News18 India World Cup 2019

ಹಿಂದೆಂದೂ ಕಂಡರಿಯದ ಅವತಾರದಲ್ಲಿ ಸಲ್ಮಾನ್ ಖಾನ್: 'ಭಾರತ್' ಚಿತ್ರದ ಫಸ್ಟ್​ ಲುಕ್ ಪೋಸ್ಟರ್ ಔಟ್

ಟೈಗರ್ ಜಿಂದಾ ಹೈ ಹಾಗೂ ಸುಲ್ತಾನ್ ಖ್ಯಾತಿಯ ಅಲಿ ಅಬ್ಬಾಸ್ ಜಫರ್ ಭಾರತ್ ಚಿತ್ರಕ್ಕೆ ಆ್ಯಕ್ಷನ್ ಕಟ ಹೇಳುತ್ತಿದ್ದಾರೆ. ಈ ಚಿತ್ರವು ದಕ್ಷಿಣ ಕೊರಿಯಾದ ಒಡ್​ ಟು ಮೈ ಫಾದರ್ ಸಿನಿಮಾದಿಂದ ಸ್ಪೂರ್ತಿ ಪಡೆದ ಕಥೆಯನ್ನು ಹೊಂದಿದೆ ಎನ್ನಲಾಗುತ್ತಿದೆ.

zahir | news18
Updated:April 15, 2019, 7:24 PM IST
ಹಿಂದೆಂದೂ ಕಂಡರಿಯದ ಅವತಾರದಲ್ಲಿ ಸಲ್ಮಾನ್ ಖಾನ್: 'ಭಾರತ್' ಚಿತ್ರದ ಫಸ್ಟ್​ ಲುಕ್ ಪೋಸ್ಟರ್ ಔಟ್
@BMS
zahir | news18
Updated: April 15, 2019, 7:24 PM IST
ಬಾಲಿವುಡ್​ ಭಾಯಿಜಾನ್ ಸಲ್ಮಾನ್ ಖಾನ್ ದೇಶಭಕ್ತಿ ಕಥೆ ಸಾರುವ 'ಭಾರತ್' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತಿದೆ. ಈ ಹಿಂದೆ ಆಗಸ್ಟ್​ 14 ರಂದು ಆಡಿಯೋ ಟೀಸರ್​ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಭರ್ಜರಿ ಫಸ್ಟ್​ ಲುಕ್ ಪೋಸ್ಟರ್​ ಅನ್ನು ರಿಲೀಸ್ ಮಾಡಿದೆ.

ಸಲ್ಮಾನ್​ ಖಾನ್​ ರನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಈ ಪೋಸ್ಟರ್​ನಲ್ಲಿ ತೋರಿಸಲಾಗಿದ್ದು, ದಬಂಗ್ ಖಾನ್​ರ ಸಾಲ್ಟ್​ ಅ್ಯಂಡ್ ಪೆಪ್ಪರ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಆರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಲಿದ್ದು, ಅದರಲ್ಲಿ 2010 ರಲ್ಲಿ ನಡೆಯುವ ಸನ್ನಿವೇಶದ ಮುದುಕನ ಪಾತ್ರದಲ್ಲಿ ಸಲ್ಮಾನ್ ಈ ಲುಕ್​ನಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದೆ.
 

Loading...
View this post on Instagram
 

Jitne safed baal mere sar aur dhaadi mein hain, usse kahin zyada rangeen meri zindagi rahi hain! #Bharat @bharat_thefilm @aliabbaszafar @atulreellife #BhushanKumar @katrinakaif @tabutiful @apnabhidu @sonalikul @dishapatani @whosunilgrover @norafatehi @iaasifsheikhofficial @nikhilnamit #ReelLifeProduction @skfilmsofficial @tseries.official


A post shared by Salman Khan (@beingsalmankhan) on


'ಭಾರತ್'​ನ ಹೊಸ ಗೆಟಪ್ ಈಗಾಗಲೇ ಬಿಟೌನ್​ನಲ್ಲಿ ಭಾರೀ ಹವಾ ಎಬ್ಬಿಸಿದ್ದು, ಸಲ್ಲುವಿನ ಗಡ್ಡಧಾರಿ ಅವತಾರವನ್ನು ಹಾಡಿ ಹೊಗಳಲಾಗುತ್ತಿದೆ. ಇನ್ನು ಈ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಬಾಲಿವುಡ್ ಟೈಗರ್,  'ಈ ಫೋಟೋದಲ್ಲಿ ನನ್ನ ತಲೆ ಹಾಗೂ ಗಡ್ಡದಲ್ಲಿ ಎಷ್ಟು ಬಿಳಿ ಕೂದಲಿವೆಯೋ ಅದಕ್ಕಿಂತ ಹೆಚ್ಚು ಪಟ್ಟು ನನ್ನ ಜೀವನ ರಂಗುರಂಗಿನಿಂದ ಕೂಡಿದೆ' ಎಂದು ಬರೆದು ಕೊಂಡಿದ್ದಾರೆ.'ಟೈಗರ್ ಜಿಂದಾ ಹೈ' ಹಾಗೂ 'ಸುಲ್ತಾನ್' ಖ್ಯಾತಿಯ ಅಲಿ ಅಬ್ಬಾಸ್ ಜಫರ್ 'ಭಾರತ್' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರವು ದಕ್ಷಿಣ ಕೊರಿಯಾದ 'ಒಡ್​ ಟು ಮೈ ಫಾದರ್' ಸಿನಿಮಾದಿಂದ ಸ್ಪೂರ್ತಿ ಪಡೆದ ಕಥೆಯನ್ನು ಹೊಂದಿದೆ ಎನ್ನಲಾಗುತ್ತಿದೆ. ಇಲ್ಲಿ ಸಲ್ಮಾನ್​ಗೆ ನಾಯಕಿಯಾಗಿ ಮತ್ತೊಮ್ಮೆ ಕತ್ರೀನಾ ಕೈಫ್ ಅಭಿನಯಿಸುತ್ತಿದ್ದು, ಮತ್ತೊಂದು ಪ್ರಮುಖ ಪಾತ್ರದಲ್ಲಿ ದಿಶಾ ಪಠಾಣಿ ಬಣ್ಣ ಹಚ್ಚುತ್ತಿದ್ದಾರೆ. 
View this post on Instagram
 

SK in Bharat !! Sk thru my eyes n camera ! @beingsalmankhan @rebello.ashley @prashantroyalty @amritakak @kiren.rijiju


A post shared by Bina Kak (@kakbina) on

ಆರು ಕಥೆ ಆರು ಅವತಾರ?
'ಭಾರತ್'​ ಚಿತ್ರದ ಕಥೆಯು 1940 ರಿಂದ ಆರಂಭವಾಗಲಿದ್ದು, ಇಲ್ಲಿ ಹಲವು ದೇಶಗಳ ಸಂಸ್ಕೃತಿಯನ್ನು ವಿವಿಧ ಘಟ್ಟಗಳಲ್ಲಿ ತೋರಿಸಲಾಗುತ್ತದೆ. 70 ವರ್ಷಗಳ ಜರ್ನಿಯನ್ನು ತಿಳಿಸಲಿರುವ ಈ ಸಿನಿಮಾದಲ್ಲಿ ಸಲ್ಮಾನ್ ನೌಕಾ ಪಡೆ ಅಧಿಕಾರಿ, ಸ್ಟಂಟ್​ ಮಾಸ್ಟರ್, ಮುದುಕನ ಗೆಟಪ್ ಸೇರಿದಂತೆ ಒಟ್ಟು 6 ವಿಭಿನ್ನ ಅವತಾರದಲ್ಲಿ ಕಾಣಿಸುತ್ತಿರುವುದು ವಿಶೇಷ. ಹಲವು ದೇಶಗಳ ಕಥೆಯೊಂದಿಗೆ ದೇಶಭಕ್ತಿಯನ್ನು ಸಾರಲಿರುವ 'ಭಾರತ್'  ಬಾಲಿವುಡ್​ನ ಪ್ಯಾನ್​ ಸಿನಿಮಾ ಆಗಲಿದೆ ಎಂಬ ಮಾತುಗಳು ಈಗಾಗಲೇ ಕೇಳಿ ಬರುತ್ತಿದೆ.
First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...