Salman Khan: ಆರ್ಥಿಕ ಸಂಕಷ್ಟದಲ್ಲಿ ಬಾಲಿವುಡ್  ಬ್ಯಾಡ್ ಬಾಯ್?

Salman khan: ಡಿಸೆಂಬರ್ 6ರಂದು ಗೆಲಾಕ್ಸಿ ಅಪಾರ್ಟ್‌ಮೆಂಟ್ 33 ತಿಂಗಳ ಬಾಡಿಗೆ ಕರಾರಿನೊಂದಿಗೆ ನೋಂದಣಿಗೊಂಡಿದೆ. ದಾಖಲೆಗಳ ಪ್ರಕಾರ ಬಾಡಿಗೆದಾರರು 2.85 ಲಕ್ಷ ರೂ. ಅನ್ನು ಮುಂಗಡವಾಗಿ ಪಾವತಿಸಿದ್ದಾರೆ.

ಸಲ್ಮಾನ್‌ ಖಾನ್

ಸಲ್ಮಾನ್‌ ಖಾನ್

  • Share this:
ಬಾಲಿವುಡ್ ಬ್ಯಾಡ್ ಬಾಯ್ (Bollywood Bad Boy) ಆರ್ಥಿಕ ಸಂಕಷ್ಟದಲ್ಲಿದ್ದಾರೆಯೇ..? ಇಂತಹದೊಂದು ಪ್ರಶ್ನೆಗೆ ಕಾರಣವಾಗಿದೆ ಇತ್ತೀಚಿನ ವಿದ್ಯಮಾನ! ಹೌದು!! ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಹೆಸರಾಗಿರುವ ಚಿರ ಯುವಕ ಸಲ್ಮಾನ್ ಖಾನ್ (Salman Khan) ಮುಂಬೈನ ( Mumbai.) ಬಾಂದ್ರಾದಲ್ಲಿರುವ ತಮ್ಮ ಅಪಾರ್ಟ್ ಮೆಂಟ್‌ನ ಒಂದು ಭಾಗವನ್ನು ಬಾಡಿಗೆಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಬಾಂದ್ರಾದಲ್ಲಿರುವ ಗೆಲಾಕ್ಸಿ ಅಪಾರ್ಟ್ ಮೆಂಟ್‌ನ( Galaxy Apartments) 758 ಚದರ ಅಡಿ ಭಾಗವನ್ನು ಸಲ್ಮಾನ್ ಖಾನ್ ಬಾಡಿಗೆಗೆ (Rented) ನೀಡಿದ್ದಾರೆ. ಇದು ಬಾಲಿವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಗೆಲಾಕ್ಸಿ ಅಪಾರ್ಟ್‌ಮೆಂಟ್‌
ಪಶ್ಚಿಮ ಮುಂಬೈನ ಬಾಂದ್ರಾದಲ್ಲಿ ಸಲ್ಮಾನ್ ಖಾನ್ ಶಿವ್ ಆಸ್ತಾನ ಹೈಟ್ಸ್ ಎಂಬ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಈ ಅಪಾರ್ಟ್‌ಮೆಂಟ್‌ನ 758 ಚದರ ಅಡಿ ಭಾಗವನ್ನು ಇದೀಗ ಮಾಸಿಕ 95,000 ರೂ. ಬಾಡಿಗೆಗೆ ನೀಡಲಾಗಿದೆ ಎಂದು ವರದಿಯಾಗಿದೆ.ಬಾಡಿಗೆಗೆ ನೀಡಿರುವ ಅಪಾರ್ಟ್‌ಮೆಂಟ್ 14ನೇ ಅಂತಸ್ತಿನಲ್ಲಿದ್ದು, 758 ಚದರ ಅಡಿ ಅಳತೆ ಹೊಂದಿದೆ. ಸ್ವತಃ ಸಲ್ಮಾನ್ ಖಾನ್ ಬಾಂದ್ರಾದಲ್ಲಿನ ಗೆಲಾಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: 25 ವರ್ಷದ ಬಳಿಕ ಬಾಲಿವುಡ್​ಗೆ ವಿಕ್ಟರಿ ವೆಂಕಟೇಶ್​: ಸಲ್ಮಾನ್​ ಖಾನ್​ ಜೊತೆ ಹೊಸ ಸಿನಿಮಾ ಅನೌನ್ಸ್​!

2.85 ಲಕ್ಷ ರೂ. ಅನ್ನು ಮುಂಗಡವಾಗಿ ಪಾವತಿ
ಮನಿ ಕಂಟ್ರೋಲ್ ವರದಿ ಮಾಡಿರುವ ಪ್ರಕಾರ, Zapkey.comಗೆ ಲಭ್ಯವಾಗಿರುವಂತೆ ಡಿಸೆಂಬರ್ 6ರಂದು ಗೆಲಾಕ್ಸಿ ಅಪಾರ್ಟ್‌ಮೆಂಟ್ 33 ತಿಂಗಳ ಬಾಡಿಗೆ ಕರಾರಿನೊಂದಿಗೆ ನೋಂದಣಿಗೊಂಡಿದೆ. ದಾಖಲೆಗಳ ಪ್ರಕಾರ ಬಾಡಿಗೆದಾರರು 2.85 ಲಕ್ಷ ರೂ. ಅನ್ನು ಮುಂಗಡವಾಗಿ ಪಾವತಿಸಿದ್ದಾರೆ. ಈ ಕರಾರಿನ ಪ್ರಕಾರ, ಪ್ರತಿ ವರ್ಷ ಶೇ. 5ರಷ್ಟು ಬಾಡಿಗೆ ಏರಿಕೆಯಾಗಲಿದೆ.

ಅಪಾರ್ಟ್‌ಮೆಂಟ್‌ನ ಕರಾರ ನವೀಕರಣ
ಸಲ್ಮಾನ್ ಖಾನ್ ಮುಂಬೈನ ಆಸುಪಾಸು ಕೆಲವು ಆಸ್ತಿಗಳನ್ನು ಹೊಂದಿದ್ದಾರೆ. ಇದಕ್ಕೂ ಮುನ್ನ ಬಾಂದ್ರಾದಲ್ಲೇ ಇರುವ ಡೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಒಂದನ್ನು ಮಾಸಿಕ 2.85 ಲಕ್ಷ ರೂ. ಗೆ ಬಾಡಿಗೆ ನೀಡಿದ್ದರು. ಈ ಬಾಡಿಗೆ ಕರಾರನ್ನು ಸಲ್ಮಾನ್ ಖಾನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮಾಡಿಕೊಂಡಿತ್ತು. ಸದರಿ ಅಪಾರ್ಟ್‌ಮೆಂಟ್ ಮಾಕ್ಬಾ ಅಪಾರ್ಟ್‌ಮೆಂಟ್‌ನಲ್ಲಿನ 17 ಮತ್ತು 18ನೇ ಅಂತಸ್ತಿನಲ್ಲಿದೆ. ದಾಖಲೆಗಳ ಪ್ರಕಾರ, ಈ ಅಪಾರ್ಟ್‌ಮೆಂಟ್‌ನ ಮಾಲೀಕರು ಬಾಬಾ ಸಿದ್ದಿಕ್ ಹಾಗೂ ಜೀಶಾನ್ ಸಿದ್ದಿಕ್ ಆಗಿದ್ದಾರೆ. ಈ ಅಪಾರ್ಟ್‌ಮೆಂಟ್‌ನ ಕರಾರನ್ನು ಈ ವರ್ಷದ ಆರಂಭದಲ್ಲಿ ಸಲ್ಮಾನ್ ಖಾನ್ ನವೀಕರಿಸಿದ್ದರು ಎನ್ನಲಾಗಿದೆ.

ಪನ್ವೇಲ್‌ನಲ್ಲೂ ಫಾರ್ಮ್ ಹೌಸ್
ಇದಕ್ಕೂ ಮುನ್ನ ಮಹೇಶ್ ಮಂಜ್ರೇಕರ್, ಸಲ್ಮಾನ್ ಖಾನ್ ತಮ್ಮ 1 ಬಿಎಚ್‍ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಇದರೊಂದಿಗೆ ಸಲ್ಮಾನ್ ಖಾನ್ ಮುಂಬೈನ ಹೊರವಲಯವಾದ ಪನ್ವೇಲ್‌ನಲ್ಲೂ ಫಾರ್ಮ್ ಹೌಸ್ ಹೊಂದಿದ್ದಾರೆ.

ಅಸಲಿ ಜೀವನ ಶೈಲಿ
ಸಿದ್ಧಾರ್ಥ್ ಕಣ್ಣನ್‌ಗೆ ನೀಡಿದ್ದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಕುರಿತು ಮಾತನಾಡಿದ್ದ ಮಹೇಶ್ ಮಂಜ್ರೇಕರ್, ನೀವು ಸಲ್ಮಾನ್ ಖಾನ್ ಎಲ್ಲಿ ವಾಸಿಸುತ್ತಾರೆ ಎಂದು ನೋಡಿಯೇ ಇರುತ್ತೀರಿ. ನನ್ನ ಪ್ರಕಾರ ಅವರು ಒಂದೇ ಬೆಡ್ ರೂಮ್ ಇರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ದಿನದ ಅರ್ಧ ಭಾಗ ಅವರು ಡ್ರಾಯಿಂಗ್ ರೂಂನ ಸೋಫಾ ಮೇಲೆಯೇ ಕುಳಿತಿರುವುದನ್ನು ನಾನು ನೋಡಿದ್ದೇನೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಯಾಕೆ ಮದುವೆ ಆಗುತ್ತಿಲ್ಲ?; ಅವರ ಭಾವ ಕೊಟ್ಟ ಕಾರಣ ಇದು

ಈ ವ್ಯಕ್ತಿಯ ಬಗ್ಗೆ ನಾನು ಹಲವು ಬಾರಿ ಚಿಂತಿತನಾಗಿದ್ದೇನೆ. ಯಶಸ್ಸಿನ ಮೇಲೆ ಯಶಸ್ಸು ಸಾಧಿಸಿದ್ದರೂ ಆತ ಮಾತ್ರ ಮಧ್ಯಮ ವರ್ಗದ ಜೀವನ ಸಾಗಿಸುತ್ತಿದ್ದಾರೆ. ಆತನ ಹಿಂದೆ ಜನರಿರಲಿ ಅಥವಾ ಇಲ್ಲದೆ ಇರಲಿ” ಎಂದು ಉದ್ಗಾರ ತೆಗೆದಿದ್ದಾರೆ. ಬಾಲಿವುಡ್ ಮಂದಿಯಿಂದ ಬ್ಯಾಡ್ ಬಾಯ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್‌ನ ಅಸಲಿ ಜೀವನ ಶೈಲಿಯಿದು!!!
Published by:vanithasanjevani vanithasanjevani
First published: