Salman Khan: ಸಲ್ಲು ಸಿನಿ ಪಯಣಕ್ಕೆ 34 ವರ್ಷ! ಬ್ಯಾಡ್ ಬಾಯ್ ಮುಂದಿನ ಚಿತ್ರದ ಫಸ್ಟ್ ಲುಕ್ ರಿಲೀಸ್

ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ತಮ್ಮ ಮುಂದಿನ ಸಿನಿಮಾ 'ಕಿಸಿ ಕ ಭಾಯ್ ಕಿಸಿ ಕಿ ಜಾನ್' ಚಿತ್ರದ ಫಸ್ಟ್ ಲುಕ್ ವಿಡಿಯೋ ಹಂಚಿಕೊಂಡು, ವಿಶೇಷ ಸಂದೇಶ ಬರೆದುಕೊಂಡಿದ್ದಾರೆ.

ಸನ್ಮಾನ್​ ಖಾನ್​

ಸನ್ಮಾನ್​ ಖಾನ್​

  • Share this:
ಬಾಲಿವುಡ್​​ ಬ್ಯಾಡ್ ಬಾಯ್​ ಸಲ್ಮಾನ್ ಖಾನ್ (Salman Khan)​ ಬಣ್ಣದ ಲೋಕಕ್ಕೆ ಕಾಲಿಟ್ಟು 34 ವರ್ಷ (34 Years) ಕಂಪ್ಲೀಟ್​ ಆಗಿದೆ. ಇದೇ ಖುಷಿಯಲ್ಲಿರೋ ಸನ್ಮಾನ್​ ಖಾನ್​ ತಮ್ಮ ಮುಂದಿನ ಚಿತ್ರದ ಹೆಸರನ್ನು ಘೋಷಣೆ ಮಾಡಿದ್ದಾರೆ. ಕಾಮಿಡಿ, ಆ್ಯಕ್ಷನ್, ಡ್ರಾಮಾ ಎಲ್ಲ ರೀತಿಯ ಸಿನಿಮಾ ಮಾಡಿ ಯಶಸ್ಸು ಪಡೆದಿರೋ ನಟ ತಮ್ಮ ಮುಂದಿನ ಚಿತ್ರ (Salman Next Movie) ಹೆಸರು 'ಕಿಸಿ ಕಾ ಭಾಯ್.. ಕಿಸಿ ಕಿ ಜಾನ್'(Kisi Ka Bhai.. Kisi Ki Jaan) ಎಂದು ತಿಳಿಸಿದ್ದಾರೆ.

ಸಲ್ಲು ಹೊಸ ಚಿತ್ರ ಘೋಷಣೆ

ಟ್ವಿಟರ್​​ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಸಲ್ಮಾನ್‌​​, ತಮ್ಮ ಅಭಿಮಾನಿಗಳಿಂದ ಸಿಗುತ್ತಿರುವ ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಆಗಸ್ಟ್​​ 26, 1988ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದ ಸಲ್ಲು, ಬಿವಿ ಹೋ ತೋ ಐಸಿ ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ 1989ರಲ್ಲಿ ಮೈನೆ ಪ್ಯಾರ್​ ಕಿಯಾದಲ್ಲಿ ಅದ್ಭುತವಾಗಿ ನಟಸಿ ಗಮನ ಸೆಳೆದಿದ್ದರು.





ಸಿನಿ ಪಯಣವನ್ನು ನೆನೆದು ಸಲ್ಮಾನ್

34 ವರ್ಷದ ಸಿನಿಮಾ ಪಯಣವನ್ನು ನೆನೆದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ. "34 ವರ್ಷಗಳ ಹಿಂದೆ ಈಗ ಮತ್ತು 34 ವರ್ಷಗಳ ನಂತರವೂ, ನನ್ನ ಜೀವನದ ಪ್ರಯಾಣವು 2 ಪದಗಳಿಂದ ಆಗಿದೆ. ಆಗ ನನ್ನೊಂದಿಗೆ ಇದ್ದಿದ್ದಕ್ಕಾಗಿ ಧನ್ಯವಾದಗಳು ಮತ್ತು ನನ್ನೊಂದಿಗೆ ಈಗ ಇರುವುದಕ್ಕಾಗಿ ಧನ್ಯವಾದಗಳು. ಈಗ ಅದನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ." ಎಂದು ಬರೆದುಕೊಂಡಿದ್ದಾರೆ.

ಸೂಪರ್​ ಹಿಟ್​ ಸಿನಿಮಾ ನೀಡಿದ ಸಲ್ಲು

ಹಮ್‌ ಅಪ್ಕೆ ಹೈ ಕೌನ್‌, ಸಾಜನ್, ಖಾಮೋಶಿ, ಹಮ್‌ ದಿಲ್‌ ದೆ ಚುಕೆ ಸನಮ್‌, ಹರ್‌ ದಿಲ್‌ ಜೊ ಪ್ಯಾರ್ ಕರೆಗಾ, ಚೋರಿ ಚೋರಿ ಚುಪ್ಕೆ ಚುಪ್ಕೆ, ತೇರೆ ನಾಮ್‌, ಬಾಡಿ ಗೌರ್ಡ್, ಟೈಗರ್, ಭಜರಂಗಿ ಬಾಯಿಜಾನ್ ಸೇರಿ ಹಲವು ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ.






ಸಲ್ಲು ಜೀವನದಲ್ಲಿನ ಕಪ್ಪು ಚುಕ್ಕೆ

ತಮ್ಮ ಜೀವನದಲ್ಲಿ ಸಂಗೀತ ಬಿಜಲಾನಿ, ಐಶ್ವರ್ಯ ರೈ, ಕತ್ರಿನಾ ಕೈಫ್ ಸೇರಿ ಹಲವು ನಟಿಯರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದ ಸಲ್ಲು, ಇಂದಿಗೂ ಕೂಡ ವಿವಾಹ ಬಂಧನಕ್ಕೆ ಒಳಗಾಗದೆ ಬಾಲಿವುಡ್​​ ಬ್ಯಾಚುಲರ್ ಆಗಿದ್ದಾರೆ. ರಾಜಸ್ಥಾನದಲ್ಲಿ ಸಿನಿಮಾ ಶೂಟಿಂಗ್ ವೇಳೆ ಕೃಷ್ಣ ಮೃಗ ಬೇಟೆಯಾಡಿದ್ದು, ಬೇಕರಿ ಮುಂದೆ ಮಲಗಿದದ್ದವರ ಮೇಲೆ ಕಾರು ಹತ್ತಿಸಿ ಹಿಟ್ ಅಂಡ್ ರನ್ ಮಾಡಿದ್ದು ಅವರ ವೃತ್ತಿ ಜೀವನದಲ್ಲಿ ಕಪ್ಪು ಚುಕ್ಕೆಗಳಾಗಿಯೇ ಉಳಿದಿವೆ.

ಬರಲಿದೆ ನೋ ಎಂಟ್ರಿ ಪಾರ್ಟ್​ 2

2005 ರಲ್ಲಿ ತೆರೆಕಂಡು ಬಾಲಿವುಡ್​ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ ನೋ ಎಂಟ್ರಿ ಸಿನಿಮಾ ನಿಮಗೆ ನೆನಪಿರಬಹುದು. ಸಲ್ಮಾನ್ ಖಾನ್ (Salman Khan), ಅನಿಲ್ ಕಪೂರ್ ಹಾಗೂ ಫರ್ದೀನ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಹಾಸ್ಯಭರಿತ ಚಿತ್ರದ 2ನೇ ಭಾಗವನ್ನು ತೆರೆಗೆ ತರಲು ಇದೀಗ ಚಿತ್ರತಂಡ ಮುಂದಾಗಿದೆ. ಇವರಿಗಾಗಿ ಒಟ್ಟು 10 ನಾಯಕಿಯರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: Puneeth Rajkumar: ಆಕಾಶದಲ್ಲೂ ಮಿನುಗಲಿದೆ ಪವರ್ 'ಸ್ಟಾರ್; ಈ ವರ್ಷವೇ ನಭಕ್ಕೆ ಹಾರಲಿದೆ ಪುನೀತ್ ಉಪಗ್ರಹ

ತ್ರಿಪಾತ್ರದಲ್ಲಿರುವ ನಾಯಕರುಗಳಿಗೆ ಬೇರೆ ಬೇರೆ ನಾಯಕಿಯರು ಇರಲಿದ್ದಾರೆ. ಒಂದೊಂದು ಪಾತ್ರಕ್ಕೆ ಬೇರೆ ಬೇರೆ ನಾಯಕಿಯರಂತೆ ಒಟ್ಟು 9 ಹೀರೋಯಿನ್ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ವಿಶೇಷ ಪಾತ್ರದಲ್ಲಿ ಇನ್ನೊಬ್ಬರು ನಾಯಕಿ ಎಂಟ್ರಿ ಕೊಡಲಿದ್ದಾರೆ. ಈ ಮೂಲಕ ನೋ ಎಂಟ್ರಿ ಮೇ ಎಂಟ್ರಿ ಚಿತ್ರದಲ್ಲಿ ಒಟ್ಟು 10 ಹೀರೋಯಿನ್​ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಬಿಟೌನ್​ನಿಂದ ಹೊರಬಿದ್ದಿದೆ.
Published by:Pavana HS
First published: