಮಾಜದವರು. ಆದ್ದರಿಂದ ಯಾವಾಗ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ, ಲಾರೆನ್ಸ್ ತುಂಬಾ ಕೋಪಗೊಂಡಿದ್ದರು. ಈ ಬೆದರಿಕೆಗಳ ನಂತರ, ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಈಗ ಸಿಂಗರ್ ಸಿಧು ಸಾವಿನ ಬೆನ್ನಲ್ಲೇ ಮತ್ತೆ ಸಲ್ಲು ಅವರಿಗೆ ಹೆಚ್ಚಿನ ಸೆಕ್ಯೂರಿಟಿ ನೀಡಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಲಾರೆನ್ಸ್ ಬೆದರಿಕೆ ಹಾಕಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ