ಬಾಲಿವುಡ್ (Bollywood) ಭಜರಂಗಿ ಭಾಯ್ಜಾನ್ ಸಲ್ಮಾನ್ ಖಾನ್ (Salman Khan) ಅವರಿಗೆ ಇಂದು ಹುಟ್ಟುಬ್ಬದ ಸಂಭ್ರಮ. 56ನೇ ವಸಂತಕ್ಕೆ ಸಲ್ಲು ಕಾಲಿಟಿದ್ದಾರೆ. 1988ರಲ್ಲಿ ಸಲ್ಮಾನ್ ಖಾನ್ ‘ಬಿವಿ ಹೊ ತೊ ಐಸಿ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಸಲ್ಮಾನ್, ಮೈನೆ ಪ್ಯಾರ್ ಕಿಯಾ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾಗಿ ಎಂಟ್ರಿಯಾದರ. ಅದಾದ ಮೇಲೆ ಸಲ್ಲು ಬರೆದಿದ್ದಲ್ಲಾ ಇತಿಹಾಸ. ಅವರ ದಾಖಲೆಗಳನ್ನು ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಿಲ್ಲ. ನಿನ್ನೆ, ಸಲ್ಮಾನ್ ಖಾನ್ ಅಭಿಮಾನಿಗಳು ಗಾಬರಿಗೊಂಡಿದ್ದರು. ಇದೇನಪ್ಪಾ, ಹುಟ್ಟುಹಬ್ಬ (Birthday)ಕ್ಕೆ ಒಂದು ದಿನ ಇರುವಾಗಲೇ ಸಲ್ಮಾನ್ ಖಾನ್ ಆಸ್ಪತ್ರೆ ಸೇರಿದ್ದಾರೆ ಎಂದು ಟೆನ್ಶನ್ (Tension) ಆಗಿದ್ದರು. ಸಲ್ಮಾನ್ ಖಾನ್ ಫಾರ್ಮ್ಹೌಸ್ನಲ್ಲಿ ಶನಿವಾರ ತಡರಾತ್ರಿ ಅವರಿಗೆ ಹಾವು ಕಚ್ಚಿತ್ತು(Snake Bite). ಹೀಗಾಗಿ ಅವರು ಆಸ್ಪತ್ರೆ ಸೇರಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಸಲ್ಲು ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸದ್ಯ ಸಲ್ಲು ಭಾಯ್ ತಮ್ಮ ಫಾರ್ಮ್ ಹೌಸ್ನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸಲ್ಲುಗೆ 3 ಬಾರಿ ಕಚ್ಚಿತ್ತಂತೆ ಹಾವು!
ಸಲ್ಮಾನ್ ಖಾನ್ ಅವರಿಗೆ ಮೂರು ಬಾರಿ ಹಾವು ಕಚ್ಚಿತ್ತು ಎಂಬ ಮಾಹಿತಿ ದೊರಕಿದೆ. ಫಾರ್ಮ್ಹೌಸ್ನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಲ್ಮಾನ್ ಖಾನ್ ಪ್ಲ್ಯಾನ್ ಮಾಡಿಕೊಂಡಿದ್ದರಂತೆ. ಹೀಗಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಫಾರ್ಮ್ಹೌಸ್ಗೆ ಕರೆದಿದ್ದರು. ಹೀಗೆ ಅವರ ಜೊತೆ ಟೈಮ್ ಪಾಸ್ ಮಾಡುವ ವೇಳೆ ಅಲ್ಲಿ ವಿಷ ರಹಿತ ಹಾವೊಂದು ಅಲ್ಲಿಗೆ ಬಂದಿದೆ. ಇದನ್ನು ಸಲ್ಮಾನ್ ಖಾನ್ ಕೋಲಿನಿಂದ ಓಡಿಸಿದ್ದಾರೆ. ಆದರೆ, ಇದ್ದಕಿದ್ದ ಹಾಗೇ ಹಾವು ಮತ್ತೆ ಬಂದಿದೆ. ಇದನ್ನು ಸಲ್ಮಾನ್ ಖಾನ್ ಕೈಯಲ್ಲಿ ಹಿಡಿದಿದ್ದ ವೇಳೆ ಮೂರು ಬಾರಿ ಹಾವು ಕಚ್ಚಿದೆ ಎಂಬ ಮಾಹಿತಿ ತಿಳಿದು ಬಂದಿದೆ. 6 ಗಂಟೆ ಆಸ್ಪ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ಸಲ್ಮಾನ್ ಖಾನ್ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದಾರಂತೆ.
ಇದನ್ನು ಓದಿ:ಹಾವು ಕಚ್ಚಿದ್ದಕ್ಕೆ ಆಸ್ಪತ್ರೆ ಸೇರಿದ ಸಲ್ಮಾನ್ ಖಾನ್: ಈಗ ಭಾಯ್ಜಾನ್ ಸ್ಥಿತಿ ಹೇಗಿದೆ?
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್!
ಇನ್ನೂ ಸಲ್ಮಾನ್ ಖಾನ್ ಅವರನ್ನು ಮುಂಬೈನ ಕಮೋಥೆಯಯ ಮಹಾತ್ಮ ಗಾಂಧಿ ಮಿಷನ್ (Mahatma Gandhi Mission) ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಲ್ಲಿ ಸಲ್ಲು ಭಾಯ್ ಚಿಕಿತ್ಸೆ ಪಡೆಯುತ್ತಿರುವ ಫೋಟೊಗಳು ಸಖತ್ ವೈರಲ್ ಆಗಿದೆ. ಆರಾಮಾಗಿ ಸಲ್ಲು ಬೆಡ್ ಮೇಲೆ ಶ್ರೀರಂಗನಾಥನಂತೆ ಮಲಗಿರುವ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
This picture of Salman Khan from the hospital where he was being taken after snake bite is going VIRAL on social media. We wish the actor a speedy recovery!@BeingSalmanKhan pic.twitter.com/Yhob0vqn7L
— BombayTimes (@bombaytimes) December 26, 2021
ಇದನ್ನು ಓದಿ: 56ನೇ ವಸಂತಕ್ಕೆ ಕಾಲಿಟ್ಟ ಭಜರಂಗಿ ಭಾಯ್ಜಾನ್: ಈ ವಯಸ್ಸಲ್ಲೂ ಸಖತ್ ಫಿಟ್ & ಫೈನ್!
ಹರಟೆ ಹೊಡೆಯುವಾಗ ಕಚ್ಚಿತ್ತು ಹಾವು!
ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ಅರಣ್ಯ ಪ್ರದೇಶದಲ್ಲಿದೆ. ವಿವಿಧ ಪಕ್ಷಿಗಳು ಮತ್ತು ಪ್ರಾಣಿಗಳೊಂದಿಗೆ ಅಪಾರವಾದ ಎಲೆಗಳು, ಸಸ್ಯ ಮತ್ತು ಪ್ರಾಣಿಗಳಿವೆ. ಘಟನೆ ನಡೆದಾಗ ಸಲ್ಮಾನ್ ಸ್ನೇಹಿತರೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದರು ಎಂದು ಮೂಲವೊಂದು ಬಹಿರಂಗಪಡಿಸಿದೆ. ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯಲ್ಲಿರುವ ಪನ್ವೇಲ್ನಲ್ಲಿ ಸಲ್ಮಾನ್ ಖಾನ್ ಅವರು ಫಾರ್ಮ್ಹೌಸ್ ಹೊಂದಿದ್ದಾರೆ. ಶೂಟಿಂಗ್ ಇಲ್ಲದಿರುವಾಗ ಅವರು ಹೆಚ್ಚಾಗಿ ತಮ್ಮ ಫಾರ್ಮ್ಹೌಸ್ನಲ್ಲಿಯೇ ಕಾಲ ಕಳೆಯುತ್ತಾರೆ. ಮೊದಲ ಬಾರಿ ಲಾಕ್ಡೌನ್ ಆದಾಗಲೂ ಅವರು ಈ ಫಾರ್ಮ್ಹೌಸ್ನಲ್ಲಿ ವಾಸವಾಗಿದ್ದರು. ಶನಿವಾರ (ಡಿ.25) ಕೂಡ ಸಲ್ಲು ಅಲ್ಲಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ