ಫಾರ್ಮ್​ಹೌಸ್​ನಲ್ಲಿ ಕುಳಿತುಕೊಂಡು ಕಿರುಚಿತ್ರ ಮಾಡಲು ಹೊರಟ ಸಲ್ಲು ಭಾಯ್​​?

Salman Khan: ಸಲ್ಮಾನ್​ ಖಾನ್​ ಯ್ಯೂಟೂಬ್​ನಲ್ಲಿ ಖಾತೆಯೊಂದನ್ನು ತೆರೆದಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ ಭಾಯ್​ಜಾನ್ ಸ್ನೇಹಿತರೊಂದಿಗೆ ಸೇರಿಕೊಂಡು​ ಮೂರು ವಿಡಿಯೋ ಹಾಡುಗಳನ್ನು ರಚಿಸಿ ಬಿಡುಗಡೆ ಮಾಡಿದ್ದರು. ತೇರೆ ಬಿನಾ, ಪ್ಯಾರ್​ ಕೊರೋನಾ, ಭಾಯ್​ ಭಾಯ್​​ ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಸಲ್ಲು ಭಾಯ್​ ಕರುಚಿತ್ರ ತಯಾರಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

news18-kannada
Updated:June 9, 2020, 3:09 PM IST
ಫಾರ್ಮ್​ಹೌಸ್​ನಲ್ಲಿ ಕುಳಿತುಕೊಂಡು ಕಿರುಚಿತ್ರ ಮಾಡಲು ಹೊರಟ ಸಲ್ಲು ಭಾಯ್​​?
ಸಲ್ಮಾನ್​ ಖಾನ್​
  • Share this:
ಕೊರೋನಾ ಲಾಕ್​ಡೌನ್​ ಪ್ರಾರಂಭವಾಗಿನಿಂದ ನಟ ಸಲ್ಮಾನ್​ಖಾನ್ ತಮ್ಮ​  ಫಾರ್ಮ್​ಹೌಸ್​ನಲ್ಲಿಯೇ ಉಳಿದುಕೊಂಡಿದ್ದಾರೆ. ಅಲ್ಲಿಯೇ ಇದ್ದುಕೊಂಡು ಮೂರು ಹಾಡುಗಳನ್ನು ರಚಿಸಿ ತಮ್ಮ ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳಿಂದ ಸಲ್ಲುಭಾಯ್​ ಮೂರು ಹಾಡಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಫಾರ್ಮ್​ಹೌಸ್​​ನಲ್ಲಿಯೇ ಕುಳಿತುಕೊಂಡು ಕಿರುಚಿತ್ರ ಮಾಡಲು ಮುಂದಾಗಿದ್ದಾರಂತೆ!.

ಸಲ್ಮಾನ್​ ಖಾನ್​ ಯ್ಯೂಟೂಬ್​ನಲ್ಲಿ ಖಾತೆಯೊಂದನ್ನು ತೆರೆದಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ ಭಾಯ್​ಜಾನ್ ಸ್ನೇಹಿತರೊಂದಿಗೆ ಸೇರಿಕೊಂಡು​ ಮೂರು ವಿಡಿಯೋ ಹಾಡುಗಳನ್ನು ರಚಿಸಿ ಬಿಡುಗಡೆ ಮಾಡಿದ್ದರು. ತೇರೆ ಬಿನಾ, ಪ್ಯಾರ್​ ಕೊರೋನಾ, ಭಾಯ್​ ಭಾಯ್​​ ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಸಲ್ಲು ಭಾಯ್​ ಕರುಚಿತ್ರ ತಯಾರಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಕಿರುಚಿತ್ರಕ್ಕಾಗಿ ಸಲ್ಮಾನ್​ ಜೊತೆಗೆ ಮಲುಶಾ ಡಿ ಸೋಜ ಕೈ ಜೋಡಿಸಲಿದ್ದಾರಂತೆ. ಆದರೆ ಈ ಬಗ್ಗೆ ಸಲ್ಲು ಭಾಯ್​​ ಅಧಿಕೃತವಾಗಿ ಎಲ್ಲೂ ಹೆಳಿಕೊಂಡಿಲ್ಲ.

ಇತ್ತೀಚೆಗೆ ಸಲ್ಲು ಭಾಯ್​ ಲಾಕ್​​​​ಡೌನ್ ​ದಿನಗಳನ್ನು ಫಾರ್ಮ್​ ಹೌಸ್​​ನಲ್ಲಿ ಕಳೆಯುತ್ತಿದ್ದೇನೆ. ಇಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಯಾವುದಾದರು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗಾಗಿ ಹಾಡುಗಳನ್ನು ಮಾಡಲು ನಿರ್ಧರಿಸಿ ಬಿಡುಗಡೆ ಮಾಡಿದೆವು. ಅನೇಕರು ಸಲ್ಮಾನ್​​ ಖಾನ್​ ಯ್ಯೂಟೂಬ್​ ಖಾತೆಯಲ್ಲಿ ಬಿಡುಗಡೆಗೊಂಡ ಹಾಡುಗಳನ್ನು ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದ್ದರು. ಇದೀಗ ಸಲ್ಮಾನ್​ ಖಾನ್​​ ಕಿರುಚಿತ್ರದತ್ತ ಚಿತ್ತ ಹರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಟಿಕ್​​ಟಾಕ್​ನಲ್ಲಿ ಧೂಳೆಬ್ಬಿಸಿದ ಹೈದರಾಬಾದ್​​ ತಂಡದ ನಾಯಕ; ಎರಡು ತಿಂಗಳಿನಲ್ಲಿ 40 ಲಕ್ಷ ಫಾಲೋವರ್ಸ್​​​​​​
First published: June 9, 2020, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading