Salman Khan: ತನ್ನ Longest Relationship ಬಗ್ಗೆ ರಿವೀಲ್ ಮಾಡಿದ ಬಾಲಿವುಡ್​ ನಟ ಸಲ್ಮಾನ್ ಖಾನ್

Salman Khan About Bigboss: ನಾನು ಈ ಕಾರ್ಯಕ್ರಮವನ್ನು ಬಹಳ ಇಷ್ಟಪಡುತ್ತೇನೆ. ಈ ಕಾರ್ಯಕ್ರಮದಿಂದ ನಾನು ಬಹಳಷ್ಟು ಕಲಿಯಲು ಸಾಧ್ಯವಿದೆ. ಇದು ನನ್ನ ತಾಳ್ಮೆಯನ್ನು  ಹೆಚ್ಚು ಮಾಡುತ್ತದೆ. ಪ್ರತಿ ಬಾರಿ ನಾನು ನನ್ನ ತಾಳ್ಮೆಯನ್ನು  ಕಳೆದುಕೊಂಡಾಗ, ನಾನು ಅದನ್ನು ಕಳೆದುಕೊಳ್ಳಬಾರದೆಂದು ಬಯಸುತ್ತೇನೆ. ನಂತರ ನಾನು ಹೆಚ್ಚು ತಾಳ್ಮೆಯಿಂದಿರಲು ಬಯಸುತ್ತೇನೆ ಎಂದಿದ್ದಾರೆ.

ಬಿಗ್​ಬಾಸ್​ 15 ಪೋಸ್ಟರ್​

ಬಿಗ್​ಬಾಸ್​ 15 ಪೋಸ್ಟರ್​

  • Share this:
ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ವಿಭಿನ್ನ ಚಿತ್ರಗಳ ಮೂಲಕ ಮನೆಮಾತಾದವರು. ಕೇವಲ ಚಿತ್ರಗಳು ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲಿ ಸಹ ನಿರೂಪಣೆ ಮಾಡುತ್ತಾರೆ.  ಹಾಗೆಯೇ ಅವರು ತಮ್ಮ ಪ್ರೇಮ ಸಂಬಂಧ ಹಾಗೂ ಬ್ರೇಕಪ್ ವಿಚಾರವಾಗಿ ಸಹ ಹೆಚ್ಚು ಸುದ್ದಿಯಲ್ಲಿದ್ದರು. ಆದರೆ ಇತ್ತಿಷೆಗಷ್ಟೇ  ಸಲ್ಮಾನ್ ಖಾನ್ ತನ್ನ  ಬದುಕಿನ ಬಗ್ಗೆ  ಹಾಸ್ಯ ಚಟಾಕಿ ಹಾರಿಸುತ್ತಾ, ತನ್ನ ಬಿಗ್ ಬಾಸ್(Bigboss) ರಿಯಾಲಿಟಿ ಶೋ ಜೊತೆ ತನ್ನ ಸುದೀರ್ಘ ಸಂಬಂಧ ಹೊಂದಿದ್ದೇನೆ ಎಂದು ಹೇಳಿದರು. 2010 ರಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ 4 ನೊಂದಿಗೆ ಸಂಬಂಧ  ಆರಂಭವಾದ ನಂತರ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಬಿಗ್ ಬಾಸ್  ಸೀಸನ್ 15 ಅಕ್ಟೋಬರ್ 2 ರಂದು  ಆರಂಭವಾಗಲಿದ್ದು, ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಗುರುವಾರ ಸಂಜೆ ನಡೆದ ವಿಶೇಷ  ಸುದ್ಧಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ವಿಶೇಷ  ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ  ನಡೆದ ಈ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ತೋರಿಸಿದ ವಿಡಿಯೋದಲ್ಲಿ ಬಿಗ್ ಬಾಸ್ ನೊಂದಿಗಿನ ನನ್ನ ಸಂಬಂಧ ವಿಶೇಷವಾಗಿದ್ದು. ನನ್ನ ಸಂಬಂಧಗಳಲ್ಲಿ ಹೆಚ್ಚು ಕಾಲ ಉಳಿದ ಸಂಬಂ ಎಂದರೆ ಅದು ಬಿಗ್​ ಬಾಸ್ ಜೊತೆ ಎಂದಿದ್ದಾರೆ.  ಕೆಲವು ಸಂಬಂಧಗಳು ಜೀವನವನ್ನು ಬದಲಾಯಿಸುತ್ತವೆ. ಬಿಗ್ ಬಾಸ್ ನನ್ನ ಜೀವನದಲ್ಲಿ ಕೆಲವು ಶಾಶ್ವತ ಜನರನ್ನು ತಂದಿದೆ. ಕಾರ್ಯಕ್ರಮದ ನಂತರ ನಾವು ಮತ್ತೆ ಒಂದಾಗಲು ಹಪಹಪಿಸುತ್ತೇವೆ ಎಂದಿದ್ದಾರೆ.

ಈ ವರ್ಷದ ಕಾರ್ಯಕ್ರಮದ 'ಜಂಗಲ್' ಥೀಮ್ ಬಗ್ಗೆ ಮಾತನಾಡುತ್ತಾ, ಸಲ್ಮಾನ್ , ಈ ಸೀಸನ್ ಬಗ್ಗೆ ಹೇಳಬೇಕೆಂದರೆ ನನಗೆ  ಒಂದು ಹಾಡು ನೆನಪಾಗುತ್ತದೆ.  ಜಂಗಲ್ ಹೈ ಆದಿ ರಾತ್ ಹೈ.  ನಾಟ್ ಸುಲ್ತಾನ್ ವಾಲಾ ದಂಗಲ್ , ನಾಟ್ ದಂಗಲ್ ವಾಲಾ ದಂಗಲ್, ಆದರೆ ಅದು ಬೇರೆ ದಂಗಲ್ ಆಗಿರುತ್ತದೆ ಎಂದು ಹಾಡನ್ನು ನೆನಪಿಸಿಕೊಂಡಿದ್ದಾರೆ.  250 ಕ್ಯಾಮೆರಾಗಳು ಕಾಡಿನಲ್ಲಿನ ಪ್ರತಿಯೊಂದು ಚಲನೆಯನ್ನು ನೋಡುತ್ತವೆ. ಬಿಗ್ ಬಾಸ್ 15 ಈ ಬಾರಿ ಐದು ತಿಂಗಳು ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ಧವಾಗುತ್ತಿದೆ ಸಲ್ಮಾನ್ ಸಿನಿ ಜರ್ನಿಯ Document - Series

ನಾನು ಈ ಕಾರ್ಯಕ್ರಮವನ್ನು ಬಹಳ ಇಷ್ಟಪಡುತ್ತೇನೆ. ಈ ಕಾರ್ಯಕ್ರಮದಿಂದ ನಾನು ಬಹಳಷ್ಟು ಕಲಿಯಲು ಸಾಧ್ಯವಿದೆ. ಇದು ನನ್ನ ತಾಳ್ಮೆಯನ್ನು  ಹೆಚ್ಚು ಮಾಡುತ್ತದೆ. ಪ್ರತಿ ಬಾರಿ ನಾನು ನನ್ನ ತಾಳ್ಮೆಯನ್ನು  ಕಳೆದುಕೊಂಡಾಗ, ನಾನು ಅದನ್ನು ಕಳೆದುಕೊಳ್ಳಬಾರದೆಂದು ಬಯಸುತ್ತೇನೆ. ನಂತರ ನಾನು ಹೆಚ್ಚು ತಾಳ್ಮೆಯಿಂದಿರಲು ಬಯಸುತ್ತೇನೆ.  ಆದರೆ ಕಾರ್ಯಕ್ರಮದ ಸ್ವರೂಪವು ಇರುವುದು ಹಾಗೆ.  ಏನಾದರೂ ಆಗುತ್ತಲೇ ಇರುತ್ತದೆ ಮತ್ತು ನಂತರ ನಾನು ಹೋಗಿ  ಅದನ್ನು ಸರಿಪಡಿಸಬೇಕು. ಆದ್ದರಿಂದ ನೀವು ಬಹಳಷ್ಟು ಕಲಿಯುವುದು ಮಾತ್ರವಲ್ಲದೆ ಅನೇಕ ಹೊಸ ಜನರನ್ನು ಭೇಟಿ ಮಾಡಬಹುದು, ಅವರ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು, ಎಂದು ಹೇಳಿದ್ದಾರೆ.

ಸಲ್ಮಾನ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ, ಟೈಗರ್ 3 ಚಿತ್ರಕ್ಕಾಗಿ ಆಸ್ಟ್ರಿಯಾದಲ್ಲಿ ಕತ್ರಿನಾ ಕೈಫ್ ಜೊತೆ ಚಿತ್ರೀಕರಣದಲ್ಲಿದ್ದಾರೆ. ಮುಂದಿನ ವಾರದ ಆರಂಭದಲ್ಲಿ ತಾನು ಮುಂಬೈಗೆ ಹಿಂದಿರುಗಲಿದ್ದೇನೆ ಮತ್ತು ಬಿಗ್ ಬಾಸ್ 15 ರ ಚಿತ್ರೀಕರಣವನ್ನು ಪ್ರಾರಂಭಿಸುತ್ತೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ನಾನು ಸೆಪ್ಟೆಂಬರ್ 27 ಅಥವಾ 28 ರಂದು ಮುಂಬೈಗೆ ಮರಳುತ್ತೇನೆ ಎಂದು ಅವರು  ತಿಳಿಸಿದ್ದಾರೆ.

ಟೈಗರ್ 3 ಚಿತ್ರದಲ್ಲಿ  ಸಲ್ಮಾನ್ ರಾ ಏಜೆಂಟ್ ಅವಿನಾಶ್ ಸಿಂಗ್ ರಾಥೋರ್ ಅಕಾ ಟೈಗರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕತ್ರಿನಾ ಅವರ ಜೊತೆ ಜೋಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Samantha ಕುರಿತಾಗಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ Naga Chaitanya

ಇತ್ತೀಚೆಗಷ್ಟೇ ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಚಿತ್ರರಂಗದ  ಪ್ರಯಾಣವನ್ನು  ಡಾಕ್ಯುಮೆಂಟ್-ಸರಣಿ ಮಾಡಲು ಯೋಜನೆ ನಡೆಯುತ್ತಿದೆ ಎಂದು ವರದಿಯಾಗಿದೆ. ಸುದ್ದಿ ವೆಬ್‌ಸೈಟ್‌ನ ಪ್ರಕಾರ, ಸಲ್ಮಾನ್ ಅವರ ಬಾಲಿವುಡ್‌ನಲ್ಲಿ ಮೂರು ದಶಕಗಳ ಸುದೀರ್ಘ ಪ್ರಯಾಣ,  ಅವರ ಕುಟುಂಬ, ಅವರ ಸಹನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ಸಹೋದ್ಯೋಗಿಗಳ ಸಂದರ್ಶನಗಳನ್ನು ಒಳಗೊಂಡಿರುವ ಸರಣಿಯನ್ನು ತಯಾರು ಮಾಡಲು ನಿರ್ಧರಿಸಲಾಗಿದೆ
Published by:Sandhya M
First published: