ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಹಾಡಿನಲ್ಲಿ ಹಿಂದೂ-ಮುಸ್ಲಿಂ ಭಾಯ್ ಭಾಯ್ ಎನ್ನುವ ಮೂಲಕ ಸೌಹಾರ್ದತೆ ಸಾರಿದ್ದಾರೆ.
ಸಲ್ಮಾನ್ ಖಾನ್ ತಮ್ಮ ಯ್ಯೂಟೂಬ್ ಚಾನೆಲ್ನಲ್ಲಿ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಹಾಡಿನಲ್ಲಿ ನಾನು ಸ್ಮೇಹಿತರ ಸ್ಮೇಹಿತ..ಎಲ್ಲ ನಮ್ಮದೇ ಹಬ್ಬ.. ಕೆಲಮೊಮ್ಮೆ ಅಜಾನ್ ಹೇಳ್ತೇವೆ..ಕೆಲಮೊಮ್ಮೆ ಭಜನೆ ಹಾಡ್ತೇವೆ.. ಹಿಂದೂ ಮುಸ್ಲಿಂ ಭಾಯ್ ಭಾಯ್ ಏನ್ ಹೇಳುತ್ತೀರಾ ಮೀಯಾ ಭಾಯ್ ಎಂದು ಹಾಡಿದ್ದಾರೆ.
ಹಿಂದೂ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರೂ ಸಹೋದರರೇ ಎಲ್ಲರೂ ಒಗ್ಗಟ್ಟಾಗಿ ಇರೋಣ ಎಂದು ವಿಡಿಯೋ ಹಾಡಿನ ಮೂಲಕ ರಂಜಾನ್ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ವಿಶೇಷವೆಂದರೆ. ಈ ಹಾಡನ್ನು ಸಲ್ಮಾನ್ ಖಾನ್ ಮತ್ತು ರುಹಾನ್ ಅರ್ಷದ್ ಬರೆದಿದ್ದಾರೆ. ಹಾಡಿನಲ್ಲಿ ಬರುವ ರ್ಯಾಪ್ ಅನ್ನು ರೂಹಾನ್ ಬರೆದಿದ್ದಾರೆ. ಇನ್ನು ಸಾಜಿದ್ ವಾಜಿದ್ ಈ ಹಾಡಿಗೆ ಸಂಗೀತ ಸಂಯೋಜಿಸಿದರೆ. ಸಾಜನ್ ಸಿಂಗ್ ಕ್ಯಾಮೆರಾ ಮತ್ತು ನೃತ್ಯ ಸಂಯೋಜನೆ ಮಾಡಿದ್ದಾರೆ. ರಿತೇಶ್ ಸೋನಿ ಎಡಿಟಿಂಗ್ ಹಾಗೂ ಆದಿತ್ಯ ದೇವ್ ನಿರ್ಮಾಣದಲ್ಲಿ ಹಾಡನ್ನು ಸಿದ್ಧಪಡಿಸಿದ್ದಾರೆ. ಸಲ್ಮಾನ್ ಖಾನ್ ಯ್ಯೂಟೂಬ್ ಖಾತೆಯಲ್ಲಿ ಹಾಡನ್ನು ಬಿಡುಗಡೆ ಮಾಡಿದ್ದಾರೆ.
Vijay Yesudas: ಕನ್ನಡ ಸೇರಿ 6 ಭಾಷೆಯಲ್ಲಿ ಸಜ್ಜಾಗುತ್ತಿದೆ ಯೇಸುದಾಸ್ ಪುತ್ರ ವಿಜಯ್ ಯೇಸುದಾಸ್ ಸಿನಿಮಾ!
ನಕ್ಕು ನಗಲು ತಯಾರಾಗಿರಿ; ಮತ್ತೆ ಬರಲಿದೆ ‘ಮಜಾ ಟಾಕೀಸ್‘
First published:
May 26, 2020, 8:09 PM IST